More

    ಎಸ್​ಯುಸಿಐ ಪದಾಧಿಕಾರಿಗಳ ಪ್ರತಿಭಟನೆ

    ಕೊಪ್ಪಳ: ರೈತರಿಗೆ ಬರ ಪರಿಹಾರ ವಿತರಣೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಸ್​ಯುಸಿಐ ಪಕ್ಷದ ಪದಾಧಿಕಾರಿಗಳು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಪಕ್ಷದ ಸಂಚಾಲರ ಶರಣಪ್ಪ ಉದ್ಬಾಳ ಮಾತನಾಡಿ, ಜಿಲ್ಲೆಯಲ್ಲಿ ತೀವ್ರ ಬರವಿದೆ. ರೈತರು, ಕೃಷಿ ಕೂಲಿಕಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳು ಪರಿಹಾರ ವಿತರಣೆ ಮಾಡುತ್ತಿಲ್ಲ. ಬರಗಾಲ ಕಾಮಗಾರಿ ಆರಂಭವಾಗಿಲ್ಲ. ಜನರು ಗುಳೆ ಹೋಗುತ್ತಿದ್ದಾರೆ. ಅದನ್ನು ತಡೆದು ಉದ್ಯೋಗ ನೀಡಬೇಕು. ಜಾನುವಾರುಗಳಿಗೆ ಮೇವು ಪೂರೈಸಬೇಕು. ಖಾಲಿ ಇರುವ ವಿವಿಧ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕು. ತುಂಗಭದ್ರಾ ನದಿ ಇದ್ದರೂ ಕುಡಿವ ನೀರಿಗೆ ಬರವಿದೆ. ಗ್ರಾಮೀಣ ರಸ್ತೆಗಳು ಹಾಳಾಗಿದ್ದು, ಅವನ್ನು ಸರಿಪಡಿಸಬೇಕು. ನರೇಗಾ ಕೂಲಿ ಕೆಲಸವನ್ನು 150 ದಿನಗಳಿಗೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು.

    ಶರಣು ಗಡ್ಡಿ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ತಜ್ಞ ವೈದ್ಯರನ್ನು ನೇಮಿಸಿ. ಎಲ್ಲರಿಗೂ ಔಷಧ ಸಿಗಬೇಕು. ಅವೈಜ್ಞಾನಿಕವಾಗಿ ಹಿಟ್ನಾಳ್​ ಬಳಿ ರಾಷ್ಟ್ರೀಯ ಹೆದ್ದಾರಿಗೆ ಹಾಕಿದ ಟೋಲ್​ ತೆಗೆಸಬೇಕು. ಗ್ರಾಮೀಣ ಭಾಗದ ಶಾಲಾ&ಕಾಲೇಜುಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು. ಬಗರ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬೇಕು. ಕೊಪ್ಪಳದ ಗಾಂಧಿನಗರ, ಕುವೆಂಪು ನಗರ, ಕಾಳಿದಾಸ ನಗರಗಳಿಗೆ ಮೂಲ ಸೌಕರ್ಯ ಒದಗಿಸಬೇಕೆಂದು ಒತ್ತಾಯಿಸಿದರು.

    ಪಕ್ಷದ ಸದಸ್ಯರಾದ ಶರಣು ಪಾಟೀಲ್​, ಗಂಗರಾಜ, ದೇವರಾಜ, ಸಿದ್ದಲಿಂಗರೆಡ್ಡಿ, ಶಾರದ, ಮಂಜುಳಾ, ಮೌನೇಶ, ಮುದಿಯಪ್ಪ, ಉಮೇಶ್​, ದುರ್ಗಮ್ಮ, ದ್ಯಾಮಣ್ಣ ರೇಣುಕಮ್ಮ, ಯಮನೂರಪ್ಪ, ವಿರುಪಾಕ್ಷಿ, ಬಸರಾಜಪ್ಪ, ಶಂಕ್ರಮ್ಮ ಬಸವರಾಜಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts