More

    ಗವಿಮಠದ ಸಾಮಾಜಿಕ ಕಳಕಳಿ ಮುಂದುವರಿಕೆ, ಜ.24ರಂದು ಕಾಯಕ ದೇವೋಭವ ಜಾಗೃತಿ ಜಾಥಾ

    ಕೊಪ್ಪಳ: ಹಲವಾರು ಸಾಮಾಜಿಕ ಜಾಗೃತಿ ಜಾಥಾಗಳಿಗೆ ಗವಿಮಠ ಹೆಸರಾಗಿದೆ. ಈ ವರ್ಷ ಗವಿಸಿದ್ಧೇಶ್ವರ ಜಾತ್ರೋತ್ಸವ ಅಂಗವಾಗಿ ಕಾಯಕ ದೇವೋಭವ, ಸ್ವಾವಲಂಬಿ ಬದುಕು, ಸಮೃದ್ಧ ಬದಕು, ಸಂತೋಷದ ಬದುಕು ಘೋಷ ವಾಕ್ಯದೊಂದಿಗೆ ಸ್ವಯಂ ಉದ್ಯೋಗ, ವೃತ್ತಿ ಕೌಶಲ ಸಂಕಲ್ಪ ಜಾಗೃತಿ ಜಾಥಾ ಹಮ್ಮಿಕೊಳ್ಳಲು ನಿರ್ಧರಿಸಿದೆ.

    ಜ.27ರಂದು ಮಹಾರಥೋತ್ಸವ ಇದೆ. ಜ.24ರಂದು ಬೆಳಗ್ಗೆ 8 ಗಂಟೆಗೆ ಕೊಪ್ಪಳದ ತಾಲೂಕು ಕ್ರೀಡಾಂಗಣದಿಂದ ಜಾಥಾ ಆರಂಭವಾಗಲಿದೆ. ವಿದ್ಯಾರ್ಥಿಗಳು ಅಶೋಕ ವೃತ್ತ, ಜವಾಹರ ರಸ್ತೆ, ಗಡಿಯಾರ ಕಂಬ ವೃತ್ತ ಮೂಲಕ ಗವಿಮಠದ ದಾಸೋಹ ಮಂಟಪದವರೆಗೆ ಸಾಗಿ ಜಾಗೃತಿ ಮೂಡಿಸುವರು.

    ಈ ಹಿಂದಿನ ಜಾತ್ರೋತ್ಸವಗಳಲ್ಲಿ ರಕ್ತದಾನ, ಬಾಲ್ಯವಿವಾಹ ನಿಷೇಧ, ಜಲದೀೆ, ಸಶಕ್ತ ಮನ,ಸಂತೃಪ್ತ ಜೀವನ, ಕೃಪಾದೃಷ್ಟಿ, ಲಕ್ಷ ವೃೋತ್ಸವ ಜಾಗೃತಿ ಜಾಥ ನಡೆಸಲಾಗಿದೆ. ಈ ವರ್ಷ ಸ್ವಯಂ ಉದ್ಯೋಗ ಜಾಗೃತಿ ಮೂಡಿಸುತ್ತಿರುವುದು ವಿಶೇಷ.

    ವರ್ಷದಿಂದ ವರ್ಷಕ್ಕೆ ಜಾತ್ರೆಗೆ ಆಗಮಿಸುವ ಭಕ್ತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಲಾಂತರ ಭಕ್ತರು ಬರುವ ಕಾರಣ ಸೌಕರ್ಯ ಹೆಚ್ಚಿಸಲಾಗಿದೆ. ಮಹಾರಥೋತ್ಸವ ಮೈದಾನ ಗೋಡೆಗೆ ನಾಲ್ಕು ದ್ವಾರಗಳಿವೆ. ಹೀಗಿದ್ದರೂ ಭಖ್ತರ ದಟ್ಟಣೆ ಹೆಚ್ಚುತ್ತಿದೆ.

    ಈ ವರ್ಷ ಹೆಚ್ಚುವರಿಯಾಗಿ ಎರಡು ದ್ವಾರಗಳನ್ನು ನಿರ್ಮಿಸಲಾಗುತ್ತಿದೆ. ರಥೋತ್ಸವಕ್ಕೆ ಆಗಮಿಸಿ ಮರಳುವ ಭಕ್ತರಿಗೆ ಇದರಿಂದ ಅನುಕೂಲವಾಗಲಿದೆ. ಜನದಟ್ಟಣೆ ನಿಯಂತ್ರಣಕ್ಕೆ ಪೊಲೀಸರು, ಸ್ವಯಂ ಸೇವಕರಿಗೆ ಅನುಕೂಲವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts