More

    ಮಣ್ಣು, ನೀರಿನ ಸಂರಕ್ಷಣೆ ಅವಶ್ಯ;ಜಿಲ್ಲಾ ಉಪ ಕೃಷಿ ನಿರ್ದೇಶಕ ಸಹದೇವ ಯರಗುಪ್ಪ

    ಅಳವಂಡಿ: ಮಣ್ಣು ಮತ್ತು ನೀರಿನ ಸಂರಕ್ಷಣೆ, ಭೂ ಸವಕಳಿ ತಡೆಯುವುದು ಹಾಗೂ ನೀರನ್ನು ನಿಲ್ಲುವಂತೆ ಮಾಡಿ ಭೂಮಿಯಲ್ಲಿ ಇಂಗಿಸುವುದು ಜಲಾನಯನ ಯೋಜನೆಯ ಮುಖ್ಯ ಉದ್ದೇಶ ಎಂದು ಜಿಲ್ಲಾ ಉಪ ಕೃಷಿ ನಿರ್ದೇಶಕ ಸಹದೇವ ಯರಗುಪ್ಪ ತಿಳಿಸಿದರು.

    ಗ್ರಾಮದಲ್ಲಿ ಜಿಪಂ, ತಾಪಂ, ಕೃಷಿ ಇಲಾಖೆ, ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಯೋಜನೆ, ವಿಶ್ವ ಬ್ಯಾಂಕ ನೆರವಿನ ರಿವಾರ್ಡ್ ಜಲಾನಯನ ಅಭಿವೃದ್ಧಿ ಯೋಜನೆ, ಕ್ಷೇತ್ರಮಟ್ಟದ ಸರ್ಕಾರೇತರ ಸಂಸ್ಥೆ ಸ್ವೋರ್ಡ-ಕೆ-ಸಾಶ್ವಿಹಳ್ಳಿ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ಮಾತನಾಡಿದರು.
    ರಾಜ್ಯದ 11 ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಯಲ್ಲಿದ್ದು, ಅಳವಂಡಿ ಹೋಬಳಿಯ ಆಯ್ದ ಗ್ರಾಮಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗುವುದು. ಈ ಯೋಜನೆಗೆ ವಿಶ್ವ ಬ್ಯಾಂಕ್ ಶೇ.70 ಹಾಗೂ ರಾಜ್ಯ ಸರ್ಕಾರ ಶೇ.30 ಹಣಕಾಸಿನ ನೆರವು ನೀಡಲಿದೆ ಎಂದರು.

    ಜಮೀನಿನ ಎತ್ತರದ ಮಟ್ಟದಿಂದ ಕೆಳಮಟ್ಟಕ್ಕೆ ಹರಿಯುವ ನೀರನ್ನು ನಿಲ್ಲಿಸಿ, ಭೂಮಿಯಲ್ಲಿ ಇಂಗುವಂತೆ ಮಾಡುವುದು ಹಾಗೂ ಹೆಚ್ಚುವರಿಯಾಗಿ ಹಳ್ಳದ ಕಡೆ ಹರಿಯುವ ನೀರಿಗೆ ಚೆಕ್‌ಡ್ಯಾಮ್ ನಿರ್ಮಿಸಿ ನೀರನ್ನು ಭೂಮಿಯಲ್ಲಿ ಇಂಗಿಸಿ ಅಂತರ್ಜಲ ಮಟ್ಟ ಹೆಚ್ಚಿಸುವುದು ಉದ್ದೇಶವಾಗಿದೆ ಎಂದರು.

    ಕೃಷಿ ಅಧಿಕಾರಿ ಬಿ.ಎಂ.ಗೊಬ್ಬರಗುಂಪಿ ಮಾತನಾಡಿ, ಈ ಯೋಜನೆ ಜಾರಿಯಿಂದ ರೈತರ ಆದಾಯ ದ್ವಿಗುಣಗೊಳ್ಳಲಿದೆ. ರೈತರ ಜಮೀನಿನ ಮಣ್ಣು ಪರೀಕ್ಷೆ ಮಾಡುವುದರಿಂದ ಮಣ್ಣಿನಲ್ಲಿರುವ ಪೋಷಕಾಂಶಗಳಿಗೆ ತಕ್ಕಂತೆ ಬೆಳೆ ಬೆಳೆಯಲು ಶಿಫಾರಸು ಮಾಡಲಾಗುವುದು ಹಾಗೂ ರೈತ ಸಂಘ, ಮಹಿಳಾ ಸಂಘಗಳಿಗೆ ಕೌಶಲಾಭಿವೃದ್ಧಿ ತರಬೇತಿ ನೀಡಲಾಗುವುದೆಂದು ತಿಳಿಸಿದರು.

    ಎಎಒ ವೀರೇಶ ಪಟ್ಟೇದ, ಮಾರುತಿ, ಗ್ರಾಪಂ ಸದಸ್ಯ ಹನುಮಂತ ಮೂಲಿಮನಿ, ಜಲಾನಯನ ಯೋಜನೆ ಸಹಾಯಕರಾದ ಮಂಜು, ಗವಿಸಿದ್ದಪ್ಪ, ಸುರೇಶ ವಾಸ್ತೆ, ವೆಂಕಟೇಶ, ಬಸನಗೌಡ, ಸಂತೋಷ, ರೈತರಾದ ಅಂಬಣ್ಣ, ಮುರ್ತುಜಾ, ಹುಸೇನ್‌ಸಾಬ್, ಮಲ್ಲಪ್ಪ, ಈರಪ್ಪ, ರಾಮಣ್ಣ, ಸುರೇಶ, ನಿಂಗಪ್ಪ, ನಾಗಪ್ಪ, ಅಲಿಸಾಬ್, ಈರಪ್ಪ, ಸಿದ್ದಪ್ಪ, ಶಂಕ್ರಪ್ಪ, ಗೋಣೇಪ್ಪ, ಹನುಮಂತ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts