More

    ಸಾಮೂಹಿಕ ವಿವಾಹದಿಂದ ಸಾಮರಸ್ಯ:ಶಾಸಕ ರಾಘವೇಂದ್ರ ಹಿಟ್ನಾಳ್​

    ಕೊಪ್ಪಳ: ಸಮಾಜದಲ್ಲಿ ಸಾಮರಸ್ಯ ತರಲು ಸಾಮೂಹಿಕ ವಿವಾಹಗಳು ನೆರವಾಗಲಿವೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್​ ಹೇಳಿದರು.

    ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಾಲಯದಲ್ಲಿ ಬುಧವಾರ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.

    ದೇವಾಲಯದಿಂದ ಪ್ರತಿ ವರ್ಷ ವಿವಾಹ ನೆರವೇರಿಸಲಾಗುತ್ತದೆ. ಇದರಿಂದ ಬಡವರಿಗೆ ಅನುಕೂಲವಾಗಲಿದೆ. ಮಹನೀಯರು ಸರ್ವ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಮನುಕುಲ ಒಂದಾಗಬೇಕೆಂದು ಸಾರಿದ್ದಾರೆ. ಬಡವರಿಗೆ ಗ್ಯಾರಂಟಿ ಯೋಜನೆಗಳು ಸಾಕಷ್ಟು ನೆರವಾಗಿವೆ. ಹೊಸ ಜೀವನಕ್ಕೆ ಕಾಲಿಡುವ ನಿಮಗೆ ಸಣ್ಣ-ಪುಟ್ಟ ಕೌಟುಂಬಿಕ ಸಮಸ್ಯೆಗಳು ಬರುತ್ತವೆ. ಅವುಗಳನ್ನು ಸರಿಪಡಿಸಿಕೊಂಡು ಹೊಂದಾಣೆಕೆಯಿಂದ ಜೀವನ ಸಾಗಿಸಬೇಕು. ಹೆಣ್ಣು ಮಕ್ಕಳು ಹೊಂದಾಣಿಕೆ ಮನೋಭಾವ, ತಾಳ್ಮೆ ಬೆಳೆಸಿಕೊಳ್ಳಬೇಕು ಎಂದರು.

    ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ವಧು-ವರರು ಎತ್ತಿನ ಬಂಡಿಗೆ ಎರಡು ಚಕ್ರಗಳಿದ್ದಂತೆ. ಹೊಂದಾಣಿಕಯಿಂದ ದಾಂಪತ್ಯ ಜೀವನ ಸಾಗಿಸಬೇಕು. ಹುಲಿಗೆಮ್ಮ ದೇವಿ ಸನ್ನಿದಾನದಲ್ಲಿ ಸಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದೀರಿ. ಮದುವೆ ಎಂದರೆ ಜವಾಬ್ದಾರಿ ಎಂದರ್ಥ. ಸತಿ&ಪತಿ ಪರಸ್ಪರ ಸಹಕಾರದಿಂದ ಜೀವನ ನಡೆಸಿ. ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರ ಅನೇಕ ಸೌಲಭ್ಯ ನೀಡುತ್ತಿದೆ. ಅವುಗಳ ಸದುಪಯೋಗ ಪಡೆಯಿರಿ. ಹೊಂದಾಣಿಕೆಯಿಂದ ಸಂಸಾರ ನಡೆಸುವಂತೆ ಸಲಹೆ ನೀಡಿದರು.

    ದೇವಸ್ಥಾನ ಇಒ ಅರವಿಂದ ಸುತಗೊಂಡಿ, ದೇವಸ್ಥಾನ ಸಮಿತಿ ಅಧ್ಯಕ್ಷ ವಿರೇಶ ಈಳಿಗೇರ, ಗ್ರಾಪಂ ಅಧ್ಯೆ ನೀಲಮ್ಮ ಗುಂಗಾಡಿ, ಪ್ರಮುಖರಾದ ಮಂಜುಳಾ ಕರಡಿ, ಟಿ.ಜನಾರ್ದನ, ಪಾಲಾಕ್ಷಪ್ಪ ಗುಂಗಾಡಿ, ಯಂಕಪ್ಪ ಹೊಸಳ್ಳಿ, ಗೀತಾ ಪಾಟೀಲ್​ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts