More

    ಹೊಸ ಕಾನೂನು ರದ್ದುಗೊಳಿಸಲು ಚಾಲಕರ ಆಗ್ರಹ

    ಕೊಪ್ಪಳ: ಹಿಟ್​ ಅಂಡ್​ ರನ್​ ಹೊಸ ಕಾನೂನು ವಿರೋಧಿಸಿ ಕರ್ನಾಟಕ ಚಾಲಕರ ಒಕ್ಕೂಟ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ನಗರದ ಡಿಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

    ರಸ್ತೆ ಅಪಘಾತದಲ್ಲಿ ಚಾಲಕರನ್ನು ಶಿೆಗೆ ಗುರಿಪಡಿಸುವ ಮಾರಕ ಅಂಶಗಳನ್ನು ಸೇರಿಸಲಾಗಿದೆ. ನಮ್ಮ ವಾಹನಕ್ಕೆ ಯಾರಾದರೂ ಡಿಕ್ಕಿ ಮಾಡಲಿ ಅಥವಾ ನಮ್ಮ ವಾಹನ ತಾಂತ್ರಿಕ ತೊಂದರೆಯಿಂದ ಅಪಘಾತಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಅಪಘಾತದಲ್ಲಿ ಪ್ರಾಣ ಹಾನಿಯಾದರೆ ಅಥವಾ ಪೆಟ್ಟು ಬಿದ್ದರೆ ಚಾಲಕರಿಗೆ ಶಿೆಗೆ ಗುರಿಪಡಿಸುವುದು ಸರಿಯಲ್ಲ. 10 ಲಕ್ಷ ರೂ. ದಂಡ ಹಾಗೂ 7 ವರ್ಷ ಜೈಲು ಶಿೆ ವಿಧಿಸಲು ಅವಕಾಶ ನೀಡಿದ್ದು ಸಾಧುವಲ್ಲೆಂದು ಆಕ್ರೋಶ ವ್ಯಕ್ತಪಡಿಸಿದರು.

    ಅಷ್ಟೊಂದು ಹಣ ನಮ್ಮ ಬಳಿ ಇರುವಂತಿದ್ದರೆ ನಾವು ಚಾಲಕ ವೃತ್ತಿ ಬಿಟ್ಟು ಬೇರೆ ಉದ್ಯಮ ಮಾಡುತ್ತಿದ್ದೆವು. ಮಾಸಿಕ ವೇತನ ಪಡೆದು ಚಾಲನಾ ವೃತ್ತಿ ಮಾಡುತ್ತಿದ್ದೇವೆ. ದೇಶದಲ್ಲಿ ರೈತರು, ಯೋಧರಂತೆ ಚಾಲಕರು ಮುಖ್ಯ ಎಂದು ಕೇಂದ್ರ ಸರ್ಕಾರ ಅರಿಯಲಿ. ಚಾಲನೆ ನಿಲ್ಲಿಸಿದರೆ ದೇಶದ ಅರ್ಥ ವ್ಯವಸ್ಥೆ ಹಾಳಾಗುತ್ತದೆ. ಹೀಗಾಗಿ ಮೊದಲಿದ್ದ ಕಾನೂನು ಮುಂದುವರಿಸಬೇಕು. ಚಾಲಕರಿಗೆ ಮಾರಕ ಅಂಶಗಳನ್ನು ಸೇರಿಸಬಾರದು ಎಂದು ಒತ್ತಾಯಿಸಿದರು.

    ಚಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ವೀರಣ್ಣ ಕೊಮಲಾಪೂರ, ಉಪಾಧ್ಯಕ್ಷ ಕಳಕಪ್ಪ ಸೂಡಿ, ಪ್ರ.ಕಾರ್ಯದರ್ಶಿ ಪ್ರಕಾಶ ಹಿರೇಮಠ, ತಾಲೂಕಾಧ್ಯಕ್ಷ ನಾಗರಾಜ ಕಂಬಳಿ, ಉಪಾಧ್ಯಕ್ಷ ಸುರೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts