More

    ಚಪ್ಪಾಳೆ ತಟ್ಟುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

    ಬೆಂಗಳೂರು: ಚಪ್ಪಾಳೆ ತಟ್ಟುವುದು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಆದರೆ ಈ ಚಪ್ಪಾಳೆ ಹುರಿದುಂಬಿಸಲು ಮಾತ್ರವಲ್ಲದೆ ಆರೋಗ್ಯಕ್ಕೂ ಒಳ್ಳೆಯದು ಎನ್ನಲಾಗಿದೆ. ಅಭಿನಂದಿಸುವಾಗ ಅಥವಾ ಒಳ್ಳೆಯ ಮಾತುಗಳನ್ನು ಹೇಳುವಾಗ ಚಪ್ಪಾಳೆ ತಟ್ಟಲಾಗುತ್ತದೆ. ಭಾಷಣ, ಜೋಕ್ ಮಾಡಿದಾಗ, ಚಪ್ಪಾಳೆಗಳನ್ನು ಹುರಿದುಂಬಿಸಲು ಸಹ ಬಳಸಲಾಗುತ್ತದೆ. ಈ ರೀತಿ ಚಪ್ಪಾಳೆ ತಟ್ಟುವುದರಿಂದ ಆರೋಗ್ಯದ ಲಾಭವೂ ಇದೆ ಎಂಬುದು ನಿಮಗೆ ತಿಳಿದಿದೆಯೇ.

    ದೇಹದ ಪ್ರತಿಯೊಂದು ಅಂಗವೂ ದೇಹದ ಇತರ ಭಾಗಗಳೊಂದಿಗೆ ಸಂಪರ್ಕ ಹೊಂದಿದೆ. ಕೈಯಲ್ಲಿರುವ ಸಣ್ಣ ನರಗಳು ಪ್ರಚೋದಿತವಾಗಿದ್ದರೆ, ದೇಹದ ಅಂಗಗಳು ಆರೋಗ್ಯಕರವಾಗಿರುತ್ತವೆ. ಈಗ ಚಪ್ಪಾಳೆ ತಟ್ಟುವುದರಿಂದ ಆಗುವ ಲಾಭಗಳೇನು ಎಂದು ತಿಳಿಯೋಣ.

    ಚಪ್ಪಾಳೆ ತಟ್ಟುವುದರಿಂದ ಇರುವ ಪ್ರಯೋಜನಗಳಿವೆ ಗೊತ್ತಾ?
    • 1) ​ ನಿತ್ಯ ಚಪ್ಪಾಳೆ ತಟ್ಟುವುದರಿಂದ ಮಕ್ಕಳ ನೆನಪಿನ ಶಕ್ತಿ ಹಾಗೂ ಏಕಾಗ್ರತೆ ಹೆಚ್ಚುತ್ತದೆ.
    • ​2) ಮಾನಸಿಕ ಮತ್ತು ದೈಹಿಕ ಉತ್ತೇಜನ ದೊರೆಯುವುದು.
    • ​3) ರಕ್ತ ಪರಿಚಲನೆ ಸರಾಗವಾಗುವುದು.
    • ​4) ಸಂಪೂರ್ಣ ದೇಹವನ್ನು ಕ್ರಿಯಾಶೀಲ ಗೊಳಿಸುವುದು.
    • 5) ಚಪ್ಪಾಳೆ ತಟ್ಟುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಋತುಮಾನದ ಕಾಯಿಲೆಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ.
    • 6) ಒಮ್ಮೆ ಚಪ್ಪಾಳೆ ತಟ್ಟಲು ಆರಂಭಿಸಿದರೆ ಮೆದುಳಿನ ಸಿಗ್ನಲ್ ಹೋಗುತ್ತದೆ.ಇದರಿಂದ ಖಿನ್ನತೆ ಮತ್ತು ಒತ್ತಡ ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರು.
    • https://www.vijayavani.net/why-drinking-coffee-twice-a-day-can-protect-your-liver

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts