More

    ಜನಮತ | ಕರೊನಾ ಕುರಿತು ನಿರ್ಲಕ್ಷ್ಯ ಧೋರಣೆ ಬೇಡ

    ಕರ್ನಾಟಕ ಸೇರಿ ದೇಶದಾದ್ಯಂತ ಕರೊನಾ ಪ್ರಕರಣಗಳು ಹೆಚ್ಚುತ್ತಿವೆ. ಪರಿಸ್ಥಿತಿ ಒಂದಿಷ್ಟು ನಿಯಂತ್ರಣಕ್ಕೆ ಬಂದಿತ್ತಾದರೂ, ಮತ್ತೆ ಸೋಂಕು ಪ್ರಸರಣ ವೇಗ ಪಡೆದಿರುವುದು ಆತಂಕಕಾರಿ. ಕಳೆದ ವರ್ಷದ ಲಾಕ್​ಡೌನ್​ನಿಂದ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು, ಅದರಿಂದ ಚೇತರಿಸಿಕೊಳ್ಳಲು ಇನ್ನೂ ಸಾಧ್ಯವಾಗುತ್ತಿಲ್ಲ. ಹಾಗಾಗಿ, ಮತ್ತೆ ಲಾಕ್​ಡೌನ್ ವಿಧಿಸುವ ಪರಿಸ್ಥಿತಿಯೂ ರಾಜ್ಯ, ದೇಶದಲ್ಲಿ ಇಲ್ಲ. ಹಾಗೆಂದ ಮಾತ್ರಕ್ಕೆ ಕರೊನಾ ಅಪಾಯವನ್ನು ನಿರ್ಲಕ್ಷಿಸುವಂತಿಲ್ಲ. ಜನರೇ ಹೆಚ್ಚು ಎಚ್ಚರಿಕೆ ವಹಿಸಬೇಕಾದ ಹೊತ್ತು ಇದು. ಕರೊನಾ ಲಸಿಕೆ ಪಡೆಯುವಲ್ಲಿನ ಉದಾಸೀನತೆ ತೊರೆಯಬೇಕು. ಸುರಕ್ಷಿತ ಅಂತರ, ಶುಚಿತ್ವ ಕಾಪಾಡಿಕೊಳ್ಳುವ ಜತೆಗೆ ಅನಗತ್ಯ ಓಡಾಟಕ್ಕೂ ಕಡಿವಾಣ ಹಾಕಬೇಕು. ಸರ್ಕಾರದ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಈಗಾಗಲೇ ಒಂದು ಶೈಕ್ಷಣಿಕ ವರ್ಷ ಹಾಳಾಗಿದ್ದು, ಕೋವಿಡ್ ಮಹಾಮಾರಿ ಗೆಲ್ಲಲು ಜಾಗೃತಿ, ಮುನ್ನೆಚ್ಚರಿಕೆಯೊಂದೇ ಸೂಕ್ತ ಪರಿಹಾರ.

    | ಗಗನ್ ಮೈಸೂರು

    ಸಿನಿಮಾ ನಿರ್ಮಾಪಕ ಶಂಕರೇಗೌಡ ಬಂಧನ; ಡ್ರಗ್ಸ್​ ಮಾಫಿಯಾ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಪ್ರೊಡ್ಯೂಸರ್

    ಶುಭ ಬಿಗ್​ಬಾಸ್​ನಲ್ಲಿದ್ದರೆ, ಆಕೆಯ ಭಾವಿ ಪತಿ ಏನು ಮಾಡುತ್ತಿದ್ದಾರೆ ಗೊತ್ತಾ? ಸುದೀಪ್​ ಬಿಚ್ಚಿಟ್ಟ ಸತ್ಯ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts