More

    ಸಮುದಾಯದ ಅಭಿವೃದ್ಧಿಗೆ ಶಿಕ್ಷಣವೇ ಮಾರ್ಗ

    ಚಾಮರಾಜನಗರ: ಉಪ್ಪಾರ ಸಮುದಾಯದ ಹೆಣ್ಣುಮಕ್ಕಳ ಶಿಕ್ಷಣಕ್ಕೆ ವಸತಿಶಾಲೆಗಳ ಅಗತ್ಯವಿದ್ದು, ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

    ನಗರದ ಜೆ.ಎಚ್.ಪಟೇಲ್ ಸಭಾಂಗಣ ಜಿಲ್ಲಾ ಉಪ್ಪಾರ ಸಂಘದ ವತಿಯಿಂದ 2022-23 ನೇ ಸಾಲಿನ ಎಸ್‌ಎಸ್‌ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಉಪ್ಪಾರ ಸಮುದಾಯ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ ಮಾತ್ರ ಅಭಿವೃದ್ದಿ ಸಾಧ್ಯವಾಗುತ್ತದೆ. ಕಳೆದ 20 ವರ್ಷಗಳಿಗೆ ಹೋಲಿಸಿದರೆ ಸಮುದಾಯದಲ್ಲಿ ಶೈಕ್ಷಣಿಕವಾಗಿ ಯುಸಮುದಾಯ ಸಾಕಷ್ಟು ಮುಂದೆ ಬರುತ್ತಿದೆ. ಸಮುದಾಯದ ಮಕ್ಕಳು ಉನ್ನತ ವ್ಯಾಸಂಗ ಮಾಡುವ ಮೂಲಕ ಆಡಳಿತ ವರ್ಗದಲ್ಲಿ ಕೂರುವಂತಾಗಬೇಕು.ಈ ಮೂಲಕ ಸಮಾಜದ ಅಭಿವೃದ್ದಿ ಶ್ರಮಿಸಬೇಕು ಎಂದು ಕರೆನೀಡಿದರು.

    ಉಪ್ಪಾರ ಸಮುದಾಯದ ಕುಲಶಾಸ್ತ್ರ ಅಧ್ಯನಯ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗುತ್ತದೆ. ಸಮಾಜದಲ್ಲಿ ಬಾಲ್ಯ ವಿವಾಹಕ್ಕೆ ಕಡಿವಾಣ ಬಿದ್ದಿದೆ. ಈ ಕಾರಣದಿಂದ ಸಮಾಜದ ಹೆಣ್ಣು ಮಕ್ಕಳು ಹೆಚ್ಚುಹೆಚ್ಚು ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳ ಅಗತ್ಯ ಇದೆ ಅದನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು. ಪ್ರಸ್ತುತ ಇರುವ ಹಿಂದುಳಿದ ವರ್ಗಗಳ ವಸತಿ ಶಾಲೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

    ಉಪ್ಪಾರ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಎಸ್‌ಎಸ್‌ಎಲ್ ಸಿ ಓದಿದರೇ ಉದ್ಯೋಗಗಳು ಮನೆ ಬಾಗಿಲು ತಟ್ಟುವ ಕಾಲವೊಂದುವಿತ್ತು. ಇಂದು ಎಂಜಿನಿಯರ್, ವೈದ್ಯಕೀಯ ಕ್ಷೇತ್ರದಲ್ಲಿ ವಿಫುಲ ಅವಕಾಶ ಇದೆ. ಉಪ್ಪಾರ ಸಮುದಾಯಕ್ಕೆ ವಿದ್ಯೆಯೊಂದೇ ಶಕ್ತಿಯಾಗಿದೆ. ಆಗಾಗಿ ಸಮುದಾಯದವರು ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಸಂಘಟಿತರಾಗಿ ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಬರಬೇಕಿದೆ ಎಂದು ತಿಳಿಸಿದರು.

    2022-23 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.85 ಕ್ಕಿಂತಲೂ ಹೆಚ್ಚು ಅಂಕ ಗಳಿಸಿದ ಸುಮಾರು 240 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

    ಕಾರ್ಯಕ್ರಮದಲ್ಲಿ ಜಿ.ಪಂ.ಮಾಜಿ ಸದಸ್ಯ ಯೋಗೇಶ್, ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಬೂದಿತಿಟ್ಡು ಲಿಂಗರಾಜು, ಜಿಲ್ಲಾ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವು, ಪ್ರಾಂಶುಪಾಲ ಸೋಮಣ್ಣ, ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಚಿಕ್ಕರಾಜಶೆಟ್ಟಿ, ತಾಲೂಕು ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಸೋಮಣ್ಣ, ರೇಚಣ್ಣ, ಲೋಕೇಶ್, ಮಲ್ಲು, ಮಹೇಶ್, ನಗರಸಭಾ ಸದಸ್ಯ ಬಸವಣ್ಣ, ಗಡಿ ಯಜಮಾನರಾದ ಕೃಷ್ಣಶೆಟ್ಟಿ, ಜಯಸ್ವಾಮಿ, ಚಿಕ್ಕತಾಂಡಶೆಟ್ಟಿ, ಮರಿಸ್ವಾಮಿ, ರಂಗಸ್ವಾಮಿ, ಮಹೇಶ್, ಮುಖಂಡ ಕೃಷ್ಣಸ್ವಾಮಿ, ಪ್ರಾಂಶುಪಾಲ ಪ್ರಿಯಶಂಕರ್, ಮುಳ್ಳೂರು ಸಿದ್ದಶೆಟ್ಟಿ, ನಂಜುಂಡಸ್ವಾಮಿ, ರಮೇಶ್, ನಾಗರಾಜ್ ಉಪ್ಪಾರ್. ಸೋಮಣ್ಣ ಉಪ್ಪಾರ್, ಮಲೆಯೂರು ಮಹೇಂದ್ರ, ಚನ್ನಶೆಟ್ಟಿ, ಗೌಡಹಳ್ಳಿ ಮಹೇಶ್, ಕಂದಹಳ್ಳಿ ಬಸವಣ್ಣ, ಪಿ.ಗೋವಿಂದರಾಜು, ಮಹದೇವಸ್ವಾಮಿ ಹಾಗೂ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts