More

    ಪೊಲೀಸರು ಸರ್ಕಾರದ ಕೈಗೊಂಬೆಗಳಾಗಿದ್ದಾರೆ; ಬಿಜೆಪಿ ಮತ್ತು ಪೊಲೀಸ್​ ಇಲಾಖೆಯ ವಿರುದ್ಧ ಡಿಕೆಶಿ, ದಿಗ್ವಿಜಯ ಸಿಂಗ್​ ಗುಡುಗು

    ಬೆಂಗಳೂರು: ಬೆಂಗಳೂರಿನಲ್ಲಿರುವ ಮಧ್ಯಪ್ರದೇಶದ ಶಾಸಕರನ್ನು ಭೇಟಿ ಮಾಡಲು ಬಂದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್​ ಅವರನ್ನು ಬಂಧಿಸಿದ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ರಾಜ್ಯ ಸರ್ಕಾರ ಮತ್ತು ಪೊಲೀಸ್​ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ಬೆಂಗಳೂರಿನಲ್ಲಿ ಬಿಜೆಪಿ ಹಿಡಿತದಲ್ಲಿರುವ ಶಾಸಕರು ನಮಗೆ ರಕ್ಷಣೆ ನೀಡಿ ಎಂದು ದಿಗ್ವಿಜಯ ಸಿಂಗ್​ ಅವರಲ್ಲಿ ಮನವಿ ಮಾಡಿದ್ದರು. ಹಾಗಾಗಿ ಅವರು ಇಂದು ಬೆಂಗಳೂರಿಗೆ ಬಂದು ಶಾಸಕರಿದ್ದ ರೆಸಾರ್ಟ್​ನತ್ತ ಹೋಗಿದ್ದರು. ಅವರು ರಾಜ್ಯಸಭಾ ಚುನಾವಣೆಯ ಸ್ಪರ್ಧಿ. ಅವರಿಗೆ ಅವರ ಮತದಾರರಲ್ಲಿ ಮತ ಕೇಳುವ ಹಕ್ಕಿದೆ. ಅದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ. ಅದಕ್ಕೆ ಅವರು ರೆಸಾರ್ಟ್​ಗೆ ತೆರಳುವಾಗ ಪೊಲೀಸರು ಅವರನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ರಾಜ್ಯದಲ್ಲಿ ಕಾನೂನು ಇದೆಯಾ? ಯಾರು ಬೇಕಾದರೂ ರೆಸಾರ್ಟ್​ಗೆ ಹೋಗಬಹುದು. ಆದರೆ ಆ ಸ್ಥಳದಲ್ಲಿ ಅಷ್ಟೊಂದು ಪೊಲೀಸರನ್ನು ನೇಮಿಸುವ ಅವಶ್ಯಕತೆ ಏನಿತ್ತು? ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.

    ರೆಸಾರ್ಟ್​ನಲ್ಲಿ ಮನೋಜ್​ ಚೌಧರಿ ಇದ್ದಾರೆ. ಅವರನ್ನು ಭೇಟಿ ಮಾಡುವುದಕ್ಕೆ ಅವರ ತಂದೆ ನಾರಾಯಣ ಚೌಧರಿ ಬಂದಿದ್ದರು. ಆದರೆ ಮಗನನ್ನ ಭೇಟಿ ಮಾಡುವುದಕ್ಕೆ ತಂದೆಗೇ ಅವಕಾಶ ಕೊಟ್ಟಿಲ್ಲ. ಅವರೇನಾದರೂ ಶಸ್ತ್ರವನ್ನ ಇಟ್ಟುಕೊಂಡು ಬಂದಿದ್ದರಾ? ಪೊಲೀಸರು ಈ ರೀತಿಯಲ್ಲಿ ಸರ್ಕಾರದ ಕೈಗೊಂಬೆಯಂತೆ ವರ್ತಿಸುವುದು ಸರಿಯಲ್ಲ. ಚಾರ್ಟೆಡ್​ ಫ್ಲೈಟ್​ ಬುಕ್​ ಮಾಡಿರುವುದು ಬಿಜೆಪಿ, ಹೋಟೆಲ್​ ಬುಕ್​ ಮಾಡಿರುವುದು ಬಿಜೆಪಿ, ಶಾಸಕರನ್ನ ಖರೀದಿ ಮಾಡುತ್ತಿರುವುದು ಬಿಜೆಪಿ. ಇದೆಲ್ಲವೂ ಬಹಿರಂಗವಾಗಿಯೇ ನಡೆಯುತ್ತಿದೆ ಎಂದು ಶಿವಕುಮಾರ್​ ತಿಳಿಸಿದ್ದಾರೆ.

    ಈ ಕುರಿತಾಗಿ ಮಾತನಾಡಿರುವ ದಿಗ್ವಿಜಯ ಸಿಂಗ್​, “ಬಿಜೆಪಿಯ ಕಾರ್ಯಕ್ರಮಗಳು ಹೇಗಿದೆ ಎನ್ನುವುದು ಜನರಿಗೆ ಗೊತ್ತಿದೆ. ವ್ಯಾಪಂ ಕೇಸ್​, ಮನಿ ಲ್ಯಾಂಡರಿಂಗ್​, ಹನಿಟ್ರ್ಯಾಪ್​ ಪ್ರಕರಣಗಳ ಹಿಂದೆ ಬಿಜೆಪಿ ನಾಯಕರ ಕೈವಾಡವಿದೆ. ಮೈನಿಂಗ್​ ಮಾಫಿಯಾಕ್ಕೆ ಕಮಲನಾಥ್​ ಕಡಿವಾಣ ಹಾಕಿದ್ದರು. ಆದರೆ ಅದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿದೆ. ಕರ್ನಾಟಕದಲ್ಲಿಯೂ ಸಹ ಹಾರ್ಸ್​ ಟ್ರೇಡಿಂಗ್​ ಮಾಡಿದ್ದು ಗೊತ್ತಿರುವ ವಿಚಾರ. ಅದನ್ನ ಬಿಜೆಪಿ ಈಗಲೂ ಮುಂದುವರೆಸಿಕೊಂಡು ಬಂದಿದೆ.” ಎಂದು ಬಿಜೆಪಿ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದರು.

    ಪಕ್ಷದ ಬಗ್ಗೆ ಮಾತನಾಡಿದ ಅವರು, ನಮ್ಮದು ಸಿದ್ಧಾಂತದ ಮೇಲೆ ನಂಬಿಕೆಯಿಟ್ಟಿರುವ ಪಕ್ಷ. ಮಹಾತ್ಮಗಾಂಧಿ, ನೆಹರು ಐಡಿಯಾಲಜಿ ಮೇಲೆ ನಿಂತಿರುವ ಪಕ್ಷ. ಆದರೆ ಇಂದು ಪ್ರಜಾಪ್ರಭುತ್ವ ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ. ಮೋದಿ, ಅಮಿತ್ ಶಾ ಪ್ರಜಾಪ್ರಭುತ್ವಕ್ಕೆ ಮಾನ್ಯತೆ ನೀಡುತ್ತಿಲ್ಲ. ದೇಶದಲ್ಲಿ ಹಲವು ಸಮಸ್ಯೆಗಳು ತಾಂಡವವಾಡುತ್ತಿವೆ. ಉದ್ಯೋಗವಿಲ್ಲದೆ ಜನ ಪರದಾಡುತ್ತಿದ್ದಾರೆ. ಕರೊನಾ ವೈರಸ್ ಇಂದು ತಲ್ಲಣವನ್ನೇ ಮೂಡಿಸಿದೆ. ಇದರ ಬಗ್ಗೆ ಗಮನ ಹರಿಸೋಕೆ ಪ್ರಧಾನಿಗೆ ಬಿಡುವಿಲ್ಲ. ಬಿಜೆಪಿ ನಾಯಕರು ಶಾಸಕರ ಖರೀದಿಗೆ ಒತ್ತು ನೀಡಿದ್ದಾರೆ. ಸುಪ್ರೀಂ ಕೋರ್ಟ್​ ಮತ್ತು ಹೈ ಕೋರ್ಟ್​ಗಳ ಆದೇಶವನ್ನು ಗಾಳಿಗೆ ತೂರಲಾಗುತ್ತಿದೆ ಎಂದು ಹೇಳಿದರು.

    ಪ್ರೀತಿ ಹೆಸರಿನಲ್ಲಿ ಯುವತಿಗೆ ಮೋಸ; ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ

    ಅವರು ಒಂಟಿಯಲ್ಲ, ನಾನೂ ಇದ್ದೇನೆ ಅವರ ಜತೆಗೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಲ್ಲ ಎಂದು ಅಬ್ಬರಿಸಿದ ಕಾಂಗ್ರೆಸ್ ಟ್ರಬಲ್​ ಶೂಟರ್ ಡಿಕೆಶಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts