More

    ತೆಲಂಗಾಣ ಚುನಾವಣೆ; ಕಾಂಗ್ರೆಸ್​ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ

    ಹೈದರಾಬಾದ್: ಮುಂದಿನ ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ತೆಲಂಗಾಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಗದ್ದುಗೆಗಾಗಿ ಆಡಳಿತರೂಢ ಬಿಆರ್​ಎಸ್​, ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

    ಇದೀಗ ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ಸ್ಥಳೀಐ ಕಾಂಗ್ರೆಸ್​ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಇದರ ಲಾಭವನ್ನು ಪಡೆಯಲು ಆಡಳಿತರೂಢ ಬಿಆರ್​ಎಸ್​ ಮುಂದಾಗಿದೆ. 119 ಸದಸ್ಯಬಲದ ತೆಲಂಗಾಣ ವಿಧಾನಸಭೆಗೆ ನವೆಂಬರ್ 30ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

    ಇತ್ತೀಚಿಗೆ ತಾಂಡೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ವಿಜಯಭೇರಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್​ ಸಮಾವೇಶವನ್ನುದ್ದೇಶಿಸಿ ಮಾತನಾಡುವ ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್​ ರೈತರಿಗೆ ಪ್ರೆತಿನಿತ್ಯ ಐದು ಘಂಟೆಗಳ ಉಚಿತ ವಿದ್ಯುತ್​ ನೀಡುತ್ತಿದೆ ಎಂದು ಹೇಳಿದ್ದರು. ಇತ್ತ ಡಿಸಿಎಂ ಡಿ.ಕೆ. ಶಿವಕುಮಾರ್​ ಹೇಳಿಕೆಯಿಂದ ಲಾಭವನ್ನು ಎತ್ತಲು ಪ್ರಯತ್ನಿಸಿದ ಬಿಆರ್​ಎಸ್​ ನಾಯಕರು ಐದು ಗಂಟೆ ವಿದ್ಯುತ್ ಸರಬರಾಜು ಮಾಡುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೇ ಅಥವಾ ರಾತ್ರಿಯಿಡೀ ವಿದ್ಯುತ್ ನೀಡುವ ನಮ್ಮ ಪಕ್ಷವನ್ನು ಬೆಂಬಲಿಸಬೇಕೇ ಎಂಬುದಾಗಿ ಜನರು ನಿರ್ಧರಿಸಬೇಕು ಎಂದಿದ್ದಾರೆ.

    DK Shivakumar

    ಇದನ್ನೂ ಓದಿ: ಆಟೋಗೆ ವಂದೇ ಭಾರತ್ ರೈಲು ಡಿಕ್ಕಿ; ತಾಯಿ, ಇಬ್ಬರು ಹೆಣ್ಣು ಮಕ್ಕಳು ಮೃತ್ಯು

    ಈ ಕುರಿತು ಮಾತನಾಡಿರುವ ಸಚಿವ ಹರೀಶ್​ ರಾವ್, ರೈತರಿಗೆ ಐದು ಗಂಟೆ ವಿದ್ಯುತ್ ನೀಡುತ್ತಿದ್ದೇವೆ ಎಂದು ಸ್ವತಃ ಕರ್ನಾಟಕದ ಡಿಸಿಎಂ ಅವೇ ಹೇಳಿರುವಾಗ, ತೆಲಂಗಾಣದಲ್ಲಿ 24 ಗಂಟೆ ವಿದ್ಯುತ್ ನೀಡುತ್ತಿರುವ ಬಿಆರ್‌ಎಸ್ ನಾಯಕರು ಕರ್ನಾಟಕಕ್ಕೆ ಭೇಟಿ ನೀಡುವ ಅಗತ್ಯ ಏನಿದೆ. 5 ಗಂಟೆ ವಿದ್ಯುತ್ ನೀಡುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರೂ, ಕರ್ನಾಟಕದ ಅಕ್ಕಪಕ್ಕದ ಹಳ್ಳಿಗಳ ರೈತರು ಈ ಕಡೆ ಬಂದು ಕೇವಲ 3 ಗಂಟೆ ಮಾತ್ರ ಸರಬರಾಜು ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಅನ್ನು ನಂಬಬೇಡಿ ಎಂದು ವಾಗ್ದಾಳಿ ನಡೆಸಿದ್ದಾರೆ.

    ಏತನ್ಮಧ್ಯೆ, ಡಿಕೆ ಶಿವಕುಮಾರ್ ಹೇಳಿಕೆ ನಕಾರಾತ್ಮಕವಾಗಿ ಪರಿಣಮಿಸುತ್ತಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ನಾಯಕರು ವಿದ್ಯುತ್, ನೀರು, ರೈತ ಬಂಧು ಯೋಜನೆ ಮತ್ತು ಇತರ ಸೂಕ್ಷ್ಮ ವಿಷಯಗಳ ಬಗ್ಗೆ ಮಾತನಾಡದೆ ಪಕ್ಷದ ಆರು ಗ್ಯಾರಂಟಿಗಳ ಬಗ್ಗೆ ಮಾತ್ರ ಮಾತುಗಳಲ್ಲಿ ಪ್ರಸ್ತಾಪಿಸುವಂತೆ ಸ್ಟಾರ್ ಪ್ರಚಾರಕರಿಗೆ ಸಲಹೆ ನೀಡುತ್ತಿದ್ದಾರೆ. ಅವರ ಹೇಳಿಕೆಯು ಪಕ್ಷದ ನಾಯಕರು ಮತ್ತು ಕಾರ್ಯಕರ್ತರಲ್ಲಿ ಕಳವಳ ಉಂಟುಮಾಡಿದೆ. ಚುನಾವಣೆಗೆ ಮುನ್ನ ವಿದ್ಯುತ್ ಪೂರೈಕೆಯಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಪ್ರಮುಖ ನಾಯಕರು ಇಂತಹ ಹೇಳಿಕೆ ನೀಡುವುದರ ಬಗ್ಗೆ ಅವರು ಅತೃಪ್ತರಾಗಿದ್ದಾರೆಂದು ಅಧಿಕೃತ ಸುದ್ದಿ ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts