More

    ಮಂಡ್ಯದ ಉಸ್ತುವಾರಿ ವಹಿಸಿಕೊಂಡ ಅಶೋಕ್: ಸಚಿವ ಗೋಪಾಲಯ್ಯ ಹಾಸನಕ್ಕೆ ಸೀಮಿತ

    ಮಂಡ್ಯ: ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್, ಒಕ್ಕಲಿಗ ಪ್ರಾಬಲ್ಯವಿರುವ ಮಂಡ್ಯ ಹಾಗೂ ಹಾಸನ ಜಿಲ್ಲೆಯಲ್ಲಿ ಕಮಲ ಅರಳಿಸುವ ನಿಟ್ಟಿನಲ್ಲಿ ಗೇಮ್ ಪ್ಲ್ಯಾನ್ ಮಾಡಿದೆ. ಅದರಂತೆ ದಿಢೀರ್ ಬೆಳವಣಿಗೆ ಎಂಬಂತೆ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಆರ್.ಅಶೋಕ್ ಅವರನ್ನು ಮಂಡ್ಯ ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಿಸಿದೆ. ಅತ್ತ ಗೋಪಾಲಯ್ಯ ಅವರಿಗೆ ನೀಡಿದ್ದ ಎರಡು ಜಿಲ್ಲೆಯ ಜವಾಬ್ದಾರಿಯನ್ನು ಕಡಿತಗೊಳಿಸಿ ಹಾಸನಕ್ಕೆ ಸೀಮಿತಗೊಳಿಸಿದೆ.
    ಹಳೇ ಮೈಸೂರು ಭಾಗದ ಜಿಲ್ಲೆಗಳನ್ನು ಟಾರ್ಗೆಟ್ ಮಾಡಿಕೊಂಡು ತಂತ್ರಗಾರಿಕೆ ರೂಪಿಸುತ್ತಿರುವ ಬಿಜೆಪಿ ಈಗಾಗಲೇ ಹಲವು ಕಾರ್ಯಕ್ರಮವನ್ನು ಹಂತ ಹಂತವಾಗಿ ರೂಪಿಸುತ್ತಿದೆ. ಮಹಾಕುಂಭಮೇಳ, ಸಂಕೀರ್ತನಾ ಯಾತ್ರೆ ಮಾಡಿ ಬಲ ಪ್ರದರ್ಶನ ಮಾಡಲಾಗಿತ್ತು. ಅದರಂತೆ ಚುನಾವಣಾ ಚಾಣಕ್ಯ ಅಮಿತ್ ಷಾರನ್ನು ಕರೆಸಿ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅದರ ಮುಂದುವರೆದ ಭಾಗವಾಗಿ ಇದೀಗ ಆರ್.ಅಶೋಕ್ ಅವರಿಗೆ ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನು ವಹಿಸಲಾಗಿದೆ.
    ತಮ್ಮದೇ ಆದ ವರ್ಚಸ್ಸನ್ನು ಹೊಂದಿರುವ ಆರ್.ಅಶೋಕ್ ಅವರನ್ನು ಎಲ್ಲ ರೀತಿಯಲ್ಲಿಯೂ ಯೋಚಿಸಿ ಮಂಡ್ಯ ಜಿಲ್ಲೆಗೆ ಉಸ್ತುವಾರಿಯನ್ನಾಗಿ ಮಾಡಲಾಗಿದೆ. ಇದಕ್ಕೂ ಕೆಲ ಕಾರಣವಿದೆ. ಈಗಾಗಲೇ ಒಕ್ಕಲಿಗ ನಾಯಕರನ್ನು ಜಿಲ್ಲೆಗೆ ನಿಯೋಜನೆ ಮಾಡಿದ್ದರೂ ಸಕಾರಾತ್ಮಕ ಲಿತಾಂಶ ಸಿಕ್ಕಿಲ್ಲ. ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಅವರನ್ನು ಉಸ್ತುವಾರಿ ಮಾಡಿದ್ದರೂ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಕೆಸಿಎನ್ ಕೆ.ಆರ್.ಪೇಟೆ ಬಿಟ್ಟು ಬೇರೆ ಕ್ಷೇತ್ರದ ಕಡೆ ಗಮನಹರಿಸಲೇ ಇಲ್ಲ. ಈ ಹಿನ್ನೆಲೆಯಲ್ಲಿ ಸಂಘಟನೆ ದೃಷ್ಟಿಯಿಂದ ಹಾಗೂ ಮಂಡ್ಯ ಜಿಲ್ಲೆಯ ರಾಜಕೀಯದ ಬಗ್ಗೆ ಹೆಚ್ಚು ಅರಿವಿರುವ ಕಾರಣಕ್ಕೆ ಆರ್.ಅಶೋಕ್‌ಗೆ ಮಣೆ ಹಾಕಲಾಗಿದೆ. ಮಾತ್ರವಲ್ಲದೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಟೀಕೆಗಳಿಗೆ ತಕ್ಕ ಉತ್ತರ ಕೊಡುವ ವಿಚಾರದಲ್ಲಿ ಅಶೋಕ್ ಮುಂದಿದ್ದಾರೆ. ಆದ್ದರಿಂದ ದಳ ಹಾಗೂ ಕಾಂಗ್ರೆಸ್ ಪ್ರಾಬಲ್ಯವಿರುವ ಮಂಡ್ಯದಲ್ಲಿ ಬಿಜೆಪಿ ಪರವಾಗಿ ಸಮರ್ಥ ವಾದ ಮಂಡಿಸುವಲ್ಲಿ ್ಲಸ್ ಆಗಲಿದೆ.
    ಇನ್ನು ಕೆಲವೇ ದಿನದಲ್ಲಿ ಚುನಾವಣೆ ೋಷಣೆಯಾಗಲಿದೆ. ಅಷ್ಟರಲ್ಲಿ ಪಕ್ಷದ ಸಂಘಟನೆ ಜತೆಗೆ ಸಾಮೂಹಿಕ ನಾಯಕತ್ವದೊಂದಿಗೆ ಚುನಾವಣೆ ಎದುರಿಸಲು ಮುಖಂಡರು, ಕಾರ್ಯಕರ್ತರನ್ನು ಸಜ್ಜುಗೊಳಿಸಬೇಕಿದೆ. ಒಕ್ಕಲಿಗರ ಪ್ರಾಬಲ್ಯದ ಜಿಲ್ಲೆಯಲ್ಲಿ ಬಿಜೆಪಿ ಗೇಮ್‌ಪ್ಲ್ಯಾನ್ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
    ಹಾಸನವೂ ಕಮಲಕ್ಕೆ ಪ್ರಮುಖ: ಮಂಡ್ಯದಷ್ಟೇ ಹಾಸನ ಜಿಲ್ಲೆಯೂ ಪ್ರಮುಖವಾಗಿದೆ. ಗೋಪಾಲಯ್ಯ ಅವರಿಗೆ ಎರಡು ಜಿಲ್ಲೆಯನ್ನು ವಹಿಸಿದರೆ ಚುನಾವಣೆ ವೇಳೆಗೆ ಹೊರೆಯಾಗಲಿದೆ. ಆದ್ದರಿಂದ ಒಂದು ಜಿಲ್ಲೆಯ ಜವಾಬ್ದಾರಿ ಕೊಟ್ಟರೆ ನಿರ್ವಹಿಸಬಹುದೆನ್ನುವ ಯೋಚನೆ ಇರಬಹುದು. ಎರಡು ಜಿಲ್ಲೆಯಲ್ಲಿ ಪಕ್ಷದ ವರ್ಚಸ್ಸು ವೃದ್ಧಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಕಾರ್ಯತಂತ್ರದಲ್ಲಿ ಇದು ಕೂಡ ಒಂದಾಗಿದೆ ಎನ್ನುವ ಮಾತು ಪಕ್ಷದ ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts