More

    ಕಾವೇರಿ ವಿಚಾರ; ರಾಜ್ಯದ ಜನತೆಗೆ ನಾನು ಉತ್ತರಿಸಬೇಕು, ವಿಪಕ್ಷದವರಿಗಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್​

    ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಸೃಷ್ಟಿಯಾಗಿರುವ ಗೊಂದಲಗಳ ಕುರಿತು ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್,​ “ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಪ್ರತ್ಯೇಕ ಪೀಠ ರಚಿಸಲು ತೀರ್ಮಾನಿಸಿದೆ. ವಿಪಕ್ಷದವರು ಸಾಕಷ್ಟು ಟೀಕೆ, ಟಿಪ್ಪಣಿ ಮಾಡಿದ್ದಾರೆ. ಅವರ ಕಾಲದಲ್ಲಿ ಎಷ್ಟು ನೀರು ಬಿಟ್ಟಿದ್ದಾರೆ ಎಲ್ಲದರ ಮಾಹಿತಿಯಿದೆ” ಎಂದು ಹೇಳಿದರು.

    ಇದನ್ನೂ ಓದಿ: ಬೈಕ್ ಸವಾರನ ಮೇಲೆ ಟ್ರಕ್ ಹಾದು ಇಬ್ಬರು ಸಾವು; ಛತ್ರ ಗ್ರಾಮದ ದುರ್ಗಾ ಹೋಟೆಲ್ ಬಳಿ ಘಟನೆ; ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ

    “ತ್ರಿಸದಸ್ಯ ಪೀಠ ಆದೇಶ ಮಾಡಿದೆ. ಆದ್ರೆ, ನಮ್ಮ ವಾಸ್ತವ ಪರಿಸ್ಥಿತಿ ಏನು ಎಂಬುದನ್ನು ಮುಂದಿಡುತ್ತಿದ್ದೇವೆ. ಕೆಆರ್​ಎಸ್ 22 ಟಿಎಂಸಿ, ಕಬಿನಿ 7 ಟಿಎಂಸಿ, ಹಾರಂಗಿಯಲ್ಲಿ 6 ಟಿಎಂಸಿ, ಹೇಮಾವತಿಯಲ್ಲಿ 20 ಟಿಎಂಸಿ ನೀರಿದೆ. ಬುಧವಾರ ಸಿಎಂ ಅಧ್ಯಕ್ಷತೆಯಲ್ಲಿ ಪ್ಲೋರ್ ಲೀಡರ್ಸ್ ಸಭೆ ಕರೆದಿದ್ದೇವೆ. ಸಭೆಯಲ್ಲಿ ಏನು ತೀರ್ಮಾನ ಆಗುತ್ತದೆಯೋ ಅದರಂತೆ ಹೋಗುತ್ತೀವಿ. ಸರ್ವಪಕ್ಷ ನಿಯೋಗ ಹೋಗಲು ಸೂಚಿಸಿದರೆ ಅದಕ್ಕೂ ರೆಡಿ” ಎಂದು ಡಿಸಿಎಂ ಹೇಳಿದರು.

    “ಇವತ್ತು ಏನಾಗುತ್ತದೆ ಎಂಬುದನ್ನು ಕಾದು ನೋಡುತ್ತಿದ್ದೇವೆ. ಏನು ಮಾಡಬೇಕೆಂದು ಎಲ್ಲಾ ಲೀಗಲ್ ತಂಡದ ಜತೆ ಚರ್ಚಿಸುತ್ತಿದ್ದೇವೆ. ಸರ್ವಪಕ್ಷ ಸಭೆಯಲ್ಲೂ ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ. ತಮಿಳುನಾಡು ಯಾವ ಬೆಳೆ ಬೆಳೆಯುತ್ತೆ ಎಂದು ನಾನು ಹೇಗೆ ಪ್ರಶ್ನಿಸಲಿ, ಯಾವುದೇ ಹೆಚ್ಚಿನ ನೀರನ್ನು ಹರಿಬಿಟ್ಟಿಲ್ಲ. ಆಗಸ್ಟ್ 31 ರವರೆಗೂ ದಿನ 10 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕೆಂದು ಹೇಳಿದ್ದಾರೆ. ರಾಜ್ಯದ ಜನತೆಗೆ ನಾನು ಉತ್ತರ ಕೊಡಬೇಕು” ಎಂದು ಹೇಳಿದರು.

    ಇದನ್ನೂ ಓದಿ: Katta Subramanya Naidu Meets DK Shivakumar | ‘ಆಪರೇಷನ್ ಹಸ್ತ’ ಬೆನ್ನಲ್ಲೇ ಕುತೂಹಲ ಮೂಡಿಸಿದ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು- ಡಿಕೆ ಶಿವಕುಮಾರ್​ ಭೇಟಿ

    “ಜೆಡಿಎಸ್‌, ಬಿಜೆಪಿಯವರಿಗೆ ನಾನು ಉತ್ತರ ಕೊಡಲಾಗುವುದಿಲ್ಲ. ರಾಜ್ಯ ಕಾಪಾಡಬೇಕು, ರೈತರನ್ನು ಕಾಪಾಡಬೇಕು ಅದು ನಮ್ಮ ಉದ್ದೇಶ. ವಿಪಕ್ಷದವರು ಏನು ಬೇಕಾದರು ಮಾತನಾಡಲಿ, ಅವರು ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಈ ಹಿಂದೆ ಇವರೆಲ್ಲಾ ಎಷ್ಟು ನೀರು ಕೊಟ್ಟಿದ್ದರು, ನಮ್ಮ ಕುಮಾರಸ್ವಾಮಿ ಎಷ್ಟು ಬಿಟ್ಟಿದ್ದರು ಎಂಬುದು ತಿಳಿದಿದೆ. ಕಳೆದ 30-40 ವರ್ಷ ಈ ರೀತಿಯ ಸಮಸ್ಯೆಯಾಗಿರಲಿಲ್ಲ. ನಮ್ಮ ಬಳಿ ಈಗ ಇರುವುದೇ ಕೇವಲ 55 ಟಿಎಂಸಿ ನೀರು. ಅವರಿಗೆ 177.8 ಟಿಎಂಸಿ ಬಿಡಬೇಕು” ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಈ ದಿನ ರಿಲೀಸ್​ ಆಗಲಿದೆ ರಾಮ್​-ಶ್ರೀಲೀಲಾ ನಟನೆಯ ‘ಸ್ಕಂದ’ ಟ್ರೇಲರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts