More

    ಕೊಪ್ಪಳದಲ್ಲಿ ಮುಂದುವರಿದ ಮನೆ ಕಳ್ಳತನ, ಖಾಸಗಿ ಉದ್ಯೋಗಿ ಮನೆಗೆ ಕನ್ನ

    ಕೊಪ್ಪಳ: ನಗರದಲ್ಲಿ ಮನೆ ಕಳ್ಳತನ ಪ್ರಕರಣಗಳು ಮುಂದುವರೆದಿವೆ. ಪೊಲೀಸರು ಕಟ್ಟೆಚ್ಚರವಹಿಸಿದಾಗ್ಯು ಕಳ್ಳರು ಕೈ ಚಳಕ ತೋರಿಸುವುದು ಮುಂದುವರಿಸಿದ್ದಾರೆ.

    ನಗರದ ಬಸವ ನಗರದಲ್ಲಿ ಗುರುವಾರ ತಡರಾತ್ರಿ ಮನೆ ಕಳ್ಳತನವಾಗಿದೆ. ಖಾಸಗಿ ಕಂಪನಿಯೊಂದರ ಉದ್ಯೋಗಿ ಪಾಂಡುರಂಗ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ.

    25 ಸಾವಿರ ರೂ.ನಗದು, ಬಂಗಾರ ಹಾಗೂ ಎರಡು ಬೈಕ್ ಕದ್ದೊಯ್ದಿದ್ದಾರೆನ್ನಲಾಗಿದೆ. ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪಾಂಡುರಂಗ ರಾತ್ರಿ ಪಾಳೆ ಕೆಲಸಕ್ಕೆ ತೆರಳಿದ್ದಾರೆ. ಮನೆಯ ಇತರ ಸದಸ್ಯರು ಮದುವೆ ಕಾರಣ ಬೇರೆ ಊರಿಗೆ ತೆರಳಿದ್ದಾರೆ. ಮನೆಯಲ್ಲಿ ಯಾರೂ ಇಲ್ಲವೆಂಬ ಮಾಹಿತಿ ಪಡೆದ ಕಳ್ಳರು ಕನ್ನ ಹಾಕಿದ್ದಾರೆ.

    ಕೊಪ್ಪಳ ನಗರದಲ್ಲಿ ಮನೆ, ಅಂಗಡಿ ಕಳ್ಳತನ ಪ್ರಕರಣಗಳು ಮುಂದುವರೆದಿವೆ. ಪೊಲೀಸರು ಕೆಲವರನ್ನು ಹಿಡಿದು ಕದ್ದ ವಸ್ತುಗಳನ್ನು ಮಾಲೀಕರಿಗೆ ವಾಪಸ್ ಕೊಡಿಸಿದ್ದಾರೆ. ಆದರೂ ಕಳ್ಳತನಗಳು ಮುಂದುವರೆದಿವೆ.

    ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಿದೆ. ಬೇರೆಡೆ ತೆರಳುವಾಗ ಅಕ್ಕಪಕ್ಕದವರಿಗೆ ಮಾಹಿತಿ ನೀಡುವುದು, ಬೀಟ್ ಪೊಲೀಸರಿಗೆ ವಿಷಯ ತಿಳಿಸಬೇಕು. ಪೊಲೀಸರು ಕಳ್ಳರ ಬಲೆಗೆ ನೂತನ ತಂತ್ರಗಳನ್ನು ಅನುಸರಿಸಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts