More

    ಮತದಾನಕ್ಕೆ ನಿಷ್ಕಾಳಜಿ ವಹಿಸದಿರಿ, ಡಿಸಿ ನಲಿನ್​ ಅತುಲ್​ ಮನವಿ

    ಕೊಪ್ಪಳ: ಮತದಾನ ಪ್ರತಿಯೊಬ್ಬ ವಯಸ್ಕ ನಾಗರಿಕನ ಹಕ್ಕು. ಅರ್ಹರು ಮತ ಚಲಾವಣೆಗೆ ನಿಷ್ಕಾಳಜಿ ತೋರದಿರಿ ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ಮನವಿ ಮಾಡಿದರು.

    ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ನಗರದಲ್ಲಿ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಕ್ಯಾಂಡಲ್​ ಲೈಟ್​ ಮೆರವಣಿಗೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಲೋಕಸಭಾ ವ್ಯಾಪ್ತಿಯಲ್ಲಿ 18 ಲಕ್ಷ ಮತದಾರರಿದ್ದಾರೆ. ಕಳೆದ ಬಾರಿ ಶೇ.70ರಷ್ಟು ಮತದಾನವಾಗಿದೆ. ಈ ಬಾರಿ ಇನ್ನಷ್ಟು ಹೆಚ್ಚಿಸಬೇಕಿದೆ. ನಮ್ಮ ಮತ ನಮ್ಮ ಹಕ್ಕು. ಕಡ್ಡಾಯವಾಗಿ ಚಲಾಯಿಸಿ. ಯಾವೊಬ್ಬ ಅರ್ಹ ಮತದಾರ ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿಯಬಾರದು. ಮತದಾನ ಪ್ರಮಾಣ ಹೆಚ್ಚಳಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಕೇಳಿಕೊಂಡರು.

    ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು. ಬಸವೇಶ್ವರ ವೃತ್ತದಿಂದ ಅಶೋಕ ವೃತ್ತ, ಗಡಿಯಾರ ಕಂಬ ವೃತ್ತ ಮೂಲಕ ಕ್ಯಾಂಡಲ್​ ಲೈಟ್​ ಮೆರವಣಿಗೆ ಸಾಗಿತು. ಅಧಿಕಾರಿಗಳು, ಸಿಬ್ಬಂದಿ, ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡು ಮತದಾನ ಜಾಗೃತಿ ಮೂಡಿಸಿದ್ದು ಸಾರ್ವಜನಿಕರ ಗಮನ ಸೆಳೆಯಿತು.

    ಎಡಿಸಿ ಸಾವಿತ್ರಿ ಕಡಿ, ಜಿಪಂ ಉಪ ಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್​., ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್​, ಕೊಪ್ಪಳ ತಹಸೀಲ್ದಾರ್​ ವಿಠ್ಠಲ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ, ಜಿಲ್ಲಾ ಸ್ವೀಪ್​ ಐಕಾನ್ಸ್​ ಡಾ.ಶಿವಕುಮಾರ್​ ಮಾಲಿಪಾಟೀಲ್​, ಪೂರ್ಣಿಮಾ, ರಮ್ಯಾ ಹಾಗೂ ಮಹೆಬೂಬ್​ ಕಿಲ್ಲೆದಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts