More

    ನರ್ಸ್​ ಕೆನ್ನೆಗೆ ಹೊಡೆದ ವೈರಲ್​ ವಿಡಿಯೋದಲ್ಲಿದ್ದ ಡಾಕ್ಟರ್​ ಶವ ಪತ್ತೆ! ಕುಟುಂಬದವರು ಹಾಗೆ ಮಾಡಿದ್ದಾದರೂ ಏಕೆ?

    ಲಖನೌ: ಇತ್ತೀಚೆಗೆ ಡಾಕ್ಟರ್​ ಮತ್ತು ನರ್ಸ್​ ಜಟಾಪಟಿಯ ಒಂದು ವೈರಲ್​ ವಿಡಿಯೋವನ್ನು ನೀವು ನೋಡಿರಬೇಕು. ಮೊದಲು ನರ್ಸ್​ ಡಾಕ್ಟರ್​ ಕೆನ್ನೆಗೆ ಹೊಡೆಯುತ್ತಾಳೆ. ಅದಾದ ನಂತರ ಡಾಕ್ಟರ್​, ನರ್ಸ್​ಳ ಕೆನ್ನೆಗೆ ಬಾರಿಸುತ್ತಾನೆ. ಅಘಾತಕಾರಿ ವಿಚಾರವೆಂದರೆ ಆ ವೈರಲ್​ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಡಾಕ್ಟರ್​ ಇದೀಗ ಹೆಣವಾಗಿ ಪತ್ತೆಯಾಗಿದ್ದಾನೆ.

    ಹೌದು! ವಿಡಿಯೋದಲ್ಲಿದ್ದ ಉತ್ತರ ಪ್ರದೇಶದ ರಾಮ್​ಪುರ ನಿವಾಸಿ ವೈದ್ಯ ಡಾ. ಬಿಎಂ ನಗರ್​ ಇದೀಗ ಸಾವನ್ನಪ್ಪಿದ್ದಾರೆ. ಅವರ ಸಾವಿನ ಹಿಂದೆ ಅನೇಕ ರೋಚಕತೆ ಅಡಗಿ ಕುಳಿತಿದೆ.

    ಬಿಎಂ ನಗರ್​ ಅವರು ರಾಮ್​ಪುರದಲ್ಲಿದ್ದ ತಮ್ಮ ಸರ್ಕಾರಿ ನಿವಾಸದಲ್ಲೇ ಹೆಣವಾಗಿ ಪತ್ತೆಯಾಗಿದ್ದಾರೆ. ಹೆಣ ಪತ್ತೆಯಾಗುತ್ತಿದ್ದಂತೆಯೇ ಜಿಲ್ಲೆಯ ವೈದ್ಯಾಧಿಕಾರಿ ಆ ಹೆಣವನ್ನು ಅವರ ಸ್ವಂತ ಊರಿಗೆ ಕಳುಹಿಸಿಕೊಡುವ ಪ್ರಯತ್ನ ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಅದಾದ ನಂತರ ಊರಿನಲ್ಲಿದ್ದವರನ್ನು ರಾಮ್​ಪುರಕ್ಕೆ ಕರೆಸಿಕೊಳ್ಳಲಾಗಿದೆ. ಅವರ ಕುಟುಂಬ ದೇಹವನ್ನು ಮರಣೋತ್ತರ ಪರೀಕ್ಷೆ ಮಾಡಲು ಬಿಟ್ಟಿಲ್ಲ. ಮರಣೋತ್ತರ ಪರೀಕ್ಷೆಯ ಅವಶ್ಯಕತೆ ಇಲ್ಲವೆಂದು ಬರೆದುಕೊಟ್ಟು, ದೇಹವನ್ನು ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗಿದ್ದಾರೆ.

    ಬಿಎಂ ನಗರ್​ ಅವರಿಗೆ ಶುಗರ್​ ಮತ್ತು ಬಿಪಿ ತುಂಬಾ ಹೆಚ್ಚಾಗಿತ್ತು. ಅದೇ ಕಾರಣಕ್ಕೆ ಅವರು ಸಾವನ್ನಪ್ಪಿರಬಹುದು ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.

    ಅಂದ ಹಾಗೆ ಬಿಎಂ ನಗರ್​ ಅವರು ನರ್ಸ್ ಜತೆ ಜಗಳವಾಡುವ ವಿಡಿಯೋ ಇತ್ತೀಚೆಗೆ ವೈರಲ್​ ಆಗಿತ್ತು. ಅದರಲ್ಲಿ ಇಬ್ಬರೂ ಪರಸ್ಪರ ಹೊಡೆದುಕೊಂಡಿರುವುದೂ ಕಾಣಿಸಿಕೊಂಡಿತ್ತು. ವಿಡಿಯೋ ವೈರಲ್​ ಆದ ನಂತರ ನರ್ಸ್​ ಅನ್ನು ಸಸ್ಪೆಂಡ್​ ಮಾಡಿ, ಬಿಎಂ ನಗರ್​ ಅವರನ್ನೂ ಕೆಲಸದಿಂದ ತೆಗೆದುಹಾಕಲಾಗಿತ್ತು. ಆದರೆ ಅದಾದ ಕೆಲವೇ ದಿನಗಳಲ್ಲಿ ಅವರನ್ನು ವಾಪಾಸು ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು. ಈ ವಿಚಾರವಾಗಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದ ವೈದ್ಯರು ತಮಗೂ ಮತ್ತು ತಮ್ಮ ಕುಟುಂಬಕ್ಕೂ ಅಪಾಯವಿದೆ ಎಂದು ದೂರು ದಾಖಲಿಸಿದ್ದರು ಎನ್ನಲಾಗಿದೆ. (ಏಜೆನ್ಸೀಸ್)

    ಸೋಂಕಿತೆಗೆ ಕೊಟ್ಟಿದ್ದ ಆಕ್ಸಿಜನ್​ ತೆಗೆದು ಏನೇನೋ ಪೂಜೆ ಮಾಡಿದ್ರು! ಸತ್ತ ಮೇಲೆ ವೈದ್ಯರನ್ನೇ ದೂಷಿಸಿದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts