More

    ನಕಲಿ ದಾಖಲೆ ನೀಡಿ ಉದ್ಯೋಗ ಪಡೆದ ಯುವಕ

    ಕೊಪ್ಪಳ: ಕನ್ನಡ ಸೇರಿ ಇತರ ಭಾಷೆ ಓದು-ಬರಹ ಬಾರದ ಪ್ರಭು ಲೋಕರೆ ಎಂಬಾತ ಯಾದಗಿರಿ ನ್ಯಾಯಾಲಯದಲ್ಲಿ ಪ್ಯೂನ್​ ಆಗಿ ನೇಮಕಗೊಂಡಿದ್ದು, ಆತನ ವಿರದ್ಧ ನಗರಠಾಣೆಯಲ್ಲಿ ಪಕ್ರರಣ ದಾಖಲಾಗಿದೆ.

    ಏಳನೇ ತರಗತಿ ವಿದ್ಯಾರ್ಹತೆ ಮೇಲೆ ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಸ್ಕಾವೆಂಜರ್​ ಆಗಿದ್ದ ಪ್ರಭು, ಸದ್ಯ ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ಜವಾನನಾಗಿ ನೇಮಕವಾಗಿದ್ದಾನೆ. ಬಾಗಲಕೋಟೆಯ ಬನಹಟ್ಟಿಯಲ್ಲಿ ಖಾಸಗಿ ಸಂಸ್ಥೆಯೊಂದರ ಮೂಲಕ ಎಸ್ಸೆಸ್ಸೆಲ್ಸಿ ಪರೀೆ ಬರೆದು 625ಕ್ಕೆ 623 ಅಂಕ ಪಡೆದಿದ್ದಾನೆ. ಈತನಿಗೆ ಓದಲು, ಬರೆಯಲು ಬರದಿದ್ದರೂ ಯಾದಗಿರಿ ನ್ಯಾಯಾಲಯದಲ್ಲಿ ಏ.22ರಂದು ಪ್ಯೂನ್​ ಆಗಿ ನೇಮಕವಾಗಿದ್ದಾನೆ. ಆದರೆ, ಆತ ಸಲ್ಲಿಸಿದ ಶೈಕ್ಷಣಿಕ ದಾಖಲೆ ಹಾಗೂ ಪಡೆದ ಅಂಕಗಳ ಬಗ್ಗೆ ಕೊಪ್ಪಳ ಜಿಲ್ಲಾ ನ್ಯಾಯಾಲಯದ ಸಿವಿಲ್​ ಮತ್ತು ಜೆಎಂಎ್​ಸಿ ನ್ಯಾಯಾಧೀಶರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಆತನಿಗೆ ಸರಿಯಾಗಿ ಇಂಗ್ಲೀಷ್​, ಹಿಂದಿ ಭಾಷೆ ಓದು&ಬರಹ ಬರುವುದಿಲ್ಲವೆಂದು ವಿವಿಧ ಮೂಲಗಳಿಂದ ನನ್ನ ಗಮನಕ್ಕೆ ಬಂದಿದೆ. ಹೀಗಾಗಿ ಆತನ ಶೈಕ್ಷಣಿಕ ದಾಖಲೆ ಬಗ್ಗೆ ಶಂಕೆ ಬರುತ್ತಿದೆ. ಇದರಿಂದ ನೈಜ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಇದರ ಹಿಂದೆ ಜಾಲವಿರಬಹುದು. ಈ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಧೀಶರು ನೀಡಿದ ದೂರಿನ ಅನ್ವಯ ಕೊಪ್ಪಳ ನಗರಠಾಣೆಯಲ್ಲಿ ಏ.26ರಂದು ಪ್ರಕರಣ ದಾಖಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಭು, ತಾನು ದೆಹಲಿ ಮೂಲದ ಸಂಸ್ಥೆ ಮೂಲಕ ನೇರವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದೇನೆ. ನನ್ನಂತೆ ಹಲವರು ಬರೆದಿದ್ದಾರೆ. ನನಗೆ ಓದಲು-ಬರೆಯಲು ಬರುತ್ತದೆ ಎಂದು ತಿಳಿಸಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts