More

    ನೇಹಾ ಕುಟುಂಬಕ್ಕೆ ನ್ಯಾಯ ಕೊಡಿಸಿ

    ಕೊಪ್ಪಳ: ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಖಂಡಿಸಿ ಹಾಗೂ ಅವರ ಕುಟುಂಬಕ್ಕೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ಶ್ರೀ ವೀರಮಹೇಶ್ವರ ಕ್ಷೇಮಾಭಿವೃದ್ಧಿ ಸಂದ ಪದಾಧಿಕಾರಿಗಳು ಶನಿವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

    ವಿದ್ಯಾನಗರದ ಕೆಎಲ್​ಇ ಕಾಲೇಜಿನಲ್ಲಿ ಎಂಸಿಎ ಓದುತ್ತಿದ್ದ ನೇಹಾ ಹಿರೇಮಠ ಬರ್ಬರವಾಗಿ ಕೊಲೆಯಾಗಿದ್ದಾಳೆ. ಇದು ಮನು ಕುಲವೆ ತಲೆ ತಗ್ಗಿಸುವ ಕೆಲಸ. ಪ್ರೀತಿ ನಿರಾಕರಿಸಿದ್ದಾಳೆ ಎಂಬ ಕಾರಣಕ್ಕೆ ಅದೇ ಕಾಲೇಜಿನ ಯಾಜ್​ ಎಂಬಾತ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಮೊದಲಿನಿಂದಲೂ ಪ್ರೀತಿಸುವಂತೆ ಪೀಡಿಸಿದ್ದಾನೆ. ಆಗಾಗ ಕಿರುಕುಳ ನೀಡಿದ್ದಾನೆ. ಇದರ ಹಿಂದೆ ದುರುದ್ದೇಶ ಇರುವುದು ಸ್ಪಷ್ಟ. ಪೂರ್ವ ಯೋಜನೆ ಮಾಡಿಕೊಂಡೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದರು.

    ಟನೆಗೆ ರಾಜ್ಯ ಸರ್ಕಾರ ಸ್ಪಂದಿಸಿದ ರೀತಿಯೂ ಮಹಿಳೆಯರಲ್ಲಿ ಭಯ ಉಂಟು ಮಾಡುವಂತಿದೆ. ಯಾರೇ ಆಗಲಿ ತಕ್ಕ ಶಿೆ ನೀಡಬೇಕು. ಅಪರಾಧಿಗಳಿಗೆ ಗಲ್ಲು ಶಿೆ ಕೊಡಿಸಬೇಕು. ವಿದ್ಯಾರ್ಥಿನಿ ಕುಟುಂಬಕ್ಕೆ ಸೂಕ್ತ ನ್ಯಾಯ, ಪರಿಹಾರ ಒದಗಿಸಬೇಕು. ಜತೆಗೆ ರಕ್ಷಣೆ ನೀಡಬೇಕು. ರಾಜ್ಯದಲ್ಲಿ ಇಂಥ ಟನೆಗಳು ಮರುಕಳಿದಂತೆ ಮುಂಜಾಗ್ರತೆವಹಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.

    ಪ್ರತಿಭಟನೆ ಬಳಿಕ ಎಸ್ಪಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರಮುಖರಾದ ವಿ.ಎಂ.ಭೂಸನೂರಮಠ, ನೀಲಕಂಠಯ್ಯ ಹಿರೇಮಠ, ನಾಗಭೂಷಣ ಸಾಲಿಮಠ, ವೀರಭದ್ರಯ್ಯಸ್ವಾಮಿ, ಗವಿಸಿದ್ದಯ್ಯ ಲಿಂಗಬಸಯ್ಯನಮಠ, ನಗರಸಭೆ ಸದಸ್ಯ ಬಸಯ್ಯ ಹಿರೇಮಠ, ಸಿದ್ದಯ್ಯ ಹಿರೇಮಠ, ಅಜ್ಜಯ್ಯ ಹಿರೇಮಠ, ಡಾ.ಕುಮಾರ ಹಿರೇಮಠ, ಬಸಲಿಂಗಯ್ಯ ಗದುಗಿನಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts