More

    ರಾಮಮಂದಿರ ಲೋಕಾರ್ಪಣೆ ಕಾಂಗ್ರೆಸ್‌ಗೆ ಅತೃಪ್ತಿ

    ಶಿವಮೊಗ್ಗ: ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಲೋಕಾರ್ಪಣೆ ಆಗುತ್ತಿರುವುದು ಇಡಿ ವಿಶ್ವದ ಗಮನ ಸೆಳೆದಿದೆ. ಆದರೆ ಕಾಂಗ್ರೆಸ್‌ಗೆ ಮಾತ್ರ ಅದು ಅಸಮಾಧಾನ ಹಾಗೂ ಅತೃಪ್ತಿ ತಂದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.

    ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶದ ಜನ ರಾಮಮಂದಿರ ನಿರ್ಮಾಣ ಸಂಬಂಧದ ಆಗುಹೋಗುಗಳನ್ನು ಗಮನಿಸುತ್ತಿದ್ದಾರೆ. ಅದರಿಂದ ಬಿಜೆಪಿಯವರಿಗೆ ಅನುಕೂಲ ಆಗಬಹುದೆಂಬ ಭಯ ಕಾಂಗ್ರೆಸ್‌ಗೆ ಕಾಡುತ್ತಿದೆ ಎಂದು ದೂರಿದರು.
    ಜ.22ರಂದು ರಾಮಮಂದಿರದ ಉದ್ಘಾಟನೆಗೆ ಎಲ್ಲ ಪಕ್ಷದವರು ಭಾಗವಹಿಸಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಅಪೇಕ್ಷೆಯಾಗಿದೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಧಾನಮಂತ್ರಿ ಉಪವಾಸ ಆರಂಭಿಸಿ ಸೇವೆ ಮಾಡುತ್ತಿದ್ದಾರೆ. ಇನ್ನಾದರೂ ಕಾಂಗ್ರೆಸ್‌ನವರಿಗೆ ಸದ್‌ಬುದ್ಧಿ ಬಂದು ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಲಿ. ಇಲ್ಲವಾದರೆ ಈ ರೀತಿಯ ನಡವಳಿಕೆಯನ್ನು ಜನರು ಸಹಿಸಲ್ಲ. ಇದರಿಂದ ಅವರಿಗೆ ತೊಂದರೆ ಆಗಲಿದೆ ಎಂದು ಎಚ್ಚರಿಕೆ ನೀಡಿದರು.
    ರಾಮಮಂದಿರ ಉದ್ಘಾಟನೆ ಆದ ಬಳಿಕ ಹೋಗುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಉದ್ಘಾಟನಾ ಸಂದರ್ಭದಲ್ಲಿ ಹೋಗಿ ಬಂದರೆ ಒಳ್ಳೆಯದು, ಅನುಕೂಲ ಆಗುತ್ತದೆ. ಒಟ್ಟಾರೆ ಅಲ್ಲಿಗೆ ಹೋಗುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts