More

    ನಾಮಿನೇಷನ್​ ಮಾಡಿದ ಐವರು ಅಭ್ಯರ್ಥಿಗಳು

    ಕೊಪ್ಪಳ: ಲೋಕಸಭೆ ಚುನಾವಣೆ ಅಂಗವಾಗಿ ಮಂಗಳವಾರ ಐವರು ಅಭ್ಯರ್ಥಿಗಳು ಚುನಾವಣಾಧಿಕಾರಿ ನಲಿನ್​ ಅತುಲ್​ಗೆ ನಾಮಪತ್ರ ಸಲ್ಲಿಸಿದರು.

    ಏ.12ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಮಂಗಳವಾರ ಪಕ್ಷೇತರ ಅಭ್ಯರ್ಥಿಗಳಾದ ಮಲ್ಲಿಕಾರ್ಜುನ ಹಡಪದ, ಹನಮೇಶ, ಇಮಾಮಸಾಬ ಮುಲ್ಲಾ ಮತ್ತು ದುರ್ಗಾ ಪ್ರಸಾದ್​ ಡಿ. ತಲಾ ಒಂದೊಂದು ನಾಮಪತ್ರ ಸಲ್ಲಿಸಿದರು. ಈಗಾಗಲೇ ಒಂದು ಬಾರಿ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್​ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಗವಿಸಿದ್ದೇಶ್ವರ ಮಠಕ್ಕೆ ತೆರಳಿ ದರ್ಶನ ಪಡೆದರು. ಬಳಿಕ ಬಿಜೆಪಿ ಸಂಸದ ಸಂಗಣ್ಣ ಕರಡಿ ನಿವಾಸಕ್ಕೆ ತೆರಳಿ ಹೂವಿನ ಹಾರ ಹಾಕಿ ಆಶೀರ್ವಾದ ಪಡೆದರು.

    ನಾಮಿನೇಷನ್​ ಮಾಡಿದ ಐವರು ಅಭ್ಯರ್ಥಿಗಳು

    ಸಂಗಣ್ಣ ದಂಪತಿ ಶಾಲು ಹಾಕಿ ಆಶೀರ್ವದಿಸಿದರು. ಬಳಿಕ ಉಪಾಹಾರ ಸೇವಿಸಿ ನಾಮಪತ್ರ ಸಲ್ಲಿಕೆ ಮಾಡಿದರು. ಸಚಿವರಾದ ಸತೀಶ ಜಾರಕಿಹೊಳಿ, ಶಿವರಾಜ ತಂಗಡಗಿ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಡಿಸಿಸಿ ಅಧ್ಯಕ್ಷ ಅಮರೇಗೌಡ ಬಯ್ಯಾಪುರ ಇದ್ದರು.

    ಮಕ್ಕಳ ಬಳಕೆ
    ಕಾಂಗ್ರೆಸ್​ ನಾಮಪತ್ರ ಸಲ್ಲಿಕೆ ಸಮಾವೇಶದಲ್ಲಿ ಚಿಕ್ಕ ಮಕ್ಕಳ ಕೈಯಲ್ಲಿ ಬಾವುಟ ಹಿಡಿಸಿದ ಟನೆ ನಡೆಯಿತು. ಪ್ರಚಾರ ರೋಡ್​ ಶೋ ಹಾಗೂ ವೇದಿಕೆ ಸಮಾವೇಶ ಬಳಿ ಹಲವು ಮಕ್ಕಳು ಕೈಯಲ್ಲಿ ಕಾಂಗ್ರೆಸ್​ ಧ್ವಜ ಹಿಡಿದು ಕಾಣಿಸಿಕೊಂಡರು. ಇನ್ನು ಕಾರ್ಯಕ್ರಮಕ್ಕೆ ಬಂದ ಜನರಿಗಾಗಿ ಕುಡಿವ ನೀರು, ಮಜ್ಜಿಗೆ ಪ್ಯಾಕೇಟ್​ ವಿತರಿಸಿದ್ದು, ಸೇವಿಸಿದ ಜನ ರಸ್ತೆ ಸೇರಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್​ ಎಸೆದಿದ್ದು ನಗರ ಅಂದಗೆಡುವಂತಾಯಿತು.

    ನಾಮಿನೇಷನ್​ ಮಾಡಿದ ಐವರು ಅಭ್ಯರ್ಥಿಗಳು
    ಕಾಂಗ್ರೆಸ್​ ಬಾವುಟ ಹಿಡಿದು ಕಾಣಿಸಿಕೊಂಡ ಮಕ್ಕಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts