More

    ಏಕರೂಪದ ವೇತನ ಜಾರಿಗೆ ಆಗ್ರಹಿಸಿ ರಕ್ತದಾನ: 10ನೇ ದಿನವೂ ಮಿಮ್ಸ್ ಆವರಣದಲ್ಲಿ ವೈದ್ಯರ ಪ್ರತಿಭಟನೆ

    ಮಂಡ್ಯ: ಏಕರೂಪದ ವೇತನ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳ ಸಂದಿಂದ ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಆವರಣದಲ್ಲಿ ನಡೆಯುತ್ತಿರುವ ಧರಣಿ ಸೋಮವಾರ 10ನೇ ದಿನ ಪೂರೈಸಿತು. ಅಂತೆಯೇ ವೈದ್ಯರು ರಕ್ತದಾನ ಮಾಡುವ ಮೂಲಕ ಆಕ್ರೋಶ ಹೊರಹಾಕಿದರು.
    2018ರ ಹೈಕೋರ್ಟ್ ಆದೇಶದಂತೆ ನೂತನ ಪರಿಷ್ಕೃತ ರಾಜ್ಯ ಸರ್ಕಾರಿ ವೇತನ ಶ್ರೇಣಿಯಂತೆ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಬೋಧಕೇತರ ವೈದ್ಯಾಧಿಕಾರಿಗಳಿಗೆ (ಆರೋಗ್ಯ ಇಲಾಖೆ ವಾದರಿಯಂತೆ) ಏಕರೂಪ ವೇತನ ಜಾರಿ ವಾಡಬೇಕು. ಸಿಎಂಒ/ಐಸಿಎಂಒಗಳಿಗೆ ವಿಶೇಷ ಭತ್ಯೆ ತಡೆಹಿಡಿಯಲಾದ ಸರ್ಕಾರಿ ಆದೇಶ ರದ್ದು ವಾಡಬೇಕು ಎಂದು ಒತ್ತಾಯಿಸಿದರು.
    ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಬೋಧಕೇತರ ವೃಂದಕ್ಕೆ ಒಳಪಡುವ ವೈದ್ಯಾಧಿಕಾರಿಗಳ ಹುದ್ದೆಗಳ ಪಟ್ಟಿ ಪ್ರಕಟಿಸಬೇಕು. ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಬೋಧಕೇತರ ವೈದ್ಯರಿಗೆ ಏಕರೂಪ ಸಿ ಅಂಡ್ ಆರ್ ವಂದ ನಿಯವಾವಳಿಗಳನ್ನು ತುರ್ತಾಗಿ ವಾಡಬೇಕು. ಬೋಧಕೇತರ ವೃಂದದಲ್ಲಿ ಕರ್ತವ್ಯ ನಿರ್ವಹಿಸುವ ತಜ್ಞ ವೈದ್ಯರನ್ನು ಆಯಾ ವಿಭಾಗದಲ್ಲಿ ರೋಗಿಗಳ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಸಂಸ್ಥೆಯಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ನೇಮಕಾತಿ ವಾಡುವ ಸಂದರ್ಭದಲ್ಲಿ ಬೋಧಕೇತರ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಜ್ಞ ವೈದ್ಯಾಧಿಕಾರಿಗಳನ್ನು ಪರಿಗಣಿಸಬೇಕು. ಬದಲಾವಣೆಗೆ ಅವಕಾಶ ಕಲ್ಪಿಸಬೇಕು. ಈ ಕುರಿತು ಏಕರೂಪ ನಿಯವಾವಳಿ ರೂಪಿಸಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts