More

    ಕರೊನಾ ವೈರಸ್​ ಒಡ್ಡುತ್ತಿರುವ ಬೆದರಿಕೆಯನ್ನು ಎದುರಿಸಲು ‘ದೋ ಗಜ್​​ ಕೀ ದೂರಿ’ ಎಂಬುದೇ ಮಂತ್ರವಾಗಲಿ: ಪ್ರಧಾನಿ ಮೋದಿ

    ನವದೆಹಲಿ: ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಈಗಾಗಲೇ ಹಲವು ಬಾರಿ ದೇಶದ ಜನರಲ್ಲಿ ಮನವಿ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಸೋಮವಾರವೂ ಅದನ್ನೇ ಪುನರುಚ್ಚರಿಸಿದ್ದಾರೆ.

    ಮುಖ್ಯಮಂತ್ರಿಗಳ ಜತೆ ನಡೆಸಿದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಸದ್ಯದ ಮಟ್ಟಿಗೆ ದೋ ಗಜ್​​ ಕೀ ದೂರಿ (ಎರಡು ಗಜಗಳ ಅಂತರ) ಎಂಬುದು ಪ್ರತಿಯೊಬ್ಬರ ಮಂತ್ರವಾಗಬೇಕು. ಎಲ್ಲರೂ ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು ಎಂದಿದ್ದಾರೆ.

    ಹಲವು ದಿನಗಳಿಂದ ಈಚೆಗೆ ಕರೊನಾ ವೈರಸ್​ ಎಂಬುದು ನಮ್ಮ ಜೀವನದ ಒಂದು ಭಾಗವಾಗಿ ಹೋಗಿದೆ. ಅದು ನಮಗೆ ಒಡ್ಡುತ್ತಿರುವ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳು ವಿಚಾರದಲ್ಲಿ ರಾಜಿ ಆಗಬಾರದು ಎಂದು ಮೋದಿಯವರು ಹೇಳಿದ್ದಾರೆ.

    ದೋ ಗಜ್ ಕೀ ದೂರಿ (ಎರಡು ಗಜಗಳಷ್ಟು ಅಂತರ) ಎಂಬ ಸಂದೇಶನ್ನು ಎಲ್ಲೆಡೆ ಸಾರಬೇಕು. ಇದು ನಮಗೆ ಜೀವನದ ಪಾಠವಾಗಬೇಕು ಎಂದಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts