More

    ಜಗತ್ತಿನಲ್ಲಿ ಅತಿ ಹೆಚ್ಚು ಬಲಿಯಾಗುವ ಜೀವಿ ಯಾವುದು ಗೊತ್ತಾ? ಹುಬ್ಬೇರಿಸುವ ಮಾಹಿತಿ ಇಲ್ಲಿದೆ…

    ನವದೆಹಲಿ: ಜಗತ್ತಿನಲ್ಲಿ ಅತಿ ಹೆಚ್ಚು ಮಂದಿ ಮಾಂಸಾಹಾರ ಪ್ರಿಯರಿದ್ದಾರೆ. ಅದರಲ್ಲೂ ಭಾರತದಂತಹ ದೊಡ್ಡ ದೇಶದಲ್ಲಿ ನಾನ್​ ಪ್ರಿಯರ ಸಂಖ್ಯೆ ಕಡಿಮೆಯೇನಿಲ್ಲ. ನಮ್ಮಲ್ಲಿ ಯಾವುದೇ ಹಬ್ಬ-ಹರಿದಿನ ಹಾಗೂ ವಿಶೇಷ ಸಂದರ್ಭಗಳಲ್ಲಿ ಬಗೆ ಬಗೆಯ ನಾನ್​ ವೆಜ್​ ಭಕ್ಷ್ಯಗಳನ್ನು ತಯಾರಿಸುವು ವಾಡಿಕೆ. ದೇವರ ನೈವೇದ್ಯಕ್ಕೂ ನಾನ್​ ವೆಜ್​ ಇಡುತ್ತಾರೆ. ನೆರೆಯ ರಾಷ್ಟ್ರ ಚೀನಾದಲ್ಲಂತೂ ಯಾವ ಪ್ರಾಣಿಗಳನ್ನು ಸಹ ಬಿಡುವುದಿಲ್ಲ. ಅವರ ಆಹಾರ ಪದ್ಧತಿಯೇ ವಿಚಿತ್ರ. ಅಮೆರಿಕದಲ್ಲಿ ದನದ ಮಾಂಸವೇ ಅಲ್ಲಿನ ಜನರ ಫೇವರಿಟ್​. ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ತಿನ್ನಲ್ಪಡುವ ಜೀವಿ ಯಾವುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.

    ಇತ್ತೀಚಿನ ಸಂಶೋಧನಾ ವರದಿಗಳ ಪ್ರಕಾರ ಪ್ರತಿ ವರ್ಷ 1900 ಕೋಟಿ ಕೋಳಿಗಳು, 150 ಕೋಟಿ ಹಸುಗಳು, 100 ಕೋಟಿ ಆಡುಗಳು ಮತ್ತು 100 ಕೋಟಿ ಹಂದಿಗಳನ್ನು ಆಹಾರಕ್ಕಾಗಿ ಕೊಲ್ಲಲಾಗುತ್ತದೆ. ದಿನಕ್ಕೆ 20 ಕೋಟಿಗೂ ಹೆಚ್ಚು ಕೋಳಿಗಳನ್ನು ಹೊಟ್ಟೆಹಾಗಿ ಬಲಿ ಕೊಡಲಾಗುತ್ತದೆ.

    ಪಟ್ಟಿಯಲ್ಲಿ ಚಿಕನ್​ ಮೊದಲು
    ಪ್ರಪಂಚದಲ್ಲಿ ಅತಿ ಹೆಚ್ಚು ಕೊಲ್ಲಲ್ಪಡುವ ಪ್ರಾಣಿಗಳಲ್ಲಿ ಕೋಳಿಯೇ ಮೊದಲು. ಪ್ರತಿ ಒಂದು ನಿಮಿಷಕ್ಕೆ ಬರೋಬ್ಬರಿ 40 ಕೋಳಿಗಳನ್ನು ಕೊಲ್ಲಲಾಗುತ್ತದೆ. ಇದಿಷ್ಟೇ ಅಲ್ಲದೆ, ಪ್ರತಿ ವರ್ಷ 50 ಸಾವಿರ ಆಮೆಗಳು, 83 ಸಾವಿರ ಮೊಸಳೆ, ಒಂದು ಲಕ್ಷ ಎಮ್ಮೆಗಳು, 8 ಲಕ್ಷ ಒಂಟೆಗಳು ಮತ್ತು 50 ಲಕ್ಷ ಕುದುರೆಗಳನ್ನು ಆಹಾರಕ್ಕಾಗಿ ಬಲಿ ಕೊಡಲಾಗುತ್ತದೆ.

    ನಾಯಿಗಳು, ಪಾರಿವಾಳಗಳು ಮತ್ತು ಶಾರ್ಕ್​ಗಳನ್ನು ಸಹ ಸಾಕಷ್ಟು ಸಂಖ್ಯೆಯಲ್ಲಿ ಕೊಲ್ಲಲಾಗುತ್ತದೆ. ಜಗತ್ತಿನಲ್ಲಿ ಅತಿ ಹೆಚ್ಚು ಮಾಂಸಾಹಾರಿಗಳನ್ನು ಹೊಂದಿರುವ ದೇಶವಾಗಿ ಚೀನಾ ಮೊದಲ ಸ್ಥಾನದಲ್ಲಿ. ಪ್ರಪಂಚದ ಶೇಕಡಾ 25ಕ್ಕಿಂತ ಹೆಚ್ಚು ಮಾಂಸಾಹಾರಿಗಳನ್ನು ಚೀನಾ ಹೊಂದಿದೆ. ಎಲ್ಲಾ ಜೀವಿಗಳಲ್ಲಿ ಕೋಳಿ ಹೆಚ್ಚು ಸೇವಿಸುವ ಪ್ರಾಣಿ ಎಂಬುದು ಗಮನಾರ್ಹ ಸಂಗತಿಯಾಗಿದೆ. (ಏಜೆನ್ಸೀಸ್​)

    ಏಪ್ರಿಲ್​ 16ಕ್ಕೆ ಲೋಕಸಭಾ ಚುನಾವಣೆ: ತಾತ್ಕಾಲಿಕ ದಿನಾಂಕ ಪ್ರಕಟಿಸಿದ ಚುನಾವಣಾ ಆಯೋಗ

    ಆಹ್ವಾನವಿದ್ದರೂ ಕೊಹ್ಲಿ, ರೋಹಿತ್​, ಧೋನಿ ಅಯೋಧ್ಯೆಗೆ ಬರಲಿಲ್ಲ ಏಕೆ? ಕಾರಣ ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts