More

    ಮೂಲ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಕುವೆಂಪು ನಗರ ನಿವಾಸಿಗಳಿಂದ ಪ್ರತಿಭಟನೆ

    ಕೊಪ್ಪಳ:ನಗರದ ಕಾಳಿದಾಸ ನಗರಕ್ಕೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ನಿವಾಸಿಗಳು ಎಸ್​ಯುಸಿಐಸಿ ನೇತೃತ್ವದಲ್ಲಿ ಬುಧವಾರ ನಗರ ಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

    ಬಡಾವಣೆಯಲ್ಲಿ ಯಾವೊಂದು ಮೂಲ ಸೌಕರ್ಯಗಳಿಲ್ಲ. ಚರಂಡಿ ವೈಜ್ಞಾನಿಕವಾಗಿ ನಿರ್ಮಿಸಿಲ್ಲ. ಅಲ್ಲಲ್ಲಿ ನೀರು ಸಂಗ್ರಹ ಆಗುತ್ತದೆ. ಸೊಳ್ಳೆ ಹೆಚ್ಚಿ ಜನರಿಗೆ ಅನಾರೋಗ್ಯ ಕಾಡುತ್ತಿದೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

    ಬೀದಿ ದೀಪ, ರಸ್ತೆ, ಕುಡಿವ ನೀರು ಕಲ್ಪಿಸುತ್ತಿಲ್ಲ. ಸಂಜೆ ಆದರೆ ಸೊಳ್ಳೆ ಕಾಟ ಹೆಚ್ಚುತ್ತದೆ. ವಿವಿಧ ಕಾಯಿಲೆಗಳು ಬರುತ್ತಿವೆ. ನೆಮ್ಮದಿ ಇಲ್ಲದಂತಾಗಿದೆ. ಚರಂಡಿ ಸ್ವಚ್ಛಗೊಳಿಸುತ್ತಿಲ್ಲ. ಮಾಡುವುದಾಗಿ ಹೇಳಿ ಅಧಿಕಾರಿಗಳು ದಿನದೂಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

    ಜನರ ಆರೋಗ್ಯ ರಕ್ಷಣೆಗೆ ಅಧಿಕಾರಿಗಳು ಮುಂದಾಗಬೇಕು. ಬಡಾವಣೆಯಲ್ಲಿ ಸ್ವಚ್ಛತೆ ಕಾಪಾಡಬೇಕು. ಚರಂಡಿಯಲ್ಲಿ ನೀರು ನಿಲ್ಲದಂತೆ ಕಾಮಗಾರಿ ನಡೆಸಬೇಕು. ರಸ್ತೆ, ಶುದ್ಧ ಕುಡಿವ ನೀರು, ಮಹಿಳೆಯರಿಗೆ ಸಾಮೂಹಿಕ ಶೌಚಗೃಹ ಸೇರಿ ಇತರ ಸೌಕರ್ಯ ಕಲ್ಪಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದೆಂದು ಎಚ್ಚರಿಸಿದರು.

    ಹಲಗೆ ಬಾರಿಸಿ, ಅಧಿಕಾರಿಗಳ ರ್ನಿಲಕ್ಷ$್ಯ ಕುರಿತು ಪದ ಕಟ್ಟಿ ಕ್ರಾಂತಿ ಗೀತೆ ಹಾಡಿದರು. ಎಸ್​ಯುಸಿಐಸಿ ಸದಸ್ಯರಾದ ಶರಣು ಪಾಟೀಲ್​, ರಮೇಶ್​ ವಂಕಲಕುಂಟಿ, ಗಂಗರಾಜು ಅಳ್ಳಳ್ಳಿ, ಮಲ್ಲಪ್ಪ ಮಾದಿನೂರು, ಮಂಜುಳಾ, ದೇವರಾಜ ಹೊಸಮನಿ,

    ಕಾಳಿದಾಸ ನಗರದ ನಿವಾಸಿಗಳಾದ ಉಮೇಶ ಆವಾಜಿ, ಮುದಿಯಪ್ಪ ಹದ್ದಿನ, ರಮೇಶ್​ ಆವಾಜಿ, ಪ್ರಕಾಶ್​ ಗೌಡರ್​, ಮಂಜುನಾಥ್​ ಸಜ್ಜನ್​, ರಫಿ, ಮಲ್ಲಿಕಾರ್ಜುನ್​ ಗುಬ್ಬಿ, ರೇಣಮ್ಮ, ದುರುಗಮ್ಮ, ಸತ್ಯಮ್ಮ, ಸುಮಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts