More

    ಪುಲ್ವಾಮಾ ದಾಳಿಯಲ್ಲಿ ಎಷ್ಟು ಜನರಿಗೆ ಶಿಕ್ಷೆ‌ ಆಗಿದೆ ? ಸಚಿವ ಶಿವರಾಜ ತಂಗಡಗಿ ಪ್ರಶ್ನೆ

    ಕೊಪ್ಪಳ: ಕಳೆದ ಚುನಾವಣೆ ವೇಳೆ ಪುಲ್ವಾಮಾ ದಾಳಿಯಾಗಿ ಅನೇಕ ಸೈನಿಕರು ಹುತಾತ್ಮರಾದರು. ಘಟನೆ ಕಾರಣರಾದವರನ್ನು ಹಿಡಿದು ಶಿಕ್ಷಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದರು. ಈವರೆಗೆ ಅದರ ತನಿಖೆ ಏನಾಯಿತು, ಎಷ್ಟು ಜನರನ್ನ ಶಿಸಲಾಗಿದೆ. ತಮ್ಮ ಆಡಳಿತದಲ್ಲಿ ಏನಾಗಿದೆ ಎಂದು ದೇಶದ ಜನರಿಗೆ ಉತ್ತರ ಕೊಡಬೇಕಲ್ಲವೆ ? ಎಂದು ಸಚಿವ ಶಿವರಾಜ ತಂಗಡಗಿ ಪ್ರಶ್ನಿಸಿದರು.

    ರಾಜ್ಯ, ದೇಶದ ಯುವಕರಿಗೆ ಬಿಜೆಪಿಯಿಂದ ಅನ್ಯಾಯವಾಗಿದೆ. ಯುವಕನೊಬ್ಬ ಪಕೋಡಾ ಮಾರಲು ಇಷ್ಟವಿಲ್ಲ. ಕಾಂಗ್ರೆಸ್​ಗೆ ಮತ ಹಾಕುತ್ತೇನೆ ಎಂದು ಹೇಳಿದ್ದಾನೆ. ಬಿಜೆಪಿ ಏನು ಅಭಿವೃದ್ಧಿ ಕೆಲಸ ಮಾಡಿದೆ ಎಂದು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಮುಗಿ ಬಿದ್ದಿದ್ದಾರೆ. ಪುಲ್ವಾಮಾ ದಾಳಿ ಆದಾಗ ಕಾರಣರಾದವರನ್ನು ಹಿಡಿದು ಶಿಕ್ಷಿಸುವುದಾಗಿ ಹೇಳಿ ಐದು ವರ್ಷ ಆಗಿದೆ. ಮುಂದೆ ಏನಾಯಿತು ಎಂದು ಎಂದು ದೇಶದ ಜನರಿಗೆ ಉತ್ತರ ಕೊಡಬೇಕಲ್ಲವೆ ? ಯಾರು ದಾಳಿ ಮಾಡಿದರು, ಯಾರಿಗೆ ಶಿಕ್ಷೆ ಆಗಿದೆ ಎಂಬುದನ್ನು ಹೇಳಲಿ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.

    ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿದೆ. 2014ರಿಂದ ಈವರೆಗೆ 168 ಲಕ್ಷ ಕೋಟಿ ರೂ. ಸಾಲ ಆಗಿದೆ. ನಿರುದ್ಯೋಗ ದರ ಶೇ.83ಕ್ಕೇರಿದೆ. ಈ ಬಗ್ಗೆ ಮಾತನಾಡಿದರೆ ಬಿಜೆಪಿಗರ ಮನಸ್ಸಿಗೆ ನೋವಾಗುತ್ತದೆ. ಯಾವೊಂದು ಅಭಿವೃದ್ಧಿ ಕೆಲಸ ಮಾಡದೆ ಮತ ಕೇಳಲು ರಾಜ್ಯಕ್ಕೆ ಬರಲು ಇವರಿಗೆ ನಾಚಿಕೆ ಆಗುವುದಿಲ್ಲವಾ ? ಕೇಂದ್ರ ಗೃಹ ಸಚಿವ ಅಮಿತ್​ ಷಾ ಬರ ಪರಿಹಾರ ನೀಡಲು ಮನವಿ ಸಲ್ಲಿಕೆ ವಿಳಂಬವಾಗಿದೆ ಎಂದು ಸುಳ್ಳು ಹೇಳಿದ್ದಾರೆ. ಅದಕ್ಕೆ ಸಿಎಂ ಸವಾಲು ಹಾಕಿದ್ದಾರೆ. ಈ ಬಗ್ಗೆ ಬಿಜೆಪಿಯವರು ಚರ್ಚೆ ಮಾಡಲಿ.ಕೇವಲ ಜಾತಿ, ಧರ್ಮ, ಪಾಕಿಸ್ತಾನ, ಮಂದಿರ ಕೊನೆಗೆ ಅಂಜನಾದ್ರಿ ಬೆಟ್ಟ ವಿಷಯ ಮಾತನಾಡುತ್ತಾರೆ. ಮೋದಿ ನೋಡಿ ಮತ ಹಾಕುವಂತೆ ಕೇಳುತ್ತಾರೆ. ಮೋದಿ ಏನು ಮಾಡಿದ್ದಾರೆಂದು ಜನರು ಮತ ನೀಡಬೇಕು ಎಂದು ಕುಟುಕಿದರು.

    ಹತ್ತು ವರ್ಷದಲ್ಲಿ ಏನೇನು ಅಭಿವೃದ್ಧಿ ಮಾಡಿದ್ದಾರೆಂದು ಪಟ್ಟಿ ಹಿಡಿದು ಚರ್ಚೆಗೆ ಬರಲಿ. ನಾವು ಅಧಿಕಾರಕ್ಕೆ ಬಂದು ವರ್ಷದಲ್ಲಿ ಶೇ.98ರಷ್ಟು ಗ್ಯಾರಂಟಿ ಯೋಜನೆ ಮುಟ್ಟಿಸಿದ್ದೇವೆ. ಬಾಕಿ ಶೇ.2ರಷ್ಟು ಪೂರ್ಣಗೊಳಿಸಲು ಸಮಿತಿ ರಚಿಸಿದ್ದೇವೆ. ಮೋದಿ ಬರುವ ಮುನ್ನ ದೇಶದಲ್ಲಿ ಭದ್ರತೆ ಇರಲಿಲ್ಲವಾ ? ಕೈಗಾರಿಕೆ, ನೀರಾವರಿ ಯೋಜನೆಗಳಿರಲಿಲ್ಲವಾ ? ಒಂದೆರೆಡು ಬಾರಿ ಸುಳ್ಳು ಹೇಳಿದರೆ ಕೇಳುತ್ತಾರೆ. ಇನ್ನು ಮುಂದೆ ಜನರ ಮುಂದೆ ಇವರ ಆಟ ನಡೆಯಲ್ಲ. ದೇಶದಲ್ಲಿ ಇಂಡಿಯಾ ಒಕ್ಕೂಟ ಜಿಲ್ಲೆಯಲ್ಲಿ ರಾಜಶೇಖರ ಹಿಟ್ನಾಳ ಗೆದ್ದೆ ಗೆಲ್ಲಲಿದ್ದಾರೆ ಎಂದರು.

    ಗಂಗಾವತಿಯಲ್ಲಿ ಏನೂ ಆಗಿಲ್ಲ. ಮೊನ್ನೆ ಅನ್ಸಾರಿ ಸಭೆ ಮಾಡಿದ್ದಾರೆ. ಇಂದು ಮತ್ತೊಂದು ಸಭೆ ಆಗಿದೆ. ಅನ್ಸಾರಿ ಅವರು ಆಡಿಯೋ ಬಿಡಬಾರದಿತ್ತು. ಭಿನ್ನಾಭಿಪ್ರಾಯ ಬಹಳ ಆಳವಾಗಿದೆ. ಅದು ಅವರ ಒಳ ಜಗಳ. ನನಗೆ ಎಲ್ಲರೂ ಒಂದೇ. ನಾನೊಬ್ಬ ನಿಷ್ಠಾವಂತ ಕಾರ್ಯಕರ್ತ. ನನ್ನ ಸಚಿವ ಸ್ಥಾನ ತೆಗಿಬೇಕು ಎನ್ನುವ ಶ್ರೀನಾಥ ಅವರಿಗೆ ಒಳ್ಳೆಯದಾಗಲಿ. ಗಂಗಾವತಿಯಲ್ಲಿ ಎಷ್ಟೇ ಬಣಗಳಿರಲಿ. ಅದರಿಂದ ಪಕ್ಷದ ಮೇಲೆ ಪರಿಣಾಮ ಬೀರಲ್ಲ. ಗ್ಯಾರಂಟಿ ಯೋಜನೆ ನಮಗೆ ಶ್ರೀರಕ್ಷೆ. ಎಲ್ಲರೂ ಕಾಂಗ್ರೆಸ್​ಗೆ ಮತ ಹಾಕುತ್ತಾರೆ. ಗಂಗಾವತಿ ಯಲ್ಲಿ ಅತಿ ಹೆಚ್ಚು ಮತಗಳ ಲೀಡ್​ ಬರಲಿದೆ.

    ಶಿವರಾಜ ತಂಗಡಗಿ. ಜಿಲ್ಲಾ ಉಸ್ತುವಾರಿ ಸಚಿವ ಕೊಪ್ಪಳ.

    ಗಂಗಾವತಿ ನಾಯಕರಲ್ಲಿ ಅನೇಕ ಭಿನ್ನಾಭಿಪ್ರಾಯಗಳಿವೆ. ಸಿಎಂ ಕನಕಗಿರಿ ಉತ್ಸವಕ್ಕೆ ಬಂದಾಗ ಅನ್ಸಾರಿಗೆ ಸಮಾಧಾನ ಮಾಡಿದ್ದಾರೆ. ಬೆಂಗಳೂರಿನಲ್ಲೂ ಸಭೆ ಆಗಿದೆ. ಅನ್ಸಾರಿ ಸೋತ ನೋವಿನಲ್ಲಿದ್ದಾರೆ. ಅದಕ್ಕೆ ಆಡಿಯೋ ಬಿಟ್ಟಿದ್ದಾರೆ. ಅದು ಸರಿಯಲ್ಲ ಅಂತ ನಾ ಹೇಳಿರುವೆ. ಈ ವಿಷಯವನ್ನು ಹೈಕಮಾಂಡ್​ ಗಮನಕ್ಕೆ ತಂದಿರುವೆ. ದೊಡ್ಡಮಟ್ಟದ ಭಿನ್ನಾಭಿಪ್ರಾಯ ಇಲ್ಲ. ಎಲ್ಲರನ್ನು ಒಂದೇ ವೇದಿಕೆಗೆ ತರುತ್ತೇವೆ.

    ಅಮರೇಗೌಡ ಬಯ್ಯಾಪುರ. ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಕೊಪ್ಪಳ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts