More

    ನಮ್ಮ ಮೆಟ್ರೋದಿಂದ ಬಹುಪಯೋಗಿ ಎನ್​ಸಿಎಂಸಿ ಕಾರ್ಡ್​ ವಿತರಣೆ; ವಾಣಿಜ್ಯ ಮಳಿಗೆಗಳಲ್ಲೂ ಬಳಕೆ ಸಾಧ್ಯ

    ಬೆಂಗಳೂರು: ‘ಒನ್​ ನೇಷನ್​ ಒನ್​ ಕಾರ್ಡ್​’ ಪರಿಕಲ್ಪನೆಯಲ್ಲಿ ನ್ಯಾಷನಲ್​ ಕಾಮನ್​ ಮೊಬಿಲಿಟಿ ಕಾರ್ಡ್​ (ಎನ್​ಸಿಎಂಸಿ) ಪರಿಚಯಿಸಲಾಗಿದೆ. ನಮ್ಮ ಮೆಟ್ರೋ ಪ್ರಯಾಣಕ್ಕೆ ಬಳಸುವ ಜತೆಗೆ ಡೆಬಿಟ್​ ಕಾರ್ಡ್​ ಮಾದರಿಯಲ್ಲಿ ಎಲ್ಲಿ ಬೇಕಾದರೂ ಎನ್​ಸಿಎಂಸಿ ಕಾರ್ಡ್​ ಉಪಯೋಗಿಸಲು ಅವಕಾಶವಿರುವುದರಿಂದ ಕಾರ್ಡ್​ಗಳ ಖರೀದಿಗೆ ನಮ್ಮ ಮೆಟ್ರೋ ಪ್ರಯಾಣಿಕರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.

    ಪ್ರತಿ ತಿಂಗಳು ಶೇ.45 ಪ್ರಯಾಣಿಕರು ಸ್ಮಾರ್ಟ್​ಕಾರ್ಡ್​ ಬಳಸಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ದೇಶದ ವಿವಿಧ ಸಾರಿಗೆ ವ್ಯವಸ್ಥೆಗಳಲ್ಲಿ ಬಳಸಬಹುದಾದ್ದರಿಂದ ಎನ್​ಸಿಎಂಸಿ ಕಾರ್ಡ್​ಗಳ ಖರೀದಿಗೂ ಪ್ರಯಾಣಿಕರು ಉತ್ಸುಕರಾಗಿದ್ದಾರೆ. ಆರ್​ಬಿಎಲ್​ ಬ್ಯಾಂಕ್​ನ ಒಡಂಬಡಿಕೆಯೊಂದಿಗೆ ಎಜಿಎಸ್​ ಟ್ರಾನ್ಸಾಕ್ಟ್​ ಟೆಕ್ನಾಲಜೀಸ್​ ಸಂಸ್ಥೆ ಈ ಕಾರ್ಡ್​ ಅಭಿವೃದ್ಧಿಪಡಿಸಿದೆ. ಗ್ರಾಹಕರು ಮೆಟ್ರೋ ನಿಲ್ದಾಣದಲ್ಲಿರುವ ಟಿಕೆಟ್​ ಕೌಂಟರ್​ನಿಂದ ಎನ್​ಸಿಎಂಸಿ ಕಾರ್ಡ್​ ಖರೀದಿಸಬಹುದು. ಕಾರ್ಡ್​ ಬೆಲೆ 100 ರೂ. ಆಗಿದ್ದು, ಇದರಲ್ಲಿ 50 ರೂ. ಠೇವಣಿಯಾಗಿ ಖಾತೆಯಲ್ಲೇ ಉಳಿದುಕೊಳ್ಳುತ್ತದೆ.

    ಕೆವೈಸಿ ಸಲ್ಲಿಸದೆ ಹೆಸರು ಹಾಗೂ ಮೊಬೈಲ್​ ಸಂಖ್ಯೆ ನೀಡಿ ವಿವಿಧ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಲ್ಲಿ ಬಳಸಬಹುದಾದ ಪ್ರಿಪೇಡ್​ ಕಾರ್ಡ್​ಗಳನ್ನು ನೀಡಲು ಪರವಾನಗಿ ಪಡೆದ ಬ್ಯಾಂಕ್​ ಮತ್ತು ಬ್ಯಾಂಕೇತರ ನಿರ್ವಹಣೆಯ ಪ್ರಿಪೇಯ್ಡ್​ ಪೇಮೆಂಟ್​ ಇನ್​ಸ್ಟ್ರುಮೆಂಟ್​ಗಳಿಗೆ (ಪಿಪಿಐ) ಭಾರತೀಯ ರಿಸರ್ವ್​ ಬ್ಯಾಂಕ್​ ಅನುಮತಿ ನೀಡಿದೆ. ಬಳಿಕ ಸುಲಭವಾಗಿ ಎನ್​ಸಿಎಂಸಿ ಕಾರ್ಡ್​ಗಳು ಲಭ್ಯವಾಗುತ್ತಿವೆ.

    ಬಳಕೆ ಹೇಗೆ?

    ಎನ್​ಸಿಎಂಸಿ ಕಾರ್ಡ್​ಗಳನ್ನು ಡೆಬಿಟ್​ ಕಾರ್ಡ್​ ಮಾದರಿಯಲ್ಲಿ ಎಲ್ಲಿ ಬೇಕಿದ್ದರೂ ಬಳಕೆ ಮಾಡಬಹುದು. ಆರ್​ಬಿಎಲ್​ ಬ್ಯಾಂಕ್​, ಖಾತೆಯನ್ನು ಸಂಪೂರ್ಣವಾಗಿ ನಿರ್ವಹಣೆ ಮಾಡುತ್ತದೆ. ಕಾರ್ಡ್​ಗಳಿಗೆ ಯುಪಿಐ, ಕ್ರೆಡಿಟ್​/ಡೆಬಿಟ್​ ಕಾರ್ಡ್​, ನಮ್ಮ ಮೆಟ್ರೋ ನಿಲ್ದಾಣ ಹಾಗೂ ಆರ್​ಬಿಎಲ್​ ಬ್ಯಾಂಕ್​ ಶಾಖೆಗಳಲ್ಲಿ ಸುಲಭವಾಗಿ ರೀಚಾರ್ಜ್​ ಮಾಡಬಹುದು.

    ಎಲ್ಲೆಲ್ಲಿ ಬಳಸಬಹುದು?

    ನ್ಯಾಷನಲ್​ ಕಾಮನ್​ ಮೊಬಿಲಿಟಿ ಕಾರ್ಡ್​ಗಳು ರುಪೇ ಕಾರ್ಡ್​ ಮಾದರಿಯ ಸುರತ ಪ್ರಿಪೇಡ್​ ಕಾರ್ಡ್​ಗಳಾಗಿವೆ. ಪೆಟ್ರೋಲ್​ ಬಂಕ್​, ಹೋಟೆಲ್​, ರುಪೇ ಪಾವತಿಗಳನ್ನು ಸ್ವೀಕರಿಸುವ ಅಂಗಡಿ ಹಾಗೂ ಇ&ಕಾಮರ್ಸ್​ ತಾಣಗಳಲ್ಲಿ ಬಳಸಬಹುದು. ಗೂಗಲ್​ ಪ್ಲೇ ಸ್ಟೋರ್​ ಮೂಲಕ ‘ಬಿಎಂಆರ್​ಸಿಎಲ್​ ಆರ್​ಬಿಎಲ್​ ಬ್ಯಾಂಕ್​ ಎನ್​ಸಿಎಂಸಿ’ ಆ್ಯಪ್​ ಡೌನ್​ಲೋಡ್​ ಮಾಡಬಹುದು.

    ಈಗಾಗಲೇ 40 ಸಾವಿರ ನಮ್ಮ ಮೆಟ್ರೋ ಪ್ರಯಾಣಿಕರು ನ್ಯಾಷನಲ್​ ಕಾಮನ್​ ಮೊಬಿಲಿಟಿ ಕಾರ್ಡ್​ ಬಳಸುತ್ತಿದ್ದಾರೆ. ಮುಂದಿನ ಎರಡು ವರ್ಷದಲ್ಲಿ ದೇಶಾದ್ಯಂತ 25 ಲಕ್ಷ ಬಳಕೆದಾರರನ್ನು ತಲುಪುವ ಗುರಿ ಹೊಂದಿದ್ದೇವೆ.
    > ಅಲೋಕ್​ ಸಿಂಗ್, ​ಎಜಿಎಸ್​ ಟ್ರ್ಯಾನ್ಸಾಕ್ಟ್​ ಟೆಕ್ನಾಲಜೀಸ್​ನ ಕಾರ್ಯನಿರ್ವಾಹಕ ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts