More

    ಪೊಲೀಸರು ಅರೆಸ್ಟ್​ ಮಾಡ್ತಾರೆ ಬಾಗಿಲು ತೆಗೆಯಬೇಡಿ, ತೆರೆದ್ರೂ ಹೆಂಗಸರು ಮಕ್ಕಳನ್ನು ಮುಂದೆ ಬಿಡಿ

    ಬೆಂಗಳೂರು: ಡಿಜೆ ಹಳ್ಳಿ ಗಲಭೆಗೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಲು ಗುರುವಾರ ತಡರಾತ್ರಿ ಸಿಸಿಬಿ ಪೊಲೀಸರು ಕಾರ್ಯಾಚರಣೆಗೆ ಇಳಿದಾಗ ಸ್ಥಳದಲ್ಲಿ ಭಾರೀ ಹೈಡ್ರಾಮ ನಡೆದಿದೆ.

    ಸಿಸಿಬಿ ಪೊಲೀಸರು ತಡರಾತ್ರಿ ಕಾರ್ಯಚರಣೆ ನಡೆಸಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 53 ಪುಂಡರನ್ನು ಬಂಧಿಸಿದ್ದಾರೆ. ಇದಕ್ಕೂ ಮುನ್ನ ಪೊಲೀಸರನ್ನು ಕಂಡು ಕೈಗೆ ಸಿಗದಂತೆ ಆರೋಪಿಗಳು ಓಡುವ ಪ್ರಯತ್ನ ಮಾಡಿದ್ದಾರೆ. ಸಿನಿಮೀಯ ಶೈಲಿಯಲ್ಲಿ ಬೀದಿ ಬೀದಿಯಲ್ಲಿ ಅಟ್ಟಾಡಿಸಿದ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

    ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಒಂದು ಕಡೆ ಅರೆಸ್ಟ್ ಮಾಡಿದ ಬಳಿಕ ಆರೋಪಿಗಳು ವಾಟ್ಸ್​ಆ್ಯಪ್ ಮೂಲಕ ಉಳಿದವರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಹಲವು ಅರೋಪಿಗಳ ಮೊಬೈಲ್​ನಲ್ಲಿ ಎಚ್ಚರಿಕೆ ಸಂದೇಶಗಳು ಪತ್ತೆಯಾಗಿವೆ.

    ಪೊಲೀಸರು ಬಂಧಿಸುತ್ತಾರೆ ಬಾಗಿಲು ತೆಗೆಯಬೇಡಿ. ಒಂದು ವೇಳೆ ಬಾಗಿಲು ತೆರೆದ್ರೆ ಹೆಂಗಸರನ್ನು ಮಕ್ಕಳನ್ನು ಮುಂದೆ ಬಿಡಿ. ನೀವುಗಳು ಕದ್ದು ಕುಳಿತುಬಿಡಿ ಎಂದು ಎಚ್ಚರಿಕೆ ಸಂದೇಶಗಳನ್ನು ಆರೋಪಿಗಳು ಸಹವರ್ತಿಗಳಿಗೆ ಕಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts