More

    ಕೊಪ್ಪಳದಲ್ಲಿ ಕೃಷಿ‌ ಇಲಾಖೆಯಿಂದ ವಾಕಥಾನ್, ಗವಿಶ್ರೀಗಳಿಂದ ಚಾಲನೆ

    ಕೊಪ್ಪಳ: ನಾವು ಆಸ್ತಿಗಿಂತ ಆರೋಗ್ಯಕ್ಕೆ ಮೊದಲ ಆದ್ಯತೆ ಕೊಡಬೇಕು. ಉತ್ತಮ ಆರೋಗ್ಯವೇ ನಿಜವಾದ ಸಂಪತ್ತು. ಅದನ್ನು ನಾವೆಲ್ಲ ಹೊಂದೋಣ ಎಂದು ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

    ನಗರದ ಗವಿಮಠ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ಸಿರಿಧಾನ್ಯ ಹಬ್ಬ, ಸಿರಿಧಾನ್ಯ ನಡಿಗೆ ಆರೋಗ್ಯದ ಕಡೆಗೆ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

    ಯೋಗ, ಧ್ಯಾನ, ಆಹಾರ ಪದ್ಧತಿ, ವ್ಯಾಯಾಮದಿಂದ ಆರೋಗ್ಯ ಸ್ಥಿರವಾಗಿರುತ್ತದೆ. ಆರೋಗ್ಯದ ಬಗ್ಗೆ ಎಲ್ಲರೂ ಕಾಳಜಿವಹಿಸಬೇಕು. ಆಹಾರ ಮೈ, ಮನಸ್ಸನ್ನು ಶುದ್ಧೀಕರಿಸುತ್ತದೆ. ಹೀಗಾಗಿ ನಾವು ಸೇವಿಸುವ ಅನ್ನ ಶುದ್ಧವಾಗಿರಬೇಕು.

    ವಾಗ್ದಾನ ಕೇವಲ ಜಾಥಾಗೆ ಸೀಮಿತವಾಗದಿರಲಿ. ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇಹ, ಮನಸ್ಸು ಹಾಗೂ ಆತ್ಮದ ಆರೋಗ್ಯ ಕಾಪಾಡಿಕೊಳ್ಳಬೇಕು. ಹಣದಿಂದ ಔಷಧ ಖರೀದಿಸಬಹುದು ಹೊರತು ಆರೋಗ್ಯವನ್ನಲ್ಲ ಎಂಬ ಸತ್ಯ ಅರಿಯಬೇಕು ಎಂದರು.

    ಪ್ರಜಾಪಿತ ಈಶ್ವರಿಯ ವಿವಿ ಅಕ್ಕ ಯೋಗಿನಿ ಮಾತನಾಡಿ, ಸಿರಿಧಾನ್ಯದ ಮಹತ್ವ ಎಲ್ಲರೂ ಅರಿಯಬೇಕು. ಇವುಗಳ ಬಳಕೆಯಿಂದ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯ. ಯುವಕರು ಪಾಶ್ಚಾತ್ಯ ಆರೋಗ್ಯ ಶೈಲಿ ರೂಢಿಸಿಕೊಂಡು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

    ಪೋಷಕರು ಈ ಬಗ್ಗೆ ಎಚ್ಚರವಹಿಸಬೇಕು. ಸಿರಿಧಾನ್ಯ ಬಳಕೆ ಹೆಚ್ಚಲಿ. ರೈತರು ಹೆಚ್ಚು ಬೆಳೆಯಲಿ ಎಂದು ಆಶಿಸಿದರು.
    ಗವಿಮಠದಿಂದ ಅಶೋಕ ವೃತ್ತದವರೆಗೆ ಜಾಥಾ ನಡೆಸಲಾಯಿತು.

    ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್​., ಉಪ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ, ಸಹಾಯಕ ಕೃಷಿ ನಿರ್ದೇಶಕ ಅಜ್ಮೀರ ಅಲಿ, ನವೋದಯ ವಿರುಪಣ್ಣ ಹಾಗೂ ಇತರ ಗಣ್ಯರು, ಕೃಷಿ ಇಲಾಖೆ ಅಧಿಕಾರಿ, ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts