More

    ಫಲಾನುಭವಿಗಳ ಸುರಕ್ಷತೆಗೆ ಆದ್ಯತೆ ನೀಡಿ, ಅಧಿಕಾರಿಗಳಿಗೆ ಎಡಿಸಿ ಸಾವಿತ್ರಿ ಕಡಿ ಸೂಚನೆ

    ಕೊಪ್ಪಳ: ಕನಕಗಿರಿ ಉತ್ಸವದಲ್ಲಿ ಆಯೋಜಿಸಲಾಗುವ ಗಂಗಾವತಿ ತಾಲೂಕು ಹಾಗೂ ಕನಕಗಿರಿ ಮತಕ್ಷೇತ್ರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ಆಗಮಿಸುವ ಫಲಾನುಭವಿಗಳನ್ನು ಸುರಕ್ಷಿತವಾಗಿ ಕರೆ ತಂದು ಮರಳಿ ತೆರಳಲು ವ್ಯವಸ್ಥೆ ಮಾಡಿ ಎಂದು ಎಡಿಸಿ ಸಾವಿತ್ರಿ ಕಡಿ ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಗ್ಯಾರಂಟಿ ಯೋಜನೆಗಳ ಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳುವ ಸಂಬಂಧ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.

    ಗಂಗಾವತಿ, ಕನಕಗಿರಿ ಹಾಗೂ ಕಾರಟಗಿ ತಾಲೂಕುಗಳಿಂದ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ಕರೆತರಬೇಕು. ಅಗತ್ಯ ಬಸ್​, ಲಾನುಭವಿಗಳ ಬಗ್ಗೆ ಆಯಾ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮಗೊಳಿಸಿ. 160 ಗ್ರಾಮಗಳಿಂದ ಫಲಾನುಭವಿಗಳು ಆಗಮಿಸಲಿದ್ದು, ಬಸ್​ ಆಗಮನ&ನಿರ್ಗಮನ ಸಮಯ, ಒಟ್ಟು ಅಂತರ, ಫಲಾನುಭವಿಗಳಿಗೆ ಊಟದ ವ್ಯವಸ್ಥೆ, ಮುಂತಾದ ಅವಶ್ಯಕ ವಿಷಯಗಳ ಬಗ್ಗೆ ಗಮನವಿರಲಿ. ತುರ್ತು ಪರಿಸ್ಥಿತಿ ನಿರ್ವಹಿಸಲು ಬಸ್​ಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಅಗತ್ಯವಿದ್ದಲ್ಲಿ ಪ್ರತಿ ಬಸ್​ಗೆ ಒಬ್ಬ ಶುಶ್ರೂಕಿಯರನ್ನು ನಿಯೋಜಿಸಿ. ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ಯಾವುದೇ ಫಲಾನುಭವಿಗಳಿಗೆ ಬಸ್​ ಹಾಗೂ ಸಮಾವೇಶದಲ್ಲಿ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ತಿಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದರು.

    ಎಸಿ ಕ್ಯಾ.ಮಹೇಶ ಮಾಲಗಿತ್ತಿ ಮಾತನಾಡಿ, ಫಲಾನುಭವಿಗಳನ್ನು ಕರೆತರಲು 300 ಬಸ್​ಗಳ ಅವಶ್ಯವಿದೆ. ವಿಭಾಗೀಯ ನಿಯಂತ್ರಣಾಧಿಕಾರಿ ಈ ಬಗ್ಗೆ ಕ್ರಮವಹಿಸಿ. ಸಮಾವೇಶದ ನಂತರ ಫಲಾನುಭವಿಗಳನ್ನು ಸುರಕ್ಷಿತವಾಗಿ ಅವರ ಊರುಗಳಿಗೆ ತಲುಪಿಸಿ. ಉತ್ಸವದ ಅಂಗವಾಗಿ ವಾಹನ ಹಾಗೂ ಜನದಟ್ಟಣೆ ಇರುತ್ತದೆ. ಎಲ್ಲ ಅಂಶಗಳನ್ನು ಪರಿಗಣಿಸಿ ತಹಸೀಲ್ದಾರರು ವಾಹನಗಳ ರೂಟ್​ ಮ್ಯಾಪ್​ ಸಿದ್ಧಪಡಿಸಲು ತಿಳಿಸಿದರು.

    ಜಿಪಂ ಮುಖ್ಯ ಯೋಜನಾಧಿಕಾರಿ ಡಿ.ಮಂಜುನಾಥ, ತಹಸೀಲ್ದಾರರಾದ ವಿಶ್ವನಾಥ, ಕುಮಾರಸ್ವಾಮಿ, ನಾಗರಾಜ ಯು., ಆಹಾರ ಇಲಾಖೆ ಉಪನಿರ್ದೇಶಕ ಚಿದಾನಂದಪ್ಪ, ಕೆಕೆಆರ್​ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೆಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts