More

    ಕೊಪ್ಪಳ ಅಜ್ಜನ ಜಾತ್ರೆಗೆ ಸಿದ್ಧತೆ ಜೋರು, ಹೊಸ ವರ್ಷ ಹಿನ್ನೆಲೆ ಭಕ್ತರ ದಂಡು

    ಕೊಪ್ಪಳ: ಜಿಲ್ಲೆಯ ಅದಿ ದೈವ ಗವಿಸಿದ್ಧೇಶ್ವರ ಜಾತ್ರೋತ್ಸವಕ್ಕೆ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ದಾಸೋಹ ಮಂಟಪ ಸಿದ್ಧತೆ, ದೀಪಾಲಂಕಾರ ಅಂತಿಮ ಸಿದ್ಧತೆಗಳು ಭರದಿಂದ ಸಾಗಿವೆ.

    ಆಯುರ್ವೇದ ಮಹಾವಿದ್ಯಾಲಯದ ಹರ್ಬಲ್​ ಗಾರ್ಡನ್​ನಲ್ಲಿ (ಮಲಿಯಮ್ಮ ದೇವಸ್ಥಾನ ಪಕ್ಕ) ಸುಮಾರು ಆರು ಎಕರೆ ಜಾಗದಲ್ಲಿ ಮಹಾ ದಾಸೋಹ ಮಂಟಪ ಸಿದ್ಧವಾಗುತ್ತಿದೆ.

    ಪರಿಸರ ಸ್ನೇಹಿ ಭವ್ಯವಾದ ಅಡುಗೆಮನೆ, ಆಹಾರ , ತರಕಾರಿ ಸಂಗ್ರಹಣೆ ಕೊಠಡಿ, ತರಕಾರಿ ಹೆಚ್ಚುವ ಸ್ಥಳದ ಕೆಲಸ ನಡೆಯುತ್ತಿದೆ. ಭಕ್ತರಿಗೆ ಪ್ರಸಾದ ಸೇವನೆಗೆ ತೊಂದರೆಯಾಗದಂತೆ ಸಾಲಾಗಿ ಬರಲು ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.


    ಕೊಪ್ಪಳ ಅಜ್ಜನ ಜಾತ್ರೆಗೆ ಸಿದ್ಧತೆ ಜೋರು, ಹೊಸ ವರ್ಷ ಹಿನ್ನೆಲೆ ಭಕ್ತರ ದಂಡು

    ಉತ್ತರ ಕರ್ನಾಟಕದ ಆಧ್ಯಾತ್ಮಿಕ, ಸಾಂಸತಿಕತೆ ಅದಮ್ಯ ಕ್ಷೇತ್ರವಾಗಿರುವ ದೇವಾಲಯ ಮಠದ ಆವರಣ ಸೌಂದರಿಕರಣದಲ್ಲಿಯೂ ಗಮನಾರ್ಹ ಬದಲಾವಣೆ ಮಾಡುತ್ತಿದೆ.

    ಭಕ್ತರ ಆಕರ್ಷಣೆಯ ಕೇಂದ್ರವಾಗಿ ಆಧ್ಯಾತ್ಮಿಕ ಆಸಕ್ತರ ಪ್ರವಾಸಿಗರ ತಾಣವಾಗಿದೆ. ಶ್ರೀ ಮಠದ ಒಳ ಆವರಣ ಹಾಗೂ ಹೊರ ಆವರಣದಲ್ಲಿ ಸುಂದರವಾದ ಬಿಳಿಶಿಲೆಗಳಂದ ನೆಲಹಾಸು ರಚನೆಗೊಳ್ಳುತ್ತಿವೆ.

    ಅಲ್ಲಲ್ಲಿ ಚಿಕ್ಕ ಚಿಕ್ಕ ಶಿಲಾಮಂಟಪಗಳು ಹಾಗೂ ಲತಾ ಮಂಟಪಗಳು ತಲೆ ಎತ್ತುತ್ತಿವೆ. ಬಗೆ ಬಗೆ ದೀಪಾಲಂಕಾರ ರಾತ್ರಿ ವೇಳೆ ಮಠದ ಅಂದ ಹೆಚ್ಚಿಸುತ್ತಿದೆ.

    ಹರಿದು ಬಂದ ಭಕ್ತ ಸಮೂಹ :ಹೊಸ ವರ್ಷ ಕಾರಣ ಸೋಮವಾರ ಮಠಕ್ಕೆ ಅಸಂಖ್ಯಾತ ಭಕ್ತರು ಭೇಟಿ ನೀಡಿ ಗವಿಸಿದ್ಧೇಶನ ದರ್ಶನ ಪಡೆದರು. ಶಾಲಾ&ಕಾಲೇಜು ವಿದ್ಯಾರ್ಥಿಗಳು, ಪ್ರವಾಸಿಗರು, ಸ್ಥಳಿಯರು ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತರು ಶ್ರೀಗಳ ಆಶೀರ್ವಾದ ಪಡೆದರು. ಗದ್ದುಗೆ ದರ್ಶನ ಬಳಿಕ ಪ್ರಸಾದ ಸೇವಿಸಿ ತೆರಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts