More

    ಸೋಂಕಿತರ ಮಗುವಿಗೆ ತಿಂಗಳಮಟ್ಟಿಗೆ ಅಮ್ಮನಾದ ವೈದ್ಯೆ

    ಕೊಚ್ಚಿ: ಕರೊನಾ ಬಿಕ್ಕಟ್ಟಿನ ಈ ದಿನಗಳಲ್ಲಿ ಆರೋಗ್ಯ ಕಾರ್ಯಕರ್ತರ ಸೇವೆಯನ್ನು ಎಷ್ಟು ಕೊಂಡಾಡಿದರೂ ಸಾಲದು.

    ಅಂಥದ್ದೇ ಒಂದು ಹೃದಯತುಂಬಿ ಬರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಆರು ತಿಂಗಳ ಮಗುವಿನ್ನು ಕಳೆದ ಒಂದು ತಿಂಗಳಿನಿಂದ ವೈದ್ಯೆಯೇ ನೋಡಿಕೊಂಡಿದ್ದಾರೆ. ಈ ವೈದ್ಯೆಯ ಹೆಸರು ಡಾ.ಮೇರಿ ಅನಿತಾ.

    ಈ ಮಗುವಿನ ತಾಯಿ ಕೊಚ್ಚಿಯವರು. ಉತ್ತರ ಪ್ರದೇಶದ ಗುರುಗ್ರಾಮದಲ್ಲಿ ಮಗುವಿನ ಅಪ್ಪ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕರ್ತವ್ಯ ನಿರ್ವಹಿಸುವ ವೇಳೆ ಮಗುವಿನ ಅಪ್ಪನಿಗೆ ಕರೊನಾ ಸೋಂಕು ತಗುಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಮಗುವಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಮಗುವನ್ನು ಕರೆದುಕೊಂಡು ಮಹಿಳೆ ಕೊಚ್ಚಿಯ ತಮ್ಮ ಮನೆಗೆ ಬಂದು ಕ್ವಾರಂಟೈನ್‌ನಲ್ಲಿ ಇದ್ದರು. ಆದರೆ ಕರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಪರೀಕ್ಷೆ ಮಾಡಿಸಿದಾಗ ಅವರಿಗೂ ಸೋಂಕು ದೃಢಪಟ್ಟಿತು. ಮನೆಯಲ್ಲಿ ಮಗುವನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಆದರೆ ಇವರಿಗೆ ಆಸ್ಪತ್ರೆಗೆ ದಾಖಲಾಗುವುದು ಕಡ್ಡಾಯ.

    ಇದನ್ನೂ ಓದಿ: ಸಹೋದರನಿಗೆ ಕರೊನಾ- ಸೌರವ್‌ ಗಂಗೂಲಿ ಹೋಮ್‌ ಕ್ವಾರಂಟೈನ್‌

    ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಅನಿವಾರ್ಯವಾಗಿ ಅವರು ದಾಖಲಾಗಲೇಬೇಕಿತ್ತು. ತಮ್ಮ ಆರು ವರ್ಷದ ಕಂದನ ಜತೆ ಆಸ್ಪತ್ರೆಗೆ ಹೋದರು. ಅಪ್ಪ-ಅಮ್ಮ ಇಬ್ಬರಿಗೂ ಸೋಂಕು ತಗುಲಿದಾಗ ಮಗುವನ್ನು ಮುಟ್ಟಲೂ ಹಿಂದೇಟು ಹಾಕುವ ಭಯಾನಕ ಸ್ಥಿತಿ ಇಂದಿನದ್ದು. ಯಾರೂ ಮಗುವನ್ನು ನೋಡಿಕೊಳ್ಳಲು ಮುಂದೆ ಬರಲಿಲ್ಲ.

    ಅಂಥದ್ದರಲ್ಲಿ ವೈದ್ಯೆಯಾಗಿರುವ ಮೇರಿ ಅನಿತಾ ಅವರು ಕಳೆದೊಂದು ತಿಂಗಳಿನಿಂದ ಮಗುವನ್ನು ತಾವೇ ನೋಡಿಕೊಂಡಿದ್ದಾರೆ. ಈ ಅವಧಿಯಲ್ಲಿ ವಿಡಿಯೋ ಕಾಲ್‌ ಮೂಲಕ ಅಪ್ಪ-ಅಮ್ಮ ಇಬ್ಬರಿಗೂ ದಿನವೂ ಮಗುವನ್ನು ತೋರಿಸಿ ಮಾತನಾಡಿಸಿದ್ದಾರೆ.
    ಇದೀಗ ಮಗವಿನ ಅಮ್ಮ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ವೈದ್ಯೆಗೆ ಹೃದಯಪೂರ್ವಕವಾಗಿ ಧನ್ಯವಾದ ಅರ್ಪಿಸಿದ್ದಾರೆ. ಮನೋರೋಗ ತಜ್ಞೆಯಾಗಿರುವ ಡಾ.ಮೇರಿ ಅನಿತಾ ಅವರು ಬುದ್ಧಿಮಾಂದ್ಯ ಮಕ್ಕಳ ಸಂಸ್ಥೆಯೊಂದನ್ನೂ ನಡೆಸುತ್ತಿದ್ದಾರೆ.

    ಅಕ್ರಮವಾಗಿ ವಾಸವಾಗಿದ್ದ ದಲಿತ ದಂಪತಿ ಮೇಲೆ ಪೊಲೀಸ್‌ ದೌರ್ಜನ್ಯ- ವಿಡಿಯೋ ವೈರಲ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts