More

    ಬೂದಗುಂಪಾದಲ್ಲಿ ಮತದಾನ ಜಾಗೃತಿ

    ಕಾರಟಗಿ (ಕೊಪ್ಪಳ): ಮತದಾನ ದೇಶದ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ ಮತ್ತು ಹಕ್ಕು ಎಂದು ಸೆಕ್ಟರ್ ಅಧಿಕಾರಿ ನಾಗರಾಜ ಹೇಳಿದರು.

    ತಾಲೂಕಿನ ಬೂದಗುಂಪಾ ಗ್ರಾಮದ ಶ್ರೀಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ಮಂಗಳವಾರ ಏರ್ಪಡಿಸಿದ್ದ ಮತದಾನ ಜಾಗೃತಿ ಹಾಗೂ ಇವಿಎಂ, ವಿವಿ ಪ್ಯಾಡ್ ಪ್ರಾತ್ಯಕ್ಷತೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕು. ಸ್ವಾತಂತ್ರ್ಯ ಭಾರತದಲ್ಲಿ ಮತದಾನ ಸಾಂವಿಧಾನಿಕ ಹಕ್ಕು. ಇದನ್ನು ಚಲಾಯಿಸುವುದರಿಂದ ದೇಶದ ಪ್ರಜಾಪ್ರಭುತ್ವ ಬಲಪಡಿಸಿದಂತಾಗುತ್ತದೆ. ಸಂವಿಧಾನದ ಆಶಯಗಳಾದ ಶಾಸಕಾಂಗ, ನ್ಯಾಯ್ಯಾಂಗ, ಕಾರ್ಯಾಂಗಳನ್ನು ಗೌರವಿಸುವ ಮತ್ತು ಕಾಪಾಡುವ ಜತೆಗೆ ಸಮಾನತೆ, ನ್ಯಾಯ, ಸ್ವಾತಂತ್ರ್ಯ ಒದಗಿಸುವ ಸರ್ಕಾರ ರೂಪಿಸುವ ಜವಾಬ್ದಾರಿ ಮತದಾನಕ್ಕಿದೆ.

    ಆದ್ದರಿಂದ ಮತದಾನದ ಕುರಿತುಪ್ರಜ್ಞಾವಂತರು, ವಿದ್ಯಾರ್ಥಿ, ಯುವಜನರು ಗ್ರಾಮೀಣ ಪ್ರದೇಶ ಹಾಗೂ ಸುತ್ತಲಿನವರಿಗೆ ಮತ ಚಲಾಯಿಸುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು. ಬಳಿಕ ಇವಿಎಂ ಮತ್ತು ವಿವಿ ಪ್ಯಾಡ್ ಪ್ರಾತ್ಯಕ್ಷತೆಯ ಮೂಲಕ ಮತದಾನ ಮಾಡುವ ಬಗೆಯನ್ನು ಸಾರ್ವಜನಿಕರಿಗೆ ತೋರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts