More

    ವೈದ್ಯಕೀಯ ಚಿಕಿತ್ಸೆಗೆ ಪರಿಹಾರ ವಿತರಣೆ ; ಜ್ಞಾನಪನಾ ಪತ್ರ ಪ್ರಕಟಣೆ

    ಬೆಂಗಳೂರು: ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಡ ರೋಗಿಗಳ ವೈದ್ಯಕೀಯ ಚಿಕಿತ್ಸೆಗೆ ಪರಿಹಾರ ವಿತರಿಸಲು ಅನುಸರಿಸಬೇಕಾಗಿರುವ ಕ್ರಮಗಳ ಕುರಿತು ಸರ್ಕಾರ ಅಧಿಕೃತ ಜ್ಞಾಪನಾ ಪತ್ರ ಹೊರಡಿಸಿದೆ.

    ಶಾಸಕರು ಹಾಗೂ ಸಂಸದರು ಅವರ ಮತ ಕ್ಷೇತ್ರ ಒಳಗೊಂಡ ಜಿಲ್ಲೆಯ ವ್ಯಾಪ್ತಿಯ ಸಂಬಂಧಿಸಿದ ಜಿಲ್ಲೆಯ ವಿಳಾಸದಾರರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಒದಗಿಸುವ ಕುರಿತು ಶಿಾರಸು ಮಾಡಿದಲ್ಲಿ ಅಂತಹ ಅರ್ಜಿಗಳನ್ನು ಆದ್ಯತೆ ಮೇಲೆ ಪರಿಗಣಿಸಬೇಕು. ಮುಖ್ಯಮಂತ್ರಿಗಳ ಪತ್ರದ ಮೇಲೆ ನೀಡಿರುವ ಸೂಚನೆಯಂತೆ ನಿಯಮಾನುಸಾರ ಕ್ರಮ ಕೈಗೊಂಡು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ವಿತರಿಸಬೇಕು. ಮತ ಕ್ಷೇತ್ರ ಒಳಗೊಂಡ ವ್ಯಾಪ್ತಿಯ ಜಿಲ್ಲೆಯ ವಿಳಾಸದಾರರನ್ನು ಹೊರತುಪಡಿಸಿ ಬೇರೆ ಜಿಲ್ಲೆಯ ವಿಳಾಸದಾರರಿಗೆ ಶಾಸಕರು ಹಾಗೂ ಸಂಸದರು ಶಿಾರಸು ಮಾಡಿದ್ದಲ್ಲಿ ಅಂತಹ ಪತ್ರಗಳ ಮೇಲೆ ಸೂಚನೆ ನೀಡಿದ್ದೂ ನಿಯಮಾನುಸಾರ ಸಾಮಾನ್ಯ ಪ್ರಕರಣವೆಂದು ಭಾವಿಸಿ ಪರಿಹಾರ ವಿತರಿಸಬೇಕು.

    ಮುಖ್ಯಮಂತ್ರಿಗಳು ಪರಿಹಾರ ಮಂಜೂರು ಮಾಡುವ ಸಂದರ್ಭದಲ್ಲಿ ಅರ್ಜಿ ಅಥವಾ ಶಿಾರಸು ಪತ್ರದ ಮೇಲೆ ನಮೂದಿಸಲಾಗಿರುವ ಚಿಕಿತ್ಸಾ ವೆಚ್ಚವನ್ನು ಪರಿಗಣಿಸಿ ಪರಿಹಾರ ಮಂಜೂರು ಮಾಡಿರುತ್ತಾರೆ. ಕೆಲವೊಂದು ಪ್ರಕರಣಗಳಲ್ಲಿ ಶಾಸಕರು, ಸಂಸದರು ಹಾಗೂ ಸಾರ್ವಜನಿಕರು ಪರಿಹಾರ ಕೋರಿ ಸಲ್ಲಿಸುತ್ತಿರುವ ಶಿಾರಸು ಪತ್ರದಲ್ಲಿ ಅಥವಾ ಅರ್ಜಿಯಲ್ಲಿ ನಮೂದಿಸುತ್ತಿರುವ ಚಿಕಿತ್ಸಾ ವೆಚ್ಚದ ಮೊತ್ತದಂತೆ ಅರ್ಜಿಯೊಂದಿಗೆ ಲಗತ್ತಿಸಿರುವ ಬಿಲ್ಲುಗಳ ಇಲ್ಲದೇ ಇರುವುದು ಕಂಡು ಬಂದಿವೆ. ಆದ್ದರಿಂದ ಶಿಾರಸು ಪತ್ರ ಅಥವಾ ಅರ್ಜಿಯಲ್ಲಿ ನಮೂದಿಸಿರುವ ಒಟ್ಟು ಚಿಕಿತ್ಸಾ ವೆಚ್ಚದಂತೆ ಆಸ್ಪತ್ರೆಯ ಬಿಲ್ಲುಗಳ ಲಭ್ಯವಿಲ್ಲದ ಪಕ್ಷದಲ್ಲಿ ಅಂತಹ ಪ್ರಕರಣಗಳಿಗೆ ಅನುಪಾತದಂತೆ ಲೆಕ್ಕ ಮಾಡಿ ನಿಯಮಾನುಸಾರ ಪರಿಹಾರದ ಮೊತ್ತ ಬಿಡುಗಡೆ ಮಾಡಬೇಕು ಎಂದು ಸೂಚಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts