More

    ಜಿಲ್ಲಾ ಸಮುದಾಯ ಅಭಿವೃದ್ಧಿ ತಜ್ಞೆ ಲಕ್ಷ್ಮೀ ಸಲಹೆ.

    ಹೂವಿನಹಡಗಲಿ: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ ಉದ್ಯೋಗದಾತರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಉಪಯೋಗ ಪಡಿಯಿರಿ ಎಂದು ಕೌಶಲ್ಯಾಭಿವೃದ್ಧಿ ಇಲಾಖೆಯ ಜಿಲ್ಲಾ ಸಮುದಾಯ ಅಭಿವೃದ್ಧಿ ತಜ್ಞೆ ಲಕ್ಷ್ಮೀ ಹೇಳಿದರು.

    ಇದನ್ನೂ ಓದಿ: ಸಮುದಾಯದ ಅಭಿವೃದ್ಧಿಗೆ ಶಿಕ್ಷಣವೇ ಮಾರ್ಗ

    ಪಟ್ಟಣದ ಪುರಸಭೆಯ ಎಂ.ಪಿ.ಪ್ರಕಾಶ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ಪುರಸಭೆಯ ಸಹಯೋಗದಲ್ಲಿ ಬೀದಿಬದಿ ವ್ಯಾಪಾರಸ್ಥರಗೆ ಸೋಮವಾರ ಆಯೋಜಿಸಿದ್ದ ಒಂದು ದಿನದ ಪಿ.ಎಂ.ಸ್ವನಿಧಿ ಹಾಗೂ ಸ್ವನಿಧಿ ಸಮೃದ್ಧಿ ಶಿಬಿರದಲ್ಲಿ ಮಾತನಾಡಿದರು.

    ಸಣ್ಣ ಮತ್ತು ಅತಿಸಣ್ಣ ವ್ಯಾಪಾರಸ್ಥರಲ್ಲಿ ಸಂಘಟನಾ ಮನೋಭಾವ ಕಡಿಮೆಯಾಗಿದ್ದು ಒಬ್ಬರಿಗೊಬ್ಬರು ಸಹಾಯ ಹಸ್ತ ಚಾಚುವ ಮೂಲಕ ಸಲಹೆಗಳನ್ನು ನೀಡಿ ಸರ್ಕಾರದಲ್ಲಿನ ಸೌಲಭ್ಯಗಳನ್ನು ಬಳಸಿಕೊಳ್ಳಲು ಮುಂದಾಗಬೇಕು ಎಂದರು.

    ಪುರಸಭೆ ಮುಖ್ಯಾಧಿಕಾರಿ ಪಚ್ಚಿ ಮಲ್ಲೇಶ ಮಾತನಾಡಿ, ಪಟ್ಟಣ ಬೀದಿ ಬದಿ ವ್ಯಾಪಾರಸ್ಥರು ವಾಹನಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ರಸ್ತೆ ಅತಿಕ್ರಮಣ ಮಾಡದೆ ಪಾದಾಚಾರಿ ಮಾರ್ಗದಿಂದ ಸುಮಾರು 5 ಅಡಿ ಹಿಂದಕ್ಕೆ ವ್ಯಾಪಾರ ಮಾಡಬೆಕು.

    ಸ್ವಚ್ಛತೆಯನ್ನು ಕಾಪಾಡಬೇಕು ಹಾಗೂ ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ಎಲ್ಲರೂ ಬಳಸಿ ಎಂದರು. ಕಂದಾಯಾಧಿಕಾರಿ ಸಂತೋಷ್ ಕುಮಾರ್, ಹಿರಿಯ ಆರೋಗ್ಯ ನಿರೀಕ್ಷಕ ಕೆ.ಮಾರುತಿ, ಕಿರಿಯ ಆರೋಗ್ಯ ನಿರೀಕ್ಷಕ ಸೋಮಶೇಖರ್, ಸಮುದಾಯ ಸಂಘಟಕ ಮೈಲಾರಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts