More

    ಶಿಕ್ಷಣ ರಂಗ ಸುಧಾರಣೆ ಮರೆತ ಸರ್ಕಾರ:ಎನ್​.ರವಿಕುಮಾರ್​

    ಕೊಪ್ಪಳ: ರಾಜ್ಯ ಸರ್ಕಾರ ಗ್ಯಾರಂಟಿ ಅಮಲಿನಲ್ಲಿ ಅಭಿವೃದ್ಧಿ ಕಾರ್ಯ ಮರೆತಿದೆ. ಶಿಕ್ಷಣ ಗುಣಮಟ್ಟ ಕುಸಿಯುತ್ತಿದೆ. ಸಿನಿಮಾ ರಂಗದಿಂದ ಬಂದ ಸಚಿವ ಮಧು ಬಂಗಾರಪ್ಪ ಸಿನಿಮಾದಲ್ಲಿ ಹಿರೋ ಆಗಿರಬಹುದು. ಆದರೆ, ಸಚಿವರಾಗಿ ಜಿರೋ ಆಗಿದ್ದಾರೆಂದು ವಿಪ ಸದಸ್ಯ ಎನ್​.ರವಿಕುಮಾರ್​ ಟೀಕಿಸಿದರು.

    ರಾಜ್ಯದಲ್ಲಿ ಶಿಕ್ಷಕರ ಸಮಸ್ಯೆ ಮಿತಿ ಮೀರಿದೆ. ಶೈಕ್ಷಣಿಕ ಕೆಲಸಗಳಿಗಿಂತ ಹೆಚ್ಚಾಗಿ ಇತರ ಕೆಲಸಗಳಿಗೆ ಅವರನ್ನು ಬಳಸಿಕೊಳ್ಳುತ್ತಿದ್ದಾರೆ. ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಲಿತಾಂಶ ಗಣನೀಯವಾಗಿ ಕುಸಿದಿದೆ. ಮಾನ ಉಳಿಸಿಕೊಳ್ಳಲು 20ರಷ್ಟು ಗ್ರೇಸ್​ ಮಾರ್ಕ್ಸ್​ ನೀಡಿದ್ದಾರೆ. ಗುಣಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳುವ ಬದಲು ಹೆಚ್ಚುವರಿ ಅಂಕ ನೀಡಿದ್ದು ನಾಚಿಕೆಗೇಡಿನ ಸಂಗತಿ. ಇದರಿಂದ ಸುಧಾರಣೆ ಸಾಧ್ಯವಾ? ಈ ಬಗ್ಗೆ ಸರ್ಕಾರ ಸಭೆ ನಡೆಸಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ 17,796 ಶಿಕ್ಷಕರ ಕೊರತೆ ಇದೆ. 6 ಸಾವಿರ ಶಿಕ್ಷಕರು ವರ್ಗವಾಗಿದ್ದಾರೆ. ಸಿಇಟಿಯಲ್ಲಿ 50 ಅಂಕಗಳ ಪ್ರಶ್ನೆಗಳು ಪಠ್ಯಕ್ಕೆ ಸಂಬಂಧಿಸಿಲ್ಲ. 5,8 ಮತ್ತು 9ನೇ ತರಗತಿ ಪಬ್ಲಿಕ್​ ಪರೀೆ ವಿಷಯ ನ್ಯಾಯಾಲಯಲ್ಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಇಲಾಖೆ ವೈಲ್ಯ ಬಿಚ್ಚಿಟ್ಟರು.

    ದೇವದುರ್ಗ ತಾಲೂಕಿನಲ್ಲಿ ಒಬ್ಬ ಶಿಕ್ಷಕರೂ ಇಲ್ಲದ ನೂರು ಶಾಲೆಗಳಿವೆ. ಏಕ ಶಿಕ್ಷಕ ಶಾಲೆಗಳು ನೂರಾರಿವೆ. ಹೀಗಾದಲ್ಲಿ ಉತ್ತಮ ಲಿತಾಂಶ ಬರಲು ಹೇಗೆ ಸಾಧ್ಯ. 45 ಸಾವಿರ ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಶಿಕ್ಷಕರ ವೇತನ ಪರಿಷ್ಕರಿಸಿಲ್ಲ. ಸಮಾನ ವಿದ್ಯಾರ್ಹತೆ ಇರುವವರಿಗೆ ಸಮಾನ ವೇತನವಿಲ್ಲ. ಗ್ಯಾರಂಟಿ ಯೋಜನೆಗಳು ಮಾತ್ರವೇ ಜೀವನವಾ ? ಇತರ ಇಲಾಖೆಗಳು ಹಳ್ಳ ಹಿಡಿದಿವೆ. ಶಿಕ್ಷಣ ಸಚಿವರಿಗೆ ಶಿಕ್ಷಣದ ಗಂಧ&ಗಾಳಿ ಗೊತ್ತಿಲ್ಲ. ಸಿಎಂ, ಡಿಸಿಎಂ, ಉನ್ನತ ಶಿಕ್ಷಣ ಸಚಿವ ಸುಧಾಕರ ಅವರಿಗೆ ಶಿಕ್ಷಣ ಕ್ಷೇತ್ರ ಸುಧಾರಣೆ ಸಮಯವಿಲ್ಲ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದರು.

    ಜೂ. 3ಕ್ಕೆ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಅಮರನಾಥ ಪಾಟೀಲ್​ ನಮ್ಮ ಅಭ್ಯರ್ಥಿ. ಬಿಜೆಪಿ ಹಾಗೂ ಜೆಡಿಎಸ್​ ಸಂಘಟನೆ ಬಲವಾಗಿದೆ. ರಾಜ್ಯ ಸರ್ಕಾರ ಆಡಳಿತದಲ್ಲಿ ಸಂಪೂರ್ಣ ವಿಲವಾಗಿದೆ. ಮೊದಲ ಪ್ರಾಶಸ್ತ್ಯದ ಮತದಲ್ಲೇ ನಮ್ಮ ಅಭ್ಯರ್ಥಿ ಗೆಲ್ಲಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

    ವಿಪ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ, ಜೆಡಿಎಸ್​ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಲೋಕಸಭೆ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್​, ಪ್ರಮುಖರಾದ ಜಿ.ಶ್ರೀಧರ, ಮಹಾಂತೇಶ ಮೈನಳ್ಳಿ, ಸೋಮನಗೌಡ ಇತರರಿದ್ದರು.

    ರಾಜ್ಯದಲ್ಲಿ ಕಾನೂನು&ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಮೂವರು ವಿದ್ಯಾರ್ಥಿನಿಯರ ಹತ್ಯೆಯಾಗಿದೆ. ಹಲ್ಲೆ, ಕೊಲೆಗಳು ಹೆಚ್ಚಿದ್ದರೂ ಸಿಎಂ, ಗೃಹ ಸಚಿವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಭೀಕ್ಷವಾಗಿದೆ ಎನ್ನುತ್ತಾರೆ. ಅಧಿಕಾರ ದಾಹಕ್ಕೆ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದಾರೆ. ಶೇ.103ರಷ್ಟು ಬದ್ಧತಾ ವೆಚ್ಚ ಕಾಯ್ದರಿಸಿದೆ. 1.05ಲಕ್ಷ ಕೋಟಿ ಸಾಲ ಮಾಡಿದೆ. ಅಭಿವೃದ್ಧಿಗೆ ಹಣವಿಲ್ಲ. ಸಿದ್ದರಾಮಯ್ಯನವರ ಎಕಾನಾಮಿಕ್ಸ್​ ಜನರಿಗೆ ಗೊತ್ತಿದೆ.

    ಎನ್​.ರವಿಕುಮಾರ್​. ವಿಪ ಸದಸ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts