More

    ಕೆಎಚ್‌ಎಂ, ಸ್ವಾಮಿ ಸಂಧಾನ ವಿಫಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿ ಸಮ್ಮುಖದಲ್ಲಿ ನಡೆದ ಸಭೆ

    ಕೋಲಾರ : ಹಾವು-ಮುಂಗಸಿಯಂತಿರುವ ವಾಜಿ ಸಂಸದ ಕೆ.ಎಚ್.ಮುನಿಯಪ್ಪ ಹಾಗೂ ಶಾಸಕ ಕೆ.ಆರ್.ರಮೇಶ್‌ಕುವಾರ್ ಅವರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಅಡ್ಡಿಯಾಗಿರುವುದನ್ನು ತಡೆಯಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುವಾರ್ ನಡೆಸಿರುವ ಪ್ರಯತ್ನ ಮತ್ತೊಮ್ಮೆ ವಿಫಲವಾಗಿದೆ.

    ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಡಿ.ಕೆ.ಶಿವಕುವಾರ್ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲವರ್ಧನೆ ಕುರಿತು ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಕೆ.ಎಚ್.ಮುನಿಯಪ್ಪ ಹಾಗೂ ರಮೇಶ್ ಕುವಾರ್ ನಡುವಿನ ಮನಸ್ತಾಪ ನಿವಾರಿಸಲು ಪ್ರಯತ್ನ ನಡೆಯಿತಾದರೂ ಎಂದಿನಂತೆ ಇವರಿಬ್ಬರ ನಡುವೆ ಪರಸ್ವರ ಆರೋಪ, ವಾತಿನ ಚಕಮಕಿ ನಡೆದಿದ್ದರಿಂದ ಶಿವಕುವಾರ್ ತಲೆ ಮೇಲೆ ಕೈಹೊತ್ತು ಕುಳಿತು ರಾಜಿ ಸಂಧಾನ ಮುಂದೂಡಿದರೆಂದು ತಿಳಿದು ಬಂದಿದೆ.

    ಅವಕಾಶವಾದಿ ರಾಜಕಾರಣ ವಾಡುತ್ತಿರುವ ಮುನಿಯಪ್ಪ ಅವರೊಡನೆ ರಾಜಿ ವಾಡಿಕೊಳ್ಳಲು ಸಾಧ್ಯವೇ ಇಲ್ಲ, ಅವರೊಡನೆ ವೇದಿಕೆ ಹಂಚಿಕೊಂಡರೆ ಜನ ನನ್ನನ್ನು ಇನ್ನೆಂದೂ ನಂಬುವುದಿಲ್ಲ ಎಂದು ರಮೇಶ್ ಕುವಾರ್ ಡಿ.ಕೆ.ಶಿವಕುವಾರ್ ಅವರ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

    ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಹೀನಕ್ಕೆ ಮುನಿಯಪ್ಪ ಕಾರಣ, ಕಳೆದ ಚುನಾವಣೆಯಲ್ಲಿ ಸ್ವಯಂಕತ ತಪ್ಪುಗಳಿಂದ ಸೋತು, ಅದರ ಹೊಣೆಯನ್ನು ನಮ್ಮ ಮೇಲೆ ಹಾಕಿದ್ದಾರೆ, ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುವುದಾಗಿ ಎಲ್ಲ ಕಡೆ ಡಂಗುರ ಸಾರುತ್ತಿದ್ದಾರೆ, ಪ್ರತಿ ಕ್ಷೇತ್ರಕ್ಕೂ ತಮ್ಮ ಕಡೆಯವರನ್ನು ಕಳುಹಿಸಿ ನಾವೇ ಅಭ್ಯರ್ಥಿ ಎಂದು ಹೇಳಿಸುವ ಮೂಲಕ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆಂದು ಆರೋಪಿಸಿದರು ಎನ್ನಲಾಗಿದೆ.

    ಆರೋಪಗಳಿಂದ ಸಿಡಿಮಿಡಿಗೊಂಡ ಮುನಿಯಪ್ಪ, ನಾನು ಯಾವತ್ತೂ ನಿಮಗೆ ಮೋಸ ವಾಡಿಲ್ಲ, ನನ್ನ ಸೋಲಿಗೆ ನೀವೇ ಕಾರಣ ಎಂದಾಗ, ಇಬ್ಬರ ನಡುವೆ ವಾಕ್ಸಮರ ಹೆಚ್ಚಾಗುತ್ತಿದ್ದಂತೆ ಶಿವಕುವಾರ್ ನಿಮ್ಮಿಬ್ಬರ ವಿಷಯ ಇಲ್ಲಿಗೆ ನಿಲ್ಲಿಸೋಣ, ಬರಲಿರುವ ಜಿಪಂ, ತಾಪಂ ಚುನಾವಣೆಗೆ ಸಿದ್ಧತೆ ವಾಡಿಕೊಳ್ಳಲು ಕಾರ್ಯತಂತ್ರ ರೂಪಿಸೋಣ ಎಂದು ರಾಜಿ ಸಂಧಾನ ಮುಂದೂಡಿದರು ಎನ್ನಲಾಗಿದೆ.

    ಇವರಿಬ್ಬರ ವಾತಿನ ಚಕಮಕಿ ನಡೆಯುತ್ತಿದ್ದಾಗ ಜಿಲ್ಲೆಯ ಕಾಂಗ್ರೆಸ್ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ರೂಪಕಲಾ, ಎಂಎಲ್‌ಸಿ ನಾಸೀರ್ ಅಹಮ್ಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ವಿಧಾನ ಪರಿಷತ್ ವಾಜಿ ಸಭಾಪತಿ ವಿ.ಆರ್.ಸುದರ್ಶನ್ ಮೌನಕ್ಕೆ ಜಾರಿದ್ದರು ಎನ್ನಲಾಗಿದೆ. ವಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಸಲೀಂ ಅಹಮ್ಮದ್ ಸಹ ಉಪಸ್ಥಿತರಿದ್ದರಾದರೂ ಡ್ಯಾಮೇಜ್ ಕಂಟ್ರೋಲ್ ಸಾಧ್ಯವಾಗಲಿಲ್ಲ ಎನ್ನಲಾಗಿದೆ.

    ಪ್ರತ್ಯೇಕ ಸಭೆ :  ಕೋಲಾರ ಜಿಲ್ಲೆಯ ವಿವಿಧ ತಾಲೂಕುಗಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿದ ಡಿ.ಕೆ.ಶಿವಕುವಾರ್, ಅ.2ರಿಂದ ಒಂದು ತಿಂಗಳು ಗ್ರಾಪಂವಾರು ಪಕ್ಷದ ಸಭೆ ನಡೆಸಿ ಬರಲಿರುವ ತಾಪಂ, ಜಿಪಂ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವಂತೆ ಸೂಚಿಸಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts