More

    ಕೊಪ್ಪಳದಲ್ಲಿ ಜಿಲ್ಲಾಡಳಿತದಿಂದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನಾಚರಣೆ

    ಕೊಪ್ಪಳ:ಅಮರ ಶಿಲ್ಪಿ ಎಂದು ಖ್ಯಾತಿಯಾದ ಜಕಣಾಚಾರಿ ಅವರ ಕಾಯಕ ಶ್ರದ್ಧೆ ನಮಗೆಲ್ಲ ಮಾದರಿ ಎಂದು ತಹಸೀಲ್ದಾರ್​ ವಿಠ್ಠಲ ಚೌಗಲಾ ಹೇಳಿದರು.

    ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಜಕಣಾಚಾರಿ ಶ್ರೇಷ್ಠ ಶಿಲ್ಪಿ. ಇತಿಹಾಸದ ಮೂಲಕ ನಮಗೆ ಅವರ ಶಿಲ್ಪ ಕಲೆ ಬಗ್ಗೆ ತಿಳಿದಿದೆ. ಇಂದಿಗೂ ಬೇಲೂರು, ಸೋಮನಾಥ ದೇವಾಲಯ, ಹಳೇಬೀಡುಗಳಲ್ಲಿ ಅವರ ಕೆತ್ತನೆ ಕುಸರಿ ಗಮನಿಸಬಹುದು. ಪೂರ್ಣ ಶ್ರದ್ಧೆ ಮತ್ತು ತನ್ಮಯತೆಯಿಂದ ಮಾತ್ರ ಅಂತಹ ಶಿಲ್ಪಗಳನ್ನು ರಚಿಸಲು ಸಾಧ್ಯ. ಅವರಂತೆ ಎಲ್ಲರೂ ತಮ್ಮ ತಮ್ಮ ಕಾಯಕದಲ್ಲಿ ನಿಷ್ಠೆ ಹೊಂದಬೇಕಿದೆ ಎಂದರು.

    ಉಪನ್ಯಾಸಕ ರಾಮಚಂದ್ರ ಬಡಿಗೇರ ಮಾತನಾಡಿ, ಜಗತ್ತಿಗೆ ಅದ್ಭುತ ಶಿಲ್ಪಕಲೆ ಪರಿಚಯಿಸಿದವರು ಅಮರಶಿಲ್ಪಿ ಜಕಣಾಚಾರಿ. 11ನೇ ಶತಮಾನದ ಅವರ ಶಿಲ್ಪಕಲೆಯನ್ನು ಇಂದಿಗೂ ಸರಿಗಟ್ಟಲು ಅಥವಾ ಹೋಲಿಕೆ ಮಾಡಲು ಸಾಧ್ಯವಿಲ್ಲ.

    ವಿಶ್ವಕರ್ಮ ಸಮುದಾಯಕ್ಕೆ ಕಿರೀಟಪ್ರಾಯರಾಗಿರುವ ಜಕಣಾಚಾರಿ ತಮ್ಮ ಕಲೆ, ಶ್ರದ್ಧೆ ನಂಬಿ ಬದುಕಿದವರು. ಅಷ್ಟು ಪ್ರಸಿದ್ಧ ಶಿಲ್ಪಿಯಾದರೂ ಯಾವೊಂದು ಶಿಲ್ಪದ ಮೇಲೂ ಹೆಸರು ನಮೂದಿಸಿಲ್ಲ. ಹೆಸರಿಗೆ ಆಸೆ ಪಡದೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆಂದು ತಿಳಿಸಿದರು.

    ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್​ ಮರಬನಳ್ಳಿ, ಸಿರಸಪ್ಪಯ್ಯನಮಠದ ಶೇಷಪ್ಪಯ್ಯ ಮಹಾಸ್ವಾಮಿ, ಗಿಣಿಗೇರಿಯ ಸುಬ್ಬಣ್ಣಾಚಾರ್​, ನರಸಿಂಹ ದಿವಾಕರ ಮಹಾಸ್ವಾಮಿ,

    ಶ್ರೀಕಂಠಸ್ವಾಮಿ, ಸಮುದಾಯದ ಜಿಲ್ಲಾಧ್ಯಕ್ಷ ಈಶಪ್ಪ ಬಡಿಗೇರ, ಗೌರವಾಧ್ಯಕ್ಷ ಶೇಖರಪ್ಪ ಬಡಿಗೇರ, ತಾಲೂಕು ಅಧ್ಯಕ್ಷ ದೇವಪ್ಪ ಬಡಿಗೇರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts