More

    ಬಿಂಡಿಗಾ ದೇವೀರಮ್ಮನ ದರ್ಶನ

    ಚಿಕ್ಕಮಗಳೂರು: ಮಂಜು ಮುಸುಕಿದ ವಾತಾವರಣದಲ್ಲಿ ಬಿಂಡಿಗಾ ದೇವೀರಮ್ಮನ ಜಾತ್ರಾ ಮಹೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ದೇವಿ ದರ್ಶನ ಪಡೆದರು. ಆದರೆ ಕರೊನಾದಿಂದಾಗಿ ಈ ಹಿಂದಿನ ವರ್ಷಗಳಂತೆ ಭಕ್ತರು ಆಗಮಿಸಲಿಲ್ಲ.

    ಕರೊನಾ ಸೋಂಕು ಹರಡದಂತೆ ತಡೆಗಟ್ಟಲು ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿ ಪೊಲೀಸ್ ಕಾವಲು ಹಾಕಲಾಗಿತ್ತು. ಸ್ಥಳೀಯ ನೂರು ಜನರನ್ನು ಹೊರತುಪಡಿಸಿ ಹೊರಗಿನಿಂದ ಬರುವ ಭಕ್ತರಿಗೆ ಬೆಟ್ಟವೇರಿ ದೇವರ ದರ್ಶನಪಡೆಯಲು ನಿರ್ಬಂಧ ಹೇರಲಾಗಿತ್ತು. ಆದರೆ ಸಾವಿರಕ್ಕೂ ಹೆಚ್ಚುಜನ ಆಗಮಿಸಿದ್ದರು.

    ಮಧ್ಯರಾತ್ರಿಯಿಂದಲೇ ಕಡಿದಾದ ಹಾದಿಯಲ್ಲಿ ಸುಗಮವಾಗಿ ಶಿಖರವೇರಿದ ಭಕ್ತ ಸಮೂಹ ಸಂಜೆವರೆಗೂ ಸಾಗಿ ದೇವೀರಮ್ಮನ ದರ್ಶನ ಪಡೆದರು. ಮಾಣಿಕ್ಯಧಾರದ ಕಡೆಯಿಂದಲೂ ಬಹಳಷ್ಟು ಭಕ್ತರು ಆಗಮಿಸಿದ್ದರು.

    ಮಲ್ಲೇನಹಳ್ಳಿ ಬಿಂಡಿಗಾ ಗ್ರಾಮಸ್ಥರು ಶುಕ್ರವಾರ ರಾತ್ರಿ 11 ಗಂಟೆಯಿಂದಲೇ ಟಾರ್ಚ್, ಮೊಬೈಲ್ ಬೆಳಕಿನಲ್ಲಿ ಬೆಟ್ಟವೇರಲು ಮುಂದಾದರು. ನಸುಕಿನ ಜಾವದಲ್ಲಿ ನಗರ ಸುತ್ತಮುತ್ತ ಹಲವು ಗ್ರಾಮಗಳ ನೂರಾರು ಭಕ್ತರು ಬೆಟ್ಟಕ್ಕೆ ಆಗಮಿಸಿದರು. ಬೆಳಗಾದರೂ ದಟ್ಟ ಮಂಜು ಮುಸುಕಿದ್ದರಿಂದ ಪರಸ್ಪರ ಕಾಣದಂತೆ ಸಾಗಬೇಕಾಯಿತು.

    ಶಾಸಕ ಸಿ.ಟಿ.ರವಿ ಮತ್ತು ಪತ್ನಿ ಪಲ್ಲವಿ ಸ್ಥಳೀಯರೊಂದಿಗೆ ಮುಂಜಾನೆ ಆಗಮಿಸಿದರು. ಅಕ್ಕಿ, ಬಳೆ, ಕುಪ್ಪಸ, ತುಪ್ಪ, ಹೂವನ್ನು ದೇವರಿಗೆ ಅರ್ಪಿಸಿದರು. ನಂತರ ದಂಪತಿ ದೀಪದಾರತಿ ಬೆಳಗಿದಾಗ ಹಲವು ಮಹಿಳೆಯರು ಸಾಥ್ ನೀಡಿದರು. ಮಹಿಳಾ ಪೊಲೀಸ್ ಅಧಿಕಾರಿಯೂ ಆರತಿಗೆ ಕೈ ಜೋಡಿಸಿ ಕರೊನಾ ನಿವಾರಣೆಗಾಗಿ ಪ್ರಾರ್ಥಿಸಿದರು. ಬೆಟ್ಟದಲ್ಲಿ ಸಂಜೆ 7ಕ್ಕೆ ಹಚ್ಚಿದ ದೀಪವನ್ನು ನಗರದ ಜನ ನೋಡಿ ಆರತಿ ಬೆಳಗಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts