More

    ಬೆನ್ನುಮೂಳೆ ಬಲಗೊಳಿಸಲು, ಹೊಟ್ಟೆಯ ಬೊಜ್ಜು ಕರಗಿಸಲು ಈ ಆಸನ ಮಾಡಿ!

    ಬೆನ್ನುಮೂಳೆಯನ್ನು ಬಲಗೊಳಿಸುವ ಆಸನವೆಂದರೆ ಭಾರದ್ವಾಜಾಸನ. ಈ ಯೋಗಾಸನಕ್ಕೆ ಭಾರದ್ವಾಜ ಮುನಿಯ ಹೆಸರನ್ನು ಇಡಲಾಗಿದೆ. ಇದು ದೇಹವನ್ನು ತಿರುಚಿ ಮಾಡುವ ಭಂಗಿಯಾಗಿದೆ.

    ಪ್ರಯೋಜನಗಳು: ಬೆನ್ನುಮೂಳೆ ಬಲಗೊಳ್ಳುತ್ತದೆ. ಹೊಟ್ಟೆಯ ಬೊಜ್ಜು ಕರಗುತ್ತದೆ. ಮಧುಮೇಹ ನಿಯಂತ್ರಣವಾಗುತ್ತದೆ. ಸೊಂಟ ನೋವು, ಕುತ್ತಿಗೆ ಉಳುಕು, ಭುಜಗಳ ನೋವು ನಿಯಂತ್ರಣಕ್ಕೂ ಸಹಕಾರಿ. ವಿಶೇಷವಾಗಿ, ಪಿತ್ತಕೋಶದ ಕಾರ್ಯ ಸಮರ್ಪಕವಾಗಿ ಜರಗುತ್ತದೆ. ಮೂತ್ರಕೋಶದ ಕಾರ್ಯವೂ ಉತ್ತಮಗೊಳ್ಳುತ್ತದೆ.

    ಇದನ್ನೂ ಓದಿ: ಗುಜರಾತ್​ನ 17ನೇ ಸಿಎಂ ಆಗಿ ಭೂಪೇಂದ್ರ ಪಟೇಲ್​​ ಪ್ರಮಾಣ ವಚನ

    ಅಭ್ಯಾಸಕ್ರಮ: ಮೊದಲಿಗೆ ಜಮಖಾನದ ಮೇಲೆ ಕಾಲುಗಳನ್ನು ಚಾಚಿ ಕೂರಬೇಕು. ಎರಡೂ ಕಾಲುಗಳನ್ನೂ ಪುಷ್ಠದ ಎಡಪಕ್ಕಕ್ಕೆ ಮಡಿಸಬೇಕು. ಬೆನ್ನು, ಕುತ್ತಿಗೆ ನೇರವಾಗಿಟ್ಟುಕೊಳ್ಳಬೇಕು. ಎಡಗೈಯನ್ನು ಮೇಲಕ್ಕೆತ್ತಿ ನೇರವಾಗಿಸಿ, ಉಸಿರನ್ನು ತೆಗೆದುಕೊಳ್ಳುತ್ತಾ, ದೇಹದ ಹಿಂದಕ್ಕೆ ತೆಗೆದುಕೊಂಡುಹೋಗಬೇಕು. ಸೊಂಟವನ್ನು ಬಳಸಿ, ಬಲತೋಳನ್ನು ಹಿಡಿದುಕೊಳ್ಳಬೇಕು. ಬಲಗೈಯನ್ನು ಮಡಿಸಿರುವ ಬಲಗಾಲಿನ ಸಮೀಪಕ್ಕೆ ತಂದು ಹಸ್ತವನ್ನು ಮಂಡಿಗಳ ಕೆಳಗಿರಿಸಬೇಕು. ದೇಹವನ್ನು ಹಿಂದಕ್ಕೆ ತಿರುಗಿಸಿಕೊಳ್ಳಬೇಕು. ಈ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸಬೇಕು. ಆಮೇಲೆ ಉಸಿರನ್ನು ಬಿಡುತ್ತಾ ನಿಧಾನವಾಗಿ ಸಹಜಸ್ಥಿತಿಗೆ ಬರುವುದು. ನಂತರ ಮತ್ತೊಂದು ಬದಿಗೆ ಕಾಲುಗಳನ್ನು ಮಡಿಸಿ, ಬಲಗೈಯನ್ನು ಬಳಸಿ ಇದೇ ರೀತಿ ಅಭ್ಯಾಸ ಮಾಡಬೇಕು. ಎರಡೂ ಕಡೆ ಅಭ್ಯಾಸ ಮಾಡಿದ ನಂತರ ಕಾಲುಗಳನ್ನು ಸ್ವಲ್ಪ ವಿಸ್ತರಿಸಿ ವಿಶ್ರಾಂತಿ ಪಡೆಯಬೇಕು.

    ತೀರಾ ಸೊಂಟ ನೋವು ಇರುವವರು ಈ ಆಸನ ಮಾಡಬಾರದು.

    ಪೆಗಾಸಸ್​ ಪ್ರಕರಣ: ಕೋರ್ಟ್​ ಮುಂದೆ ಹೇಳಿಕೆ ಸಲ್ಲಿವುದಿಲ್ಲ ಎಂದ ಸರ್ಕಾರ!

    ಮೆನೋಪಾಸ್​ ಸಮಸ್ಯೆಗಳ ನಿಯಂತ್ರಣಕ್ಕೆ ಉಪಯುಕ್ತ, ಈ ಯೋಗಾಸನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts