More

    ಕಾಲೇಜಿಗೆ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

    ಕೊಪ್ಪಳ:ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಶನಿವಾರ ನರಗದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

    ಕಾಲೇಜಿನಲ್ಲಿ ನಮಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ರಜಾ ದಿನಗಳಲ್ಲೂ ಸಾರ್ವಜನಿಕರೂ ಕಾಲೇಜು ಆವರಣದಲ್ಲಿ ಓಡಾಡುತ್ತಾರೆ ಸುತ್ತಲೂ ಕಾಂಪೌಂಡ್​ ಇಲ್ಲ. ಆವರಣದಲ್ಲಿ ಮದ್ಯಪಾನ, ಧೂಮಪಾನ ಮಾಡುತ್ತಾರೆ. ತಡೆಗೋಡೆಗೆ ಹೊಂದಿಕೊಂಡು ಮೂತ್ರ ವಿಸರ್ಜನೆ ಮಾಡುತ್ತಾರೆ.

    ವಿದ್ಯಾರ್ಥಿನಿಯರಾದ ನಮಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ಹಲವಾರು ದುರ್ಟನೆಗಳು ನಡೆದರೂ ಸಂಬಂಧಿಸಿದ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಕಂಪ್ಯೂಟರ್​ ಶಿಕ್ಷಣ ಸರಿಯಾಗಿ ನೀಡುತ್ತಿಲ್ಲ. ಬೆಂಚುಗಳ ಕೊರತೆ ಇದೆ ಎಂದು ಆರೋಪಿಸಿದರು.

    15ದಿನದಲ್ಲಿ ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆ ಸರಿಪಡಿಸಬೇಕು. ಕಾಲೇಜು ಆವರಣದಲ್ಲಿ ಸಾರ್ವಜನಿಕರ ಓಡಾಡಕ್ಕೆ ಅವಕಾಶ ನೀಡಬಾರದು. ಸುತ್ತಲೂ ಉತ್ತಮ ವಾತಾವರಣ ನಿರ್ಮಿಸಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಬೆಂಚ್​ ಹಾಗೂ ಇತರ ಸೌಲಭ್ಯ ಕಲ್ಪಿಸಬೇಕು.
    ಅರ್ಧಕ್ಕೆ ನಿಂತ ಕಟ್ಟಡ ಕಾಮಗಾರಿ ಮುಂದುವರಿಸಬೇಕು. ನಿರ್ಭಯವಾಗಿ ಓಡಾಡುವಂಥ ವಾತಾವರಣ ನಿರ್ಮಿಸಿ. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.

    ವಿದ್ಯಾರ್ಥಿಗಳಾದ ಹಮ್ಮಿಗೇಶ, ಶಶಾಂಕ ಪಾಟೀಲ್​, ಪ್ರುಲ್​, ರಾಧಿಕಾ, ರೇಣುಕಾ, ಸುಮಂಗಲ, ಆದಿತ್ಯ, ಸಂತೋಷ, ನವೀನ್​, ಮಹೇಶ್​, ಅರುಣಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts