More

    ಕಾಂಗ್ರೆಸ್ ಒಳಗೆ ಭಿನ್ನಮತ ಸ್ಫೋಟ; ಸಾಮೂಹಿಕ ರಾಜೀನಾಮೆಗೆ ಮುಂದಾದ ಸದಸ್ಯರು!

    ದೇವನಹಳ್ಳಿ: ದೇವನಹಳ್ಳಿ ಕಾಂಗ್ರೆಸ್ ನಲ್ಲಿ ನಿನ್ನೆ ಸಾಮೂಹಿಕ ರಾಜೀನಾಮೆ ನೀಡಿದ ಪ್ರಸಂಗ ನಡೆದಿದ್ದು ಟಿಕೆಟ್ ಹಂಚಿಕೆ ನಡೆಯುವ ಮುನ್ನವೇ ಭಿನ್ನಮತ ಸ್ಫೊಟಗೊಂಡಿದೆ.

    ಕೆಎಚ್ ಮುನಿಯಪ್ಪಗೆ ಟಿಕೆಟ್ ನೀಡದಂತೆ ಕಾಂಗ್ರೆಸ್ ಅಧ್ಯಕ್ಷರಿಂದ ಹಿಡಿದು ಪಧಾಧಿಕಾರಿಗಳವರೆಗೂ ಸಾಮೂಹಿಕವಾಗಿ ರಾಜಿನಾಮೆ ನೀಡಲು ನಿನ್ನೆ ಮುಂದಾಗಿದ್ದರು. ಇದೀಗ ದೇವನಹಳ್ಳಿಯ ಕಾಂಗ್ರೆಸ್ ಒಳಗೆ ಅನೇಕ ಬಣಗಳು ಹುಟ್ಟಿಕೊಂಡಿದ್ದು ಕೆ.ಹೆಚ್.ಮುನಿಯಪ್ಪ ಪರವಾಗಿ ಕೆಲವರು ಬ್ಯಾಟ್ ಬೀಸುತ್ತಿದ್ದರೆ ವೆಂಕಟಸ್ವಾಮಿ, ಶಾಂತಕುಮಾರ್, ಕೆಪಿಸಿಸಿ ಮುಖಂಡ ಶ್ರೀನಿವಾಸ, ಹೆಬ್ಬಾಳ ಆನಂದ್ ಮುಂತಾದವರ ಬಣ ತಲೆಯೆತ್ತಿವೆ. ಚನ್ನಹಳ್ಳಿ ರಾಜಣ್ಣ, ಎಸ್.ಪಿ. ಮುನಿರಾಜು, ಸೋಮಶೇಖರ್ ಗೋಕರೆ ಗೋಪಾಲ್ ಮೊದಲಾದವರು ಕೆ.ಹೆಚ್.ಮುನಿಯಪ್ಪ ಪರ‌ವಾಗಿದ್ದಾರೆ ಎನ್ನಲಾಗಿದೆ.

    ಈ ನಡುವೆ ಕಾಂಗ್ರೆಸ್ ನಿಷ್ಠರು, ‘ಪಕ್ಷದ ತೀರ್ಮಾನಕ್ಕೆ ನಾವು ಬದ್ದರಾಗಿದ್ದೇವೆ. ಪಕ್ಷ ಯಾರನ್ನು ನಿಲ್ಲಿಸಿದರು ಗೆದ್ದು ಬರುತ್ತೇವೆ. ಕೆ.ಎಚ್ ಮುನಿಯಪ್ಪ ಬಂದರೆ ದೇವನಹಳ್ಳಿ ಗೆ ತುಂಬಾನೆ ಅನುಕೂಲ. ದಶಕದಿಂದ ದೇವನಹಳ್ಳಿಗೆ ಶಾಸಕರಿಲ್ಲ, ಕಾಂಗ್ರೆಸ್ ಮುಖಂಡರು ಒಗ್ಗಟ್ಟಾಗಿ ದುಡಿಯಬೇಕು. ಇಲ್ಲವಾದರೆ ಮನೆ ಜಗಳ ಅನ್ಯರ ಗೆಲುವಿಗೆ ಕಾರಣ ಆಗುತ್ತದೆ; ಎಂದು ಅಸಮಾಧಾನ ಹೊರ ಹಾಕಿದ್ದಾರೆ.

    ಒಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ, ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಒಳಗೆ ಒಳಜಗಳ ಹೆಚ್ಚಾಗಿದ್ದು ಮನೆಯೊಂದು ಅನೇಕ ಬಾಗಿಲು ಎನ್ನುವಂತಹ ಪರಿಸ್ಥಿರಿ ನಿರ್ಮಾಣ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts