More

    ಸುಳ್ಳು ಸಾಕ್ಷಿ ಹೇಳಿದ್ದಕ್ಕೆ ದೂರದಾರನ ವಿರುದ್ಧ ಕ್ರಮಕ್ಕೆ ನ್ಯಾಯಾಲಯ ಸೂಚನೆ

    ಕೊಪ್ಪಳ: ಪ್ರರಕಣವೊಂದರಲ್ಲಿ ದೂರುದಾರ ಅಧಿಕಾರಿ ಪುಟ್ಟಣ್ಣ ತಂದೆ ಸೋಮಪ್ಪ ಕಟ್ಟಿಮನಿ ಪ್ರತಿಕೂಲ ಸುಳ್ಳು ಸಾಕ್ಷಿ ಹೇಳಿದ್ದರಿಂದ ಆತನ ವಿರುದ್ಧ ಪ್ರಕರಣ ದಾಖಲಿಸಲು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕೋರ್ಟ್​ನ ಮುಖ್ಯ ಆಡಳಿತಾಧಿಕಾರಿಗೆ ನಿರ್ದೇಶನ ನೀಡಿದೆ.

    ಅಲ್ಲದೇ, ಸುಳ್ಳು ಸಾಕ್ಷಿ ಹೇಳಿದ್ದಕ್ಕೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ (ದೌರ್ಜನ್ಯ ಪ್ರತಿಬಂಧ) ಕಾಯ್ದೆಯಡಿ ಸರ್ಕಾರದಿಂದ ಪರಿಹಾರವಾಗಿ ಪಡೆದ 25ಸಾವಿ ರೂ. ಹಣವನ್ನೂ ಕೂಡಲೇ ದೂರುದಾರನಿಂದ ವಸೂಲಿ ಮಾಡಲು ಜಿಲ್ಲಾಧಿಕಾರಿಗೆ ಸೂಚಿಸಿರುವುದಾಗಿ ಸಾರ್ವಜನಿಕ ಅಭಿಯೋಜಕರು ತಿಳಿಸಿದ್ದಾರೆ.

    ಪ್ರಕರಣದ ವಿವರ: 13.5.2020ರಂದು ಸಹಾಯಕ ಕೃಷಿ ಅಧಿಕಾರಿಯಾಗಿದ್ದ ಪುಟ್ಟಣ್ಣ ತಮ್ಮ ಕಚೇರಿಯಲ್ಲಿ ಕರ್ತವ್ಯದಲ್ಲಿದಾಗ ಮಂಜುನಾಥ ತಂದೆ ಕೊಟ್ರಬಸಪ್ಪ ಹಕಾರಿ ಕೃಷಿ ಯೋಜನೆಗಳ ಮಾಹಿತಿ ಕೇಳಲು ಕಚೇರಿಗೆ ಭೇಟಿ ನೀಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದು ಆರೋಪಿಸಿ ಕೊಪ್ಪಳ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಡಿವೈಎಸ್ಪಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

    ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ವೇಳೆ ದೂರುದಾರ ಪುಟ್ಟಣ್ಣ ತಾನು ನೀಡಿದ ದೂರಿನ ವಿರುದ್ಧ ಸಾಕ್ಷಿ ನುಡಿದಿದ್ದಾನೆ. ಆರೋಪಿ ಮಂಜುನಾಥ ತನಗೆ ಗೊತ್ತಿಲ್ಲ, ನೋಡಿಲ್ಲ, ಅವನು ತನಗೆ ಜಾತಿ ನಿಂದನೆ ಮಾಡಿಲ್ಲ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿಲ್ಲ. ದೂರು ಸಹ ನೀಡಿಲ್ಲವೆಂದು ಹೇಳಿದ್ದಾನೆ.

    ಆರೋಪಿ ಮಂಜನಾಥನನ್ನು ನ್ಯಾಯಾಲಯ 2023 ಡಿಸೆಂಬರ್​ 21ರಂದು ಖುಲಾಸೆ ಮಾಡಿದೆ. ಸುಳ್ಳು ಸಾ ಹೇಳಿದ್ದಕ್ಕೆ ಪುಟ್ಟಣ್ಣ ವಿರುದ್ಧ ಸಿಆರ್​ಪಿಸಿ 340, ಕಲಂ 193 ಐಪಿಸಿ ಅಡಿ ದೂರು ದಾಖಲಿಸಲು ಹಾಗೂ ಪರಿಹಾರ ಮೊತ್ತ ವಸೂಲಿಗೆ ನಿರ್ದೇಶನ ನೀಡಿರುವುದಾಗಿ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts