More

    ಕೋವಿಡ್ ಸೋಂಕಿತರಿಗೆ ಹಳಸಿದ ಅನ್ನ!

    ಬಾಗಲಕೋಟೆ: ಕೋವಿಡ್ ಸೋಂಕಿತರಿಗೆ ಇದೆಂತ ನರಕಯಾತನೆ? ಬೆಳಗಿನ ಉಪಹಾರಕ್ಕೆ ಹಳಸಿದ ಅನ್ನ ಕೊಟ್ಟಿದ್ದಾರೆ!

    ರೋಗಿಗಳಿಗೆ ಶುಚಿ ಮತ್ತು ಬಿಸಿ ಆಹಾರ ಕೊಡಬೇಕು ಎಂದು ವೈದ್ಯ ಲೋಕವೇ ಸಲಹೆ ನೀಡುತ್ತಿದೆ. ಕರೊನಾ ಸೋಂಕಿತರ ವಿಚಾರದಲ್ಲಿ ಈ ಕಾಳಜಿ ತುಸು ಹೆಚ್ಚಾಗೇ ಇರಬೇಕು. ಆದರಿಲ್ಲಿ ತಂಗಳು ಆಹಾರ ಕೊಟ್ಟರೂ ಹೇಗೋ ಅರ್ಜೆಸ್ಟ್ ಮಾಡಿಕೊಂಡು ತಿನ್ನಬಹುದು. ಹಳಸಿ ವಾಸನೆ ಬರುತ್ತಿರೋ ಅನ್ನವನ್ನು ಹೇಗೆ ತಿನ್ನೋದು ಎಂದು ಇಲ್ಲಿನ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ರೋಗಿಗಳು ಇಂದು ಬೆಳಗ್ಗೆ ಪ್ರಶ್ನಿಸಿದ್ದಾರೆ.

    ಇದನ್ನೂ ಓದಿರಿ ಅವ್ವ, ಅಕ್ಕನ ಮಡಿಲಲ್ಲೇ ಪ್ರಾಣಬಿಟ್ಟ ಇಂಜಿನಿಯರ್​ ವಿದ್ಯಾರ್ಥಿ

    ಬಾಗಲಕೋಟೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಇಂದು (ಸೋಮವಾರ) ಬೆಳಗಿನ ಉಪಹಾರಕ್ಕೆ ಹಳಸಿದ ಅನ್ನ ಕೊಟ್ಟಿದ್ದಾರೆಂದು ಸೋಂಕಿತರು ದೂರಿದ್ದಾರೆ. ಈ ಬಗ್ಗೆ ರೋಗಿಗಳು ಆಸ್ಪತ್ರೆ ಸಿಬ್ಬಂದಿಯನ್ನ ಪ್ರಶ್ನಿಸಿದರೆ, ‘ಹಳಸಿದ ಅನ್ನದ ಬಗ್ಗೆ ತಮಗೇನು ಗೊತ್ತಿಲ್ಲ. ಕಳಿಸಿದ್ದನ್ನು ಕೊಡುತ್ತಿದ್ದೇವೆ’ ಎಂದಿದ್ದಾರೆ.

    ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರೊನಾ ಸೋಂಕಿತ ಪೊಲೀಸ್ ಕಾನ್ಸ್ಟೇಬಲ್, ಹಸಳಿದ ಅನ್ನ ಕೊಟ್ಟಿರುವ ಬಗ್ಗೆ ಜಿಲ್ಲಾ ಸರ್ಜನ್​ಗೆ ಫೋನ್ ಮೂಲಕ ತಿಳಿಸಿ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಕೋರಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವ ಸರ್ಜನ್ ಭರವಸೆ ನೀಡಿದ್ದಾರೆ.

    ಇನ್ನು ಈ ವಾರ್ಡ್​ನಲ್ಲಿ ಸೋಂಕಿತರ ಸ್ನಾನ ಮತ್ತು ಶೌಚಕ್ಕೆ ಒಂದೇ ಚಂಬು ಇಟ್ಟಿದ್ದಾರೆ. ಅವ್ಯವಸ್ಥೆಗಳ ಕೂಪವಾದರೆ ನಮ್ಮ ಗತಿಯೇನು ಎಂದು? ಸೋಂಕಿತ ಪೇದೆ ಅಸಮಾಧಾನ ಹೊರಹಾಕಿದ್ದಾರೆ.

    ರಾಜ್ಯದ ಬಹುತೇಕ ಕೋವಿಡ್​ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾಗಿ ಊಟ ಸಿಗುತ್ತಿಲ್ಲ ಎಂಬ ಆರೋಪ ಆರಂಭದಿಂದಲೂ ಕೇಳಿ ಬಂದಿದೆ. ಸಣ್ಣಪುಟ್ಟ ಲೋಪಗಳಾಗಿದ್ದು, ಇನ್ಮುಂದೆ ಇಂತಹ ಪ್ರಮಾದ ಮತ್ತೆ ಮರುಕಳಿಸುವುದಿಲ್ಲ ಎಂದು ಭರವಸೆ ನೀಡಿದ್ದ ಸಚಿವರು, ಗುಣಮಟ್ಟದ ಆಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಇತ್ತೀಚೆಗೆ ತಾಕೀತು ಮಾಡಿದ್ದರು. ಆದರೆ, ಮತ್ತೆ ಈ ಅವ್ಯವಸ್ಥೆ ಮರುಕಳಿಸುತ್ತಿರುವುದು ವಿಪರ್ಯಾಸ.

    video/ ಕೋವಿಡ್​ ವಾರ್ಡ್​ಗೆ ಎಂಟ್ರಿ ಕೊಟ್ಲು ‘ಮಸ್ತ್ ಮಸ್ತ್ ಹುಡುಗಿ…’ ವಿಡಿಯೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts