More

    ತಿಪಟೂರು ಎಪಿಎಂಸಿಗೆ ದಿವಾಕರ್ ನೂತನ ಸಾರಥಿ

    ತಿಪಟೂರು: ತಿಪಟೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನೂತನ ಅಧ್ಯಕ್ಷರಾಗಿ ಹಿರಿಯ ಸದಸ್ಯ ಎಚ್.ಬಿ.ದಿವಾಕರ್ ಅವಿರೋಧ ಆಯ್ಕೆಯಾದರು. 20 ತಿಂಗಳ ಅಧಿಕಾರಾವಧಿ ಪೂರ್ಣವಾಗಿದ್ದ ಹಿನ್ನೆಲೆಯಲ್ಲಿ ಕಡೆಯ 20 ತಿಂಗಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಪಿಎಂಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಬಿಜೆಪಿ ಬೆಂಬಲಿತ ದಿವಾಕರ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷರಾಗಿ ಟಿ.ನಾಗರಾಜು ಅವಿರೋಧ ಆಯ್ಕೆಯಾದರು.

    ಒಟ್ಟು 16 ಸಂಖ್ಯಾಬಲದ ಎಪಿಎಂಸಿಯಲ್ಲಿ ವಿವಿಧ ಕಾರಣದಿಂದ ಮೂರು ಸ್ಥಾನಗಳು ತೆರವಾಗಿವೆ. ಅಂತಿಮವಾಗಿ 13 ಸದಸ್ಯರಿಗೆ ಮತ ಚಲಾಯಿಸುವ ಹಕ್ಕಿದ್ದು, ಇದರಲ್ಲಿ 7 ಸದಸ್ಯರು ಬಿಜೆಪಿಗೆ ಬೆಂಬಲ ನೀಡಿದ್ದರಿಂದ ಯಾವುದೇ ಅಡೆತಡೆ ಇಲ್ಲದೆ ದಿವಾಕರ್ ಆಯ್ಕೆ ಸುಗಮವಾಯಿತು.

    ಕಾಂಗ್ರೆಸ್ 4, 3 ನಾಮನಿರ್ದೇಶಿತ ಸದಸ್ಯರು ಸೇರಿ ಬಿಜೆಪಿ 6 ಹಾಗೂ ಜೆಡಿಎಸ್ 3 ಸದಸ್ಯರನ್ನು ಹೊಂದಿದ್ದರು. ಆದರೆ ಜೆಡಿಎಸ್ ಹಾಗೂ ಬಿಜೆಪಿಯ ತಲಾ ಒಬ್ಬರು ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದ ರಿಂದ ಚುನಾವಣೆ ಕಾವು ಏರಿಸಿತ್ತು ಆದರೆ, ಅಂತಿಮ ಕ್ಷಣದಲ್ಲಿ ಇದರ ಲಾಭ ಪಡೆ ಯಲು ಕಾಂಗ್ರೆಸ್ ವಿಲವಾಗಿದ್ದರಿಂದ ಶಾಸಕ ಬಿ.ಸಿ. ನಾಗೇಶ್ ಮುಖಂಡ ಲೋಕೇಶ್ವರ್ ಕೈ ಮೇಲಾಗಿದೆ. ತಹಸೀಲ್ದಾರ್ ಆರ್.ಜಿ. ಚಂದ್ರಶೇಖರ್ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಶಾಸಕ ಬಿ.ಸಿ.ನಾಗೇಶ್, ಮುಖಂಡ ಲೋಕೇಶ್ವರ್, ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಎಂ.ಎಸ್.ಶಿವಸ್ವಾಮಿ ಮತ್ತಿತರರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು.

    ಮಗನ ಒತ್ತಡಕ್ಕೆ ಮಣಿಯದ ತಂದೆ: ಪಿಎಎಂಸಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಹಾಕದಿರುವುದು ಅಚ್ಚರಿ ಮೂಡಿಸಿತು. ಕಾಂಗ್ರೆಸ್ ನಗರಾಧ್ಯಕ್ಷ ಟಿ.ಎನ್.ಪ್ರಕಾಶ್ ಅವರು ತಮ್ಮ ತಂದೆ ತಾಲೂಕು ಜೆಡಿಎಸ್ ನಗರಾಧ್ಯಕ್ಷ ತರಕಾರಿ ನಾಗರಾಜು ಅವರನ್ನು ಕಾಂಗ್ರೆಸ್‌ಗೆ ಕರೆತರುವ ಭರವಸೆ ನೀಡಿದ್ದರಿಂದ ಕಾಂಗ್ರೆಸ್ ಅಧ್ಯಕ್ಷಗಾದಿ ಪಡೆಯಲು ಕಸರತ್ತು ನಡೆಸಿತ್ತು ಎನ್ನಲಾಗಿದೆ. ಆದರೆ, ಮಗನ ಒತ್ತಡಕ್ಕೆ ಮಣಿಯದೆ ಬಿಜೆಪಿ ಜತೆ ಸೇರಿಕೊಂಡು ಉಪಾಧ್ಯಕ್ಷರಾಗಿ ಆಯ್ಕೆಯಾಗುವಲ್ಲಿ ನಾಗರಾಜು ಯಶಸ್ವಿಯಾಗಿದ್ದಾರೆ.

    ಕೈ ಒಳರಾಜಕೀಯ ಬಯಲು: ಕೈಯಲ್ಲಿ 4 ಸ್ಥಾನವಿದ್ದರೂ ಕಾಂಗ್ರೆಸ್ ಒಳಜಗಳದ ಕಾರಣದಿಂದ ಅಧಿಕಾರವನ್ನು ಬಿಜೆಪಿ ಹಾಗೂ ಜೆಡಿಎಸ್ ನಿರಾಯಾಸವಾಗಿ ಬಿಟ್ಟುಕೊಟ್ಟಿತು. ಬಿಜೆಪಿ ಬೆಂಬಲದಿಂದ ಗೆದ್ದಿರುವ ನಲ್ಲಿಕೆರೆ ನಾಗರಾಜು ಕಾಂಗ್ರೆಸ್ ಅಭ್ಯರ್ಥಿಯಾಗಲು ನಡೆಸಿದ್ದ ಕಸರತ್ತು ಅಂತಿಮ ಕ್ಷಣದಲ್ಲಿ ವಿಲವಾಗಿರುವುದು ಕಾಂಗ್ರೆಸ್ ಒಳರಾಜಕೀಯವನ್ನು ಬಯಲುಗೊಳಿಸಿದೆ.

    7.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ತರಕಾರಿ ಮಾರುಕಟ್ಟೆ ಆದಾಯ ಶೂನ್ಯವಾಗಿದೆ. ಇದನ್ನು ಸರಿಪಡಿಸುವ ಹೊಣೆಯಿದ್ದು, ಕಿಬ್ಬನ ಹಳ್ಳಿ ಉಪ ಮಾರುಕಟ್ಟೆ ಸ್ಥಾಪನೆ, 10 ವರ್ಷದಿಂದ ನನೆಗುದಿಗೆ ಬಿದ್ದಿರುವ ಕೋಕೋ, ಟೆಕ್ ಪಾರ್ಕ್, ಕೊನೇಹಳ್ಳಿಯಲ್ಲಿರುವ ತೆಂಗು ಸಂಸ್ಕರಣಾ ಘಟಕ ಸ್ಥಾಪನೆಗೆ ಒತ್ತು ನೀಡುತ್ತೇನೆ.
    ಎಚ್.ಬಿ.ದಿವಾಕರ್ ಎಪಿಎಂಸಿ ನೂತನ ಅಧ್ಯಕ್ಷ ತಿಪಟೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts