More

    ಜಿಲ್ಲಾಧಿಕಾರಿ ಗ್ರಾಮವಾಸ್ತವ್ಯ..ಹೆಚ್ಚಿದ ಜನರ ನಿರೀಕ್ಷೆ

    ಸವಣೂರ: ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳ ತಂಡದ ಗ್ರಾಮ ವಾಸ್ತವ್ಯಕ್ಕೆ ತಾಲೂಕಿನ ಮಂತ್ರೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸನೀರಲಗಿ ಗ್ರಾಮ ಸಜ್ಜಾಗಿದೆ. ಈಗಾಗಲೇ ಉಪ ವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಹಾಗೂ ತಂಡ ಗ್ರಾಮದಲ್ಲಿ ಬೀಡುಬಿಟ್ಟು, ಪೂರ್ವ ತಯಾರಿ ಕೈಗೊಂಡಿದ್ದಾರೆ.

    ಪ್ರಭಾರ ತಹಸೀಲ್ದಾರ್ ಸಿ.ಎಸ್. ಜಾಧವ, ತಾಪಂ ಇಒ ಮುನಿಯಪ್ಪ ಪಿ., ಆರ್​ಐಗಳಾದ ನಾಗರಾಜ ಸೂರ್ಯವಂಶಿ, ರವಿ ಮಾಚಕನೂರ, ಪಿಡಿಒ ಈಶ್ವರಪ್ಪ ಹಾಗೂ ಅಧಿಕಾರಿಗಳ ತಂಡ ಈಗಾಗಲೇ, ಗ್ರಾಮದಲ್ಲಿ ಉಳಿದು ಮುಖಂಡರೊಂದಿಗೆ ಗ್ರಾಮ ವಾಸ್ತವ್ಯ ಕುರಿತು ಸಿದ್ಧ್ದೆ ಆರಂಭಿಸಿದ್ದಾರೆ. ಹೊಸನೀರಲಗಿ ಹಾಗೂ ಮಂತ್ರೋಡಿ, ಜೇಕಿನಕಟ್ಟಿ ಗ್ರಾಮ ಸೇರಿ ವಿವಿಧ ಗ್ರಾಮಗಳ ಸಾರ್ವಜನಿಕರು ಸಾರ್ವತ್ರಿಕ ಹಾಗೂ ವೈಯಕ್ತಿಕ ಸಮಸ್ಯೆಗಳ ಪಟ್ಟಿ ಮಾಡಿ, ಜಿಲ್ಲಾಧಿಕಾರಿಗಳ ತಂಡ ಗ್ರಾಮ ವಾಸ್ತವ್ಯಕ್ಕೆ ಆಗಮಿಸುವುದನ್ನೇ ಕಾಯುತ್ತಿದ್ದಾರೆ.

    ಹಳ್ಳಿಗಳಲ್ಲಿರುವ ಸಮಸ್ಯೆಗಳಿವು

    ಹೊಸನೀರಲಗಿ ಗ್ರಾಮದ ಬಸ್ ನಿಲ್ದಾಣದ ಬಳಿ ಹಾಗೂ ಇನ್ನಿತರ ಮೂರು ಸ್ಥಳಗಳಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿದೆ. ಇದರಿಂದ ಮಹಿಳೆಯರು ಹಾಗೂ ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದ್ದು, ಈ ಕುರಿತು ಹಲವು ಬಾರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

    ಗ್ರಾಮದಲ್ಲಿ ಸಿಸಿ ರಸ್ತೆಗಳಿವೆ. ಆದರೆ, ಗಟಾರ ನಿರ್ವಣಗೊಂಡಿಲ್ಲ. ಜಮೀನುಗಳ ಹದ್ದುಬಸ್ತಿ್ತಾಗಿ ಅರ್ಜಿ ಸಲ್ಲಿಸಿದ್ದರೂ ಸೂಕ್ತ ಸಮಯದಲ್ಲಿ ವಿಲೇವಾರಿಯಾಗುತ್ತಿಲ್ಲ. ಜೇಕಿನಕಟ್ಟಿ ಗ್ರಾಮದಲ್ಲಿರುವ ಪಿಎಚ್​ಸಿಗೆ ಸಿಬ್ಬಂದಿ ನೇಮಿಸುವ ಮೂಲಕ ಆರೋಗ್ಯ ಕೇಂದ್ರ ಆರಂಭಿಸಬೇಕಿದೆ.

    ಶಾಲಾ ಕೊಠಡಿಗಳ ದುರಸ್ತಿ, ಮಳೆ ನೀರು ಹರಿಯಲು ಸೂಕ್ತ ವ್ಯವಸ್ಥೆ, ಓವರ್​ಹೆಡ್ ನೀರಿನ ಟ್ಯಾಂಕ್ ದುರಸ್ತಿ ಕೈಗೊಂಡು ನೀರಿನ ಸರಬರಾಜಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಮೂರು ಗ್ರಾಮಗಳಲ್ಲಿ ಸ್ಮಶಾನಗಳ ಅಭಿವೃದ್ಧಿ ಹಾಗೂ ರಸ್ತೆ ನಿರ್ಮಾಣ ಅವಶ್ಯವಾಗಿದೆ. ಸಮರ್ಪಕ ನೀರು ಪೂರೈಕೆ, ಸೀಮೆ ಎಣ್ಣೆ ವಿತರಣೆ ಸೇರಿ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೂಕ್ತ ಸಹಾಯಧನ ತಲುಪುವ ನಿರೀಕ್ಷೆಯನ್ನು ಗ್ರಾಮಸ್ಥರು ಹೊಂದಿದ್ದಾರೆ.

    ಜಿಲ್ಲಾಧಿಕಾರಿಯೊಂದಿಗೆ ಉಪ ವಿಭಾಗ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ತಂಡ ಹೊಸನೀರಲಗಿ ಗ್ರಾಮಕ್ಕೆ ಫೆ. 20ರಂದು ಬೆಳಗ್ಗೆ 10 ಗಂಟೆಗೆ ಆಗಮಿಸಿ ಸಾರ್ವಜನಿಕರ ಸಮಸ್ಯೆಯನ್ನು ಆಲಿಸಲಿದ್ದಾರೆ. ಫೆ. 21ರಂದು ಬೆಳಗ್ಗೆ 8 ಗಂಟೆಗೆ ಗ್ರಾಮದಿಂದ ನೇರವಾಗಿ ತಮ್ಮ ಕಚೇರಿಗೆ ತೆರಳಲಿದ್ದಾರೆ. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಪರಿಹಾರ ಸೂಚಿಸುವ ಕಾರ್ಯಕ್ಕೆ ಪೂರ್ವ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಈ ಕುರಿತು ಈಗಾಗಲೇ, ಸಾರ್ವಜನಿಕರಿಗೆ ಪ್ರಕಟಣೆ ನೀಡಲಾಗಿದೆ.

    | ಅನ್ನಪೂರ್ಣ ಮುದಕಮ್ಮನವರ ಉಪವಿಭಾಗಾಧಿಕಾರಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts