More

    ಕ್ಯಾಪ್ಸಿಕಂ ಬೆಳೆಗೆ ರೋಗ ಬಾಧೆ, ಅನ್ನದಾತನಿಗೆ ತಪ್ಪದ ಸಂಕಷ್ಟ

    ನಂದಗುಡಿ: ಹೋಬಳಿ ವಿವಿಧೆಡೆ ನಾಟಿ ಮಾಡಿರುವ ದೊಣ್ಣೆಮೆಣಸು ಬೆಳೆಗೆ ರೋಗ ಬಾಧಿಸುತ್ತಿದ್ದು, ರೈತರನ್ನು ಕಂಗೆಡಿಸಿದೆ.
    ಹೋಬಳಿಯ ದಿನ್ನಹಳ್ಳಿ, ಸಿದ್ದನಹಳ್ಳಿ, ಕೊರಟಿ, ಕಾರಹಳ್ಳಿ, ಅರೆಹಳ್ಳಿ, ನೆಲವಾಗಿಲು, ಹಿಂಡಿಗನಾಳ, ಬನಹಳ್ಳಿ, ವಡ್ಡಹಳ್ಳಿ, ಶಿವನಾಪುರ, ನಂದಗುಡಿ, ಹಳೇವೂರು, ಇಟ್ಟಸಂದ್ರ ಕರಪನಹಳ್ಳಿ, ಸತ್ಯವಾರ ಸುತ್ತಮುತ್ತಲಿನ ಹಳ್ಳಿಗಳಲ್ಲಿ 250 ಎಕರೆಗೂ ಅಧಿಕ ಪ್ರದೇಶಗಳಲ್ಲಿ ಕ್ಯಾಪ್ಸಿಕಂ, ಬಜ್ಜಿ ಮೆಣಸಿನಕಾಯಿ, ಚಿಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತಿದೆ.

    ಆದರೆ ಬಹುತೇಕ ಜಮೀನಿನಲ್ಲಿ ಗಿಡಕ್ಕೆ ಮುದ್ರೆ ರೋಗ, ಬೂದಿರೋಗ, ಕರಿ ಹೇನು ಬಾಧೆ ಹೆಚ್ಚಾಗಿದೆ.
    ಕರೊನಾ ಸಂಕಷ್ಟದ ನಡುವೆ ಸಾಲ ಮಾಡಿ ಕೃಷಿ ಚಟುವಟಿಕೆಗೆ ಮುಂದಾಗಿದ್ದ ರೈತನಿಗೆ ರೋಗ ಬಾಧೆ ಉಲ್ಬಣವಾಗಿರುವುದು ಅಪಾರ ನಷ್ಟಕ್ಕೆ ಕಾರಣವಾಗಿದೆ.

    ತರಕಾರಿ ಬೆಳೆಗಳಿಗೆ ವಿಮೆ ಇಲ್ಲ. ಹವಾಮಾನ ವಿಕೋಪಕ್ಕೆ ತುತ್ತಾಗಿದ್ದ ರೈತರಿಗೆ ಪರಿಹಾರ ಸೌಲಭ್ಯ ಸಿಗುತ್ತದೆ. ರೋಗ, ಕೀಟ ಬಾಧೆ ಸಂಕಷ್ಟಕ್ಕೆ ಹಾನಿಯಾಗಿರುವ ರೈತರಿಗೆ ಪರಿಹಾರ ನೀಡುವ ಕುರಿತು ಸರ್ಕಾರದಿಂದ ಘೋಷಣೆಯಾಗಿಲ್ಲ.
    ಪ್ರಶಾಂತ್, ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ, ಹೊಸಕೋಟೆ

    ಸಾವಿರ ರೂ. ವೆಚ್ಚ ಮಾಡಿ ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ನಾಟಿ ಮಾಡಲಾಗಿತ್ತು. ಗಿಡಗಳಿಗೆ ಮುದ್ರೆ ರೋಗ ಬಂದು ಬೆಳೆ ಸಂಪೂರ್ಣ ಹಾಳಾಗಿದೆ. ಸರ್ಕಾರ ರೈತರಿಗೆ ಸಹಾಯ ಮಾಡಲು ಮುಂದಾಗಬೇಕು.
    ಗೌರಮ್ಮ, ಮೆಣಸಿನಕಾಯಿ ಬೆಳೆಗಾರ, ನಂದಗುಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts