More

    ಸೆಲೆಬ್ರಿಟಿಗಳು ಮಾಡುವ ಐಸ್ ಬಾತ್ ಲಾಭವೇನು ಗೊತ್ತಾ?

    ಬೆಂಗಳೂರು: ಪ್ರಸ್ತುತ ಐಸ್ ಬಾತ್ ಟ್ರೆಂಡ್ ಚಾಲನೆಯಲ್ಲಿದೆ. ಅದರಲ್ಲೂ ಅನೇಕ ಸೆಲೆಬ್ರಿಟಿಗಳು ಐಸ್ ಬಾತ್ ಮಾಡಿ ತಮ್ಮ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ. ಹಾಗಾದರೆ ಐಸ್ ಬಾತ್ ಎಂದರೇನು? ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜ.

    ಐಸ್-ಕೋಲ್ಡ್ ಬಾಥ್ ಅಥವಾ ಸ್ನಾನದ ತೊಟ್ಟಿಯ ನೀರಿನ ತುಂಬಾ ಮಂಜುಗಡ್ಡೆಗಳನ್ನು ಹಾಕಿ ಸೊನ್ನೆ ಡಿಗ್ರಿ ತಾಪಮಾನದ ನೀರಿನಲ್ಲಿ ದೇಹವನ್ನು ಮುಳುಗಿಸಿ ಸ್ನಾನ ಮಾಡುತ್ತಾರೆ. ಐಸ್ ಬಾತ್ ಮಾಡುವಾಗ ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ವೈದ್ಯರ ಸಲಹೆಯನ್ನು ಪಡೆದ ನಂತರವೇ ಇದನ್ನು ಪ್ರಯತ್ನಿಸಲು ಸೂಚಿಸಲಾಗುತ್ತದೆ. ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಐಸ್ ಬಾತ್ ಮಾಡಬಾರದು ಎಂದು ತಜ್ಞರು ಹೇಳುತ್ತಾರೆ.

    ಐಸ್ ಬಾತ್ ಮಾಡುವುದರಿಂದ ಸ್ನಾಯು ನೋವು ಕಡಿಮೆಯಾಗುತ್ತದೆ. ಗಾಯಗಳಿಂದ ಉಂಟಾಗುವ ಊತವನ್ನು ಈ ವಿಧಾನದ ಮೂಲಕ ಕಡಿಮೆ ಮಾಡಬಹುದು.

    ಆಯಾಸದಿಂದ ಬಳಲುತ್ತಿರುವವರಿಗೂ ಐಸ್ ಬಾತ್ ಉಪಯುಕ್ತವಾಗಿದೆ. ತಣ್ಣೀರು ನರಮಂಡಲವನ್ನು ಸಕ್ರಿಯಗೊಳಿಸುತ್ತದೆ

    ವ್ಯಾಯಾಮದ ನಂತರ  ಐಸ್ ಬಾತ್ ತೆಗೆದುಕೊಳ್ಳುವುದರಿಂದ ಸ್ನಾಯುವಿನ ತೊಂದರೆಗಳನ್ನು ಕಡಿಮೆ ಮಾಡಬಹುದು.

    ಹೃದಯ ಸಮಸ್ಯೆಯಿಂದ ಬಳಲುತ್ತಿರುವವರು ಐಸ್ ಬಾತ್ ನಿಂದ ದೂರವಿರಬೇಕು ಎನ್ನುತ್ತಾರೆ ತಜ್ಞರು. ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುವುದರಿಂದ, ಹೃದಯ ಸಮಸ್ಯೆಗಳ ಸಾಧ್ಯತೆಯಿದೆ. ಅಲ್ಲದೆ ಸೂಕ್ಷ್ಮ ತ್ವಚೆ ಇರುವವರು ಇಂತಹ ವಸ್ತುಗಳಿಂದ ದೂರವಿರುತ್ತಾರೆ ಎನ್ನಲಾಗಿದೆ.

    ಈ ವಿಧಾನ ಕೇವಲ ವೃತ್ತಿಪರರಲ್ಲಿ ಮಾತ್ರವೇ ಜನಪ್ರಿಯವಾಗಿದೆಯೇ ಹೊರತು ಜನಸಾಮಾನ್ಯರಿಗೆ ಇನ್ನೂ ಇದನ್ನು ರೂಢಿಸಿಕೊಳ್ಳುವ ಬಗ್ಗೆ ಯಾವುದೇ ಖಚಿತವಾದ ಮಾಹಿತಿ ಇಲ್ಲ. ಮಂಜುಗಡ್ಡೆಯ ನೀರಿನ ಸ್ನಾನ ಮತ್ತು ತಣ್ಣೀರಿನಲ್ಲಿ ದೇಹವನ್ನು ಮುಳುಗಿಸುವಿಕೆಯ ಸಂಪೂರ್ಣ ಬಾಧಕಗಳನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಸಂಶೋಧನೆಗಳು ಇನ್ನಷ್ಟೇ ನಡೆಸಬೇಕಾಗಿದೆ.

    ಮಾವಿನ ಹಣ್ಣನ್ನು ಫ್ರಿಡ್ಜ್​ನಲ್ಲಿಟ್ಟು ತಿನ್ನುತ್ತೀರಾ? ಹಾಗಿದ್ರೆ ಈ ಮಾಹಿತಿ ನೀವು ತಿಳಿದುಕೊಳ್ಳಲೇಬೇಕು…

    ನಿಮ್ಮ ಗಂಡನ ಗೊರಕೆಯಿಂದ ಕಿರಿಕಿರಿ ಆಗ್ತಿದ್ಯಾ? ಹಾಗಿದ್ರೆ ಈ ಟಿಪ್ಸ್​​ ನಿಮಗಾಗಿ….

    ಬಿಸಿಲೋ ಬಿಸಿಲು…ರಣ ಬಿಸಿಲಿನಲ್ಲಿ ಶಾಖದ ಹೊಡೆತ ತಡೆಗಟ್ಟಲು ಹೀಗೆ ಮಾಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts