More

    ದೇಶ ಅಭಿವೃದ್ಧಿಗೆ ಯೋಜನೆ ಮುಖ್ಯ, ಸಂಸದ ಸಂಗಣ್ಣ ಕರಡಿ ಅನಿಸಿಕೆ

    ಕೊಪ್ಪಳ: ಭಾರತದತ್ತ ಇಂದು ವಿಶ್ವವೇ ತಿರುಗಿ ನೋಡುತ್ತಿದೆ. 2047ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು 100 ವರ್ಷ ಪೂರೈಸಲಿದೆ. ಅಷ್ಟರೊಳಗೆ ವಿಶ್ವದಲ್ಲಿ ನಮ್ಮ ದೇಶ ಅಭಿವೃದ್ಧಿ ಹೊಂದಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಕನಸು. ಆ ನಿಟ್ಟಿನಲ್ಲಿ ವಿಕಸಿತ ಭಾರತ ಕಲ್ಪನೆ ನೀಡಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

    ನಗರ ಹಾಗೂ ತಾಲೂಕಿನ ಭಾಗ್ಯನಗರ ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಕಸಿತ ಭಾರತ ಜಾಗೃತಿ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.

    ದೇಶವನ್ನು 70 ವರ್ಷ ಆಳಿದ ಕಾಂಗ್ರೆಸ್​ ನಿರೀತ ಅಭಿವೃದ್ಧಿ ಮಾಡಲಿಲ್ಲ. ಆದರೆ, 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಕೇವಲ 10 ವರ್ಷದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಇಂದು ವಿಶ್ವದ ಶಕ್ತಿಶಾಲಿ ರಾಷ್ಟ್ರಗಳು ಮೋದಿ ಅವರನ್ನು ಕೆಂಪು ಹಾಸಿಗೆ ಹಾಸಿ ಸ್ವಾಗತಿಸುತ್ತಿವೆ. ಕೇಂದ್ರದ ಯೋಜನೆಗಳನ್ನು ಜನರಿಗೆ ಪರಿಚಯಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದರು.


    ದೇಶ ಅಭಿವೃದ್ಧಿಗೆ ಯೋಜನೆ ಮುಖ್ಯ, ಸಂಸದ ಸಂಗಣ್ಣ ಕರಡಿ ಅನಿಸಿಕೆ

    ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಬಡ ಜನರ ಆರ್ಥಿಕ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಉಜ್ವಲ ಯೋಜನೆ, ಪ್ರಧಾನ ಮಂತ್ರಿ ಅವಾಸ್​ ಯೋಜನೆ, ಜಲ ಜೀವನ ಮಿಷಿನ್​, ಮುದ್ರಾ ಯೋಜನೆ, ಆಯುಷ್ಮಾನ್​ ಭಾರತ್​ ಯೋಜನೆ, ಸಕನ್ಯಾ ಸಮೃದ್ಧಿ ಯೋಜನೆ, ಜನೌಷಧ ಸೇರಿ ಅನೇಕ ಯೋಜನೆ ರೂಪಿಸಿದೆ. ಎಲ್ಲರೂ ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು. ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಅವುಗಳನ್ನು ಅರ್ಹರಿಗೆ ತಲುಪಿಸಬೇಕು ಎಂದು ಸಲಹೆ ನೀಡಿದರು.

    ಲೀಡ್​ ಬ್ಯಾಂಕ್​ ಮ್ಯಾನೇಜರ್​ ವೀರೇಂದ್ರಕುಮಾರ್​, ನಗರಾಭಿವೃದ್ಧಿ ಕೋಶದ ಕೌಶಲ್ಯಾಭಿವೃದ್ಧಿ ವಿಭಾಗದ ಅಹ್ಮದ್​ ಹುಸೇನ್​, ಪಪಂ ಮುಖ್ಯಾಧಿಕಾರಿ ಸುರೇಶ ಬಬಲಾದ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಪ್ರಶಾಂತ್​ ತಟ್ಟಿ, ಅಂಚೆ ಇಲಾಖೆ ಅಧಿಕಾರಿ ಉಷಾ ತಮ್ಮ ಇಲಾಖೆ ಯೋಜನೆಗಳ ಮಾಹಿತಿ ನೀಡಿದರು.


    ದೇಶ ಅಭಿವೃದ್ಧಿಗೆ ಯೋಜನೆ ಮುಖ್ಯ, ಸಂಸದ ಸಂಗಣ್ಣ ಕರಡಿ ಅನಿಸಿಕೆ

    ಜೆಇ ಶೋಭಾ ನಾಯಕ, ಪಪಂ ಸದಸ್ಯರಾದ ಮಂಜುಳಾ ಮ್ಯಾಗಳಮನಿ, ಜಯಮಾಲಾ ಶೇಡ್ಮಿ, ರೋಷನ್​ ಅಲಿ, ಜಗದೀಶ ಮಾಲಗಿತ್ತಿ, ಗವಿಸಿದ್ದಪ್ಪ, ಪರಶುರಾಮ ನಾಯಕ, ಮಾಜಿ ಸದಸ್ಯರಾದ ರುಕ್ಮಣ್ಣ ಶ್ಯಾವಿ, ವಿಜಯಕುಮಾರ್​ ಪಾಟೀಲ್​, ನೀಲಕಂಠಪ್ಪ ಮೈಲಿ, ಗಿರೀಶ್​ ಪಾನಂಟಿ ಇತರರಿದ್ದರು.

    ಅಸ್ವಚ್ಛತೆ ಕಂಡು ಅಸಮಾಧಾನಗೊಂಡ ಎಂಪಿ: ಪಪಂ ಮುಂಭಾಗವೇ ವೇದಿಕೆ ಹಾಕಲಾಗಿತ್ತು. ಆದರೆ ಚರಂಡಿ ಸ್ವಚ್ಛಗೊಳಿಸದ ಕಾರಣ ದುರ್ವಾಸನೆ ಬರುತ್ತಿತ್ತು. ಇದರಿಂದ ಅಸಮಾಧಾನಗೊಂಡ ಸಂಸದ ಸಂಗಣ್ಣ, ಮುಖ್ಯಾಧಿಕಾರಿ ಸುರೇಶ ಬಬಲಾದಗೆ ತರಾಟೆ ತೆಗೆದುಕೊಂಡರು. ಕೇಂದ್ರ ಸರ್ಕಾರ ಸ್ವಚ್ಛ ಭಾರತ್​ ಮಿಷಿನ್​ ಅಡಿ ಸ್ವಚ್ಛತೆ ಕಾಪಾಡಲು ಸೂಚಿಸಿದೆ. ಆದರೆ, ಅಧಿಕಾರಿಗಳು ಸರಿಯಾಗಿ ಅನುಷ್ಠಾನ ಮಾಡಬೇಕು. ಇಲ್ಲದಿದ್ದರೆ ಜನ ನಮ್ಮನ್ನು ಬೈಯ್ಯುತ್ತಾರೆ ಎಂದು ಕುಟುಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts