More

    ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಬೇಡಿ

    ಗಜೇಂದ್ರಗಡ: ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಲು ತೀರ್ಮಾನಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ವಿಶ್ವ ಹಿಂದು ಪರಿಷತ್, ಭಜರಂಗದಳ ಕಾರ್ಯಕರ್ತರು ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

    ಜಿಲ್ಲಾ ವಿಹಿಂಪ ವಿಶೆಷ ಸಂಪರ್ಕ ಪ್ರಮುಖ ಸಂಜೀವ ಜೋಶಿ ಮಾತನಾಡಿ, ಭಾರತವು ಹಿಂದು ರಾಷ್ಟ್ರವಾಗಿದ್ದು ಇಲ್ಲಿ ಹಿಂದುಗಳೊಡನೇ ಅನ್ಯ ಧರ್ಮಿಯರು ಸಹ ಸಹಬಾಳ್ವೆ ಮಾಡಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಕಾಂಗ್ರೆಸ್ ಸರ್ಕಾರಕ್ಕೆ ಅನ್ಯ ಧರ್ಮಿಯರಲ್ಲದೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಗಳು ಸಹ ಮತ ಹಾಕಿದ್ದಾರೆ. ಅವರ ಮತದಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆಯೇ ಹೊರತು ಕೇವಲ ಅಲ್ಪಸಂಖ್ಯಾತರಿಂದಲ್ಲ. ಈ ಕಾನೂನಿನಿಂದ ಕಾಂಗ್ರೆಸ್ ತನಗೆ ಮತ ನೀಡಿದ ಸಮಸ್ತ ಹಿಂದು ಸಮಾಜಕ್ಕೆ ದ್ರೋಹ ಬಗೆದಂತಾಗಿದೆ ಎಂದರು.

    ಜಿಲ್ಲಾ ವಿಹಿಂಪ ಕಾರ್ಯದರ್ಶಿ ರಾಘವೇಂದ್ರ ಹಬೀಬ ಮಾತನಾಡಿ, ಇತ್ತೀಚಿಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ಸಾಮೂಹಿಕ ಗೋ ಹತ್ಯೆ ಮಾಡಿದ್ದು ಖಂಡನೀಯ. ಗೋವನ್ನು ಕಾಮಧೇನು ಎಂದು ಪೂಜ್ಯ ಭಾವನೆಯಿಂದ ಕಾಣುವ ಅಪಾರ ಹಿಂದುಗಳ ಭಾವನೆಗೆ ಧಕ್ಕೆ ಉಂಟು ಮಾಡುತ್ತಿರುವುದು ಖಂಡನೀಯ ಎಂದರು.

    ತಹಸೀಲ್ದಾರ್ ರಜನಿಕಾಂತ ಕೆಂಗೇರಿ, ಪಿಎಸ್‌ಐ ನಾಗರಾಜ ಗಡದ ಅವರಿಗೆ ಮನವಿ ಸಲ್ಲಿಸಲಾಯಿತು. ವಿಹಿಂಪ ಜಿಲ್ಲಾಧ್ಯಕ್ಷ ಶ್ರೀಧರ ಕುಲಕರ್ಣಿ, ಭಜರಂಗದಳ ಜಿಲ್ಲಾಸಂಯೋಜಕ ಶಿವಾನಂದ, ಅನುರಾಗ ಚಿನಿವಾಲರ, ವಿಶ್ವನಾತ ಕುಷ್ಟಗಿ, ಸಂತೋಷ ವಸ್ತ್ರದ, ಮಂಜುನಾಥ ಅಜಮೀರ, ಕಿರಣ ಕಮ್ಮಾರ, ಪ್ರಮೋದ ಬಡಗೇರ, ಜಗದೀಶ ಸಕ್ರಿ, ರಾಜು ನಾಯಕ, ಭರತ ರಾಠೋಡ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts