More

    ಆಂಡಿಯನ್ ಕಾಂಡೋರ್​​ ಬಗ್ಗೆ ನಿಮಗೆಷ್ಟು ಗೊತ್ತು?

    ಜಗತ್ತಿನ ಅತಿ ಎತ್ತರಕ್ಕೆ ಹಾರುವ ದೊಡ್ಡ ಹಕ್ಕಿ ತನ್ನ ರೆಕ್ಕೆಗಳನ್ನು ಬೀಸದೆ ಗಂಟೆಗಟ್ಟಲೆ  ಹಾರಬಲ್ಲದು ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ಆಂಡಿಯನ್ ಕಾಂಡೋರ್, 10 ಅಡಿಗಳಷ್ಟು ವಿಸ್ತರಿಸಬಲ್ಲ ರೆಕ್ಕೆಗಳನ್ನು ಹೊಂದಿದ್ದು, 33 ಪೌಂಡ್‌ ತೂಕವುಳ್ಳದ್ದಾಗಿದೆ. ಇದು ಇಂದು ವಿಶ್ವದ ಅತಿದೊಡ್ಡ, ಎತ್ತರಕ್ಕೆ ಹಕ್ಕಿಯಾಗಿದೆ.
    ವಿಜ್ಞಾನಿಗಳ ತಂಡವು “ಡೈಲಿ ಡೈರಿಗಳು” ಎಂಬ ಸಾಧನವನ್ನು ಬಳಸಿ ಎಂಟು ಕಾಂಡೋರ್‌ಗಳ ರೆಕ್ಕೆ ಬಡಿತವನ್ನು ದಾಖಲಿಸಿದೆ. ಅವರು 250 ಗಂಟೆಗಳ ಹಾರಾಟದ ಸಮಯವನ್ನು ಗಮನಿಸಿ ಈ ಮಾಹಿತಿ ಹಂಚಿಕೊಂಡಿದ್ದಾರೆ.
    ಈ ಕುತೂಹಲಭರಿತ ಅವಲೋಕನದಿಂದ ಪಕ್ಷಿಗಳು ತಮ್ಮ ಎತ್ತರದ ಹಾರಾಟದ ಸಮಯದ ಕೇವಲ ಶೇ. 1 ರಷ್ಟು ಕಾಲ ರೆಕ್ಕೆಗಳನ್ನು ಬೀಸುತ್ತ ಕಳೆದಿರುವುದು (ಅದೂ ಹೆಚ್ಚಾಗಿ ಟೇಕ್-ಆಫ್ ಸಮಯದಲ್ಲಿ) ತಿಳಿದುಬಂತು.

    ಇದನ್ನೂ ಓದಿ: 14 ದಿನದಲ್ಲಿ ಆತ ಮಾಡಿದ ತಪ್ಪಿಗೆ ಶಿಕ್ಷೆ ವಿಧಿಸಲಾಗಿದೆ. ಆತ ಅದೆಂಥ ತಪ್ಪು ಮಾಡಿದ್ದಾನೆ ಗೊತ್ತಾ?

    ಒಂದು ಪಕ್ಷಿ ರೆಕ್ಕೆ ಬೀಸದೆ ಐದು ಗಂಟೆ ಕಾಲ 100 ಮೈಲಿಗಿಂತ ಹೆಚ್ಚು ಎತ್ತರ (160 ಕಿಲೋಮೀಟರ್)ಕ್ಕೆ ಹಾರಾಟ ನಡೆಸಿತ್ತು.
    “ಕಾಂಡೋರ್‌ಗಳು ಪರಿಣಿತ ಪೈಲಟ್‌ಗಳು, ಅವು ಇಷ್ಟು ಪರಿಣತವಾಗಿರುತ್ತವೆ ಎಂದು ನಾವು ಊಹಿಸಿರಲಿಲ್ಲ” ಎಂದು ವೇಲ್ಸ್‌ನ ಸ್ವ್ಯಾನ್​ಸೀ ವಿಶ್ವವಿದ್ಯಾಲಯದ, ಅಧ್ಯಯನದ ಸಹ-ಲೇಖಕ ಮತ್ತು ಜೀವಶಾಸ್ತ್ರಜ್ಞ ಎಮಿಲಿ ಶೆಪರ್ಡ್ ಎಪಿ ತಿಳಿಸಿದ್ದಾರೆ.
    ಈ ಅಧ್ಯಯನವನ್ನು ಸೋಮವಾರ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಜರ್ನಲ್​​ನಲ್ಲಿ ಪ್ರಕಟಿಸಲಾಗಿದೆ.
    “ಅವು ಎಂದಿಗೂ ರೆಕ್ಕೆಗಳನ್ನು ಸೋಲಲು ಬಿಡುವುದಿಲ್ಲ ಅವು ಮೇಲೆ ಹಾರುತ್ತಲೇ ಇರುವುದನ್ನು ನೋಡುವುದು ಮನಸ್ಸಿಗೆ ಮುದ ನೀಡುತ್ತದೆ” ಎಂದು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಪಕ್ಷಿ ಹಾರಾಟ ಅಧ್ಯಯನ ತಜ್ಞ ಡೇವಿಡ್ ಲೆಂಟಿಂಕ್ ಹೇಳಿದ್ದಾರೆ.

    ಇದನ್ನೂ ಓದಿ:  ಸಚಿನ್ ಪೈಲಟ್ ವಯಸ್ಸೆಷ್ಟಪ್ಪಾ…?

    ಪಕ್ಷಿಗಳಿಗೆ ಆಕಾಶ ಖಾಲಿಯಾಗಿಲ್ಲ. ಇದು ಗಾಳಿ ಬೀಸುವಿಕೆ, ಏರುತ್ತಿರುವ ಬಿಸಿ ಗಾಳಿಯ ಪ್ರವಾಹಗಳು ಮತ್ತು ಪರ್ವತಗಳಂತಹ ಭೂ ರಚನೆಗಳಿಂದ ಮೇಲಕ್ಕೆ ತಳ್ಳಲ್ಪಡುವ ಗಾಳಿ ದಿಕ್ಕುಗಳು ಇತ್ಯಾದಿಯಂತಹ ಅದೃಶ್ಯ ವೈಶಿಷ್ಟ್ಯಗಳ ರಚನೆಯಾಗಿದೆ.
    ಗಾಳಿಯ ಚಲನೆಯಲ್ಲೇ ಹಾರಾಡುವುದನ್ನು ಕಲಿಯುವುದರಿಂದ ಕೆಲವು ಪಕ್ಷಿಗಳು ರೆಕ್ಕೆಗಳನ್ನು ಬಡಿಯದೆ ದೂರದವರೆಗೆ ಹಾರಲು ಅನುಕೂಲವಾಗುತ್ತದೆ.
    ಆ್ಯಂಡಿಯನ್ ಕಾಂಡೋರ್ ಗೆ ಎತ್ತರ ಹಾರಾಡುವ ಅನನ್ಯ ಕೌಶಲ ಅದರ ಸ್ಕ್ಯಾವೆಂಜರ್ ಜೀವನ ಶೈಲಿಗೆ (ಸ್ಕ್ಯಾವೆಂಜರ್ ಪ್ರಾಣಿಗಳು, ಪರಭಕ್ಷಕವನ್ನು ಹೊರತುಪಡಿಸಿ ಇತರ ಕಾರಣಗಳಿಂದ ಸತ್ತ ಪ್ರಾಣಿಗಳನ್ನು ತಿನ್ನುತ್ತವೆ) ಅಗತ್ಯವಾಗಿದೆ. ಇದು ಬೇಟೆಗಾಗಿ ಹೊಂಚು ಹಾಕುತ್ತ ಗಂಟೆಗಟ್ಟಲೆ ಎತ್ತರದ ಪರ್ವತಗಳನ್ನು ಸುತ್ತುತ್ತದೆ ಎಂದು ಅರ್ಜೆಂಟೀನಾದ ನ್ಯಾಷನಲ್ ಯೂನಿವರ್ಸಿಟಿ ಆಫ್ ಕೊಮಾಹ್ಯೂದ ಅಧ್ಯಯನ ಸಹ-ಲೇಖಕ ಮತ್ತು ಜೀವಶಾಸ್ತ್ರಜ್ಞ, ಸೆರ್ಗಿಯೋ ಲ್ಯಾಂಬರ್ಟುಚಿ ಹೇಳಿದ್ದಾರೆ.

    ಕೋರ್ಟ್‌ ಮೊರೆಹೋದ ಗ್ಯಾಂಗ್‌ರೇಪ್‌ ಸಂತ್ರಸ್ತೆಯೇ ಅರೆಸ್ಟ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts