More

    ‘ಬಿಜೆಪಿಗೆ ಸೇರಿದ್ರೆ ಗಂಗಾಜಲದಂತೆ ಪವಿತ್ರರಾಗ್ತಾರಾ?’

    ಬೆಂಗಳೂರು: ಬೇರೆ ಪಕ್ಷದಲ್ಲಿ ಕೆಟ್ಟವರಾಗಿದ್ದವರು ಬಿಜೆಪಿಗೆ ಸೇರಿದರೆ ಗಂಗಾ ಜಲದಂತೆ ಪವಿತ್ರರಾಗುತ್ತಾರೆಯೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಮಲ ಪಾಳಯದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಮಾಧ್ಯಮಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ವಿನಯ್ ಕುಲಕರ್ಣಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಕುತಂತ್ರ ಮಾಡುತ್ತಿದೆ. ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಯಾವುದೇ ತಪ್ಪು ಮಾಡಿಲ್ಲ. ಅವರ ಬೆನ್ನಿಗೆ ನಾವು ನಿಲ್ಲುತ್ತೇವೆ ಎಂದರು. ಕೆಲ ಬಿಜೆಪಿ ನಾಯಕರು ಈ ಬೆಳವಣಿಗೆಯನ್ನು ಆನಂದಿಸುತ್ತಿದ್ದಾರೆ. ಇದು ಹೆಚ್ಚು ದಿನ ಉಳಿಯಲ್ಲ. ಈ ದೇಶದ ಕಾನೂನು, ಸಂವಿಧಾನ ವ್ಯವಸ್ಥೆ ಬಗ್ಗೆ ನಮಗೆ ಗೌರವವಿದೆ. ನಮ್ಮ ನಾಯಕರು ಹಾಗೂ ಕಾರ್ಯಕರ್ತರಿಗೆ ಕಾನೂನಿನ ರಕ್ಷಣೆ ಸಿಗುತ್ತದೆ ಎಂದು ಹೇಳಿದರು.

    ವಿನಯ್ ಕುಲಕರ್ಣಿ ಅವರ ಪ್ರಕರಣವನ್ನು ರಾಜ್ಯ ಪೊಲೀಸರು ತನಿಖೆ ಮಾಡಿ ವರದಿ ಸಲ್ಲಿಸಿದ್ದಾರೆ. ಆದರೆ, ಆ ಭಾಗದ ಬಿಜೆಪಿ ನಾಯಕರು ಅವರನ್ನು ರಾಜಕೀಯವಾಗಿ ಮುಗಿಸಲು ಈ ಪ್ರಯತ್ನ ಮಾಡಿ ಯಶಸ್ಸಾಗಿದ್ದಾರೆ. ಇದು ಯಾವುದೂ ಶಾಶ್ವತವಲ್ಲ. ನಮ್ಮ ನಾಯಕ ಜಾರ್ಜ್ ಅವರಿಗೆ ಎಷ್ಟು ಕಿರುಕುಳ ನೀಡಿದರು. ಕೊನೆಗೆ ಅವರು ರಾಜೀನಾಮೆ ಕೊಟ್ಟರು. ಆದರೆ ಇವತ್ತು ಅವರಿಗೆ ನ್ಯಾಯಾಲಯದಲ್ಲಿ ಕ್ಲೀನ್ ಚಿಟ್ ಸಿಕ್ಕಿದೆ. ಇಂತಹ ಅನೇಕ ಘಟನೆಗಳಿವೆ ಎಂದು ಡಿಕೆಶಿ ಕುಟುಕಿದರು.

    ರಾಜಕೀಯದಲ್ಲಿ ಕಾಲಚಕ್ರ ತಿರುಗುತ್ತಲೇ ಇರುತ್ತೆ. ಹೀಗಾಗಿ ಕಾನೂನಿನ ವ್ಯಾಪ್ತಿಯಲ್ಲಿ ಕೆಲಸ ಮಾಡಿ. ಒತ್ತಡಕ್ಕೆ ಮಣಿಯಬೇಡಿ ಎಂಬುದು ಸಿಬಿಐ ಅಧಿಕಾರಿಗಳಿಗೆ ನಮ್ಮ ಮನವಿ. ನಿಮ್ಮ ಕಚೇರಿ ರಾಜಕೀಯ ಅಸ್ತ್ರವಾಗಬಾರದು ಎಂದು ಡಿಕೆಶಿ ಸಲಹೆ ನೀಡಿದರು.

    ತವರು ಕ್ಷೇತ್ರದಲ್ಲೇ ಡಾ.ಜಿ.ಪರಮೇಶ್ವರ್​ಗೆ​ ಭಾರಿ ಮುಖಭಂಗ!

    ಎಂಪಿ ಮತ್ತು ಅವನ ಚೇಲಾಗಳು ಮರಳು ದಂಧೆಯಲ್ಲಿದ್ದಾರೆ… ಏಕವಚನದಲ್ಲೇ ಕಿಡಿಕಾರಿದ ಮಾಜಿ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts